ಪ್ರತಿಯೊಬ್ಬ ವ್ಯಕ್ತಿಗೂ ಒಬ್ಬರಲ್ಲ ಒಬ್ಬರು ಸ್ಪೂರ್ತಿ, ಪ್ರೇರಣೆ ಆಗಿರುತ್ತಾರೆ. ಅಂತೆಯೇ ಖ್ಯಾತ ನಿರೂಪಕಿ ಅನುಶ್ರೀ ಅವರಿಗೂ ಸಹ ಒಬ್ಬ ಮಹಾನ್ ವ್ಯಕ್ತಿ ಸ್ಪೂರ್ತಿ. ಆ ವ್ಯಕ್ತಿ ಕನ್ನಡ ಸಿನಿಮಾ ರಂಗಕ್ಕೆ ಹೊಸತನ ತಂದ ಸೃಜನಶೀಲ ಕಲಾವಿದ, ನಿರ್ದೇಶಕ ಹಾಗೂ ಜನಪರ ಕಾಳಜಿಯುಳ್ಳ ಅದ್ಭುತ ವ್ಯಕ್ತಿ. ಇಂದು ಆ ವ್ಯಕ್ತಿ ನಮ್ಮೊಂದಿಗೆ ಇಲ್ಲ…! ನಮ್ಮನ್ನೆಲ್ಲ ಅಗಲಿದ ಆ ಗಣ್ಯ ನಟ ಅನುಶ್ರೀ ಅವರಿಗೆ ಸ್ಪೂರ್ತಿ.
ಅವರೇ ಎಲ್ಲರ ಪ್ರೀತಿಯ ಶಂಕರ್ ನಾಗ್. ಅನುಶ್ರೀ ಅವರಿಗೆ ಶಂಕರ್ ನಾಗ್ ಅವರೇ ಸ್ಪೂರ್ತಿ. ಸಮಯ ಪಾಲನೆಗೆ ಶಂಕರಣ್ಣನೇ ಗುರು.
ಅಂದಹಾಗೆ ಶಂಕರ್ ನಾಗ್ ಅವರನ್ನು ಸ್ಪೂರ್ತಿಯಾಗಿ ಆರಾಧಿಸಲು ಕಾರಣ ಕ್ರೇಜಿಸ್ಟಾರ್ ರವಿಚಂದ್ರನ್.
ಹೌದು ಕನಸುಗಾರ ರವಿಚಂದ್ರನ್ ಒಮ್ಮೆ ಸಂದರ್ಶನವೊಂದರಲ್ಲಿ ಶಂಕರ್ ನಾಗ್ ಅವರ ಬಗ್ಗೆ ಮಾತನಾಡುತ್ತಾ, ಅವರ ಸಮಯಪಾಲನೆ ಬಗ್ಗೆ ಹೇಳಿದ್ದರಂತೆ.
ಅಂದು ರವಿಚಂದ್ರನ್ , ‘ಸ್ಯಾಂಡಲ್ ವುಡ್ ನಲ್ಲಿ ತಾನು 24 ಗಂಟೆ ಹೀಗೆ ಇರಬೇಕು ಎಂದು ಟೈಮ್ ಅನ್ನು ನಿಗಧಿ ಮಾಡಿಕೊಂಡು ಅದನ್ನು ಚಾಚು ತಪ್ಪದೆ ಪಾಲಿಸುತ್ತಿದ್ದ ಏಕೈಕ ವ್ಯಕ್ತಿ ಶಂಕರ್ ನಾಗ್’ ಎಂದು ಹೇಳಿದ್ದರಂತೆ. ಆ ಮಾತು ಅನುಶ್ರೀ ಅವರ ಮೇಲೆ ಪರಿಣಾಮ ಬೀರಿತು. ಅಂದಿನಿಂದ ಅವರು ಟೈಮ್ ಗೆ ಪ್ರಾಮುಖ್ಯತೆ ನೀಡಲಾರಂಭಿಸಿದರಂತೆ.
ಇದನ್ನು ಸ್ವತಃ ಅವರೇ ಖಾಸಗಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.