ಅನ್ವೇಷಿ ಬಗ್ಗೆ ತಾರಕ ರತ್ನ ಹೇಳಿದ್ದೇನು…?

Date:

ರಘುಭಟ್, ತಿಲಕ್ ಶೇಖರ್ ಅಭಿನಯದ ಬಹುನಿರೀಕ್ಷಿತ ಸಿನಿಮಾ ‘ಅನ್ವೇಷಿ’ ಬಗ್ಗೆ ತೆಲುಗು ನಟ ನಂದಮೂರಿ ತಾರಕ ರತ್ನ ಶುಭಕೋರಿದ್ದಾರೆ.

ಇದೇ 8ರಂದು ತೆರೆಕಾಣಲಿರುವ ಅನ್ವೇಷಿ ಸಿನಿಮಾದ ಟ್ರೇಲರ್ ನೋಡಿರುವ ತಾರಕ ರತ್ನ, ಟ್ರೇಲರ್ ನೋಡಿದ್ದೇನೆ. ಸಿನಿಮಾದ ಬಗ್ಗೆ ನನಗೂ ಕುತೂಹಲವಿದೆ. ನನ್ನ ಗೆಳೆಯರಾದ ರಘುಭಟ್, ತಿಲಕ್ ಅಭಿನಯದ ಚಿತ್ರ. 100% ಮನರಂಜನೆ ನೀಡುತ್ತೆ ಎನ್ನುವ ಭರವಸೆ ನನ್ನದು. ಸಿನಿಮಾವನ್ನು ಮಿಸ್ ಮಾಡ್ದೇ ನೋಡಿ ಎಂದು ಹೇಳಿದರು.


ಇಂದು ಸಂಜೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಎಂಟನೇ ತಾರೀಕಿನ ತನಕ ನಾನಿಲ್ಲೇ ಇದ್ದರೆ ಖಂಡಿತಾ ಫಸ್ಟ್ ಡೇ ಫಸ್ಟ್ ಶೋ ನೋಡ್ತೀನಿ. ಇಲ್ಲವಾದ್ರೆ ಖಂಡಿತಾ ಸಿನಿಮಾವನ್ನು ತರಿಸಿಕೊಂಡು ನೋಡುವೆ ಎಂದರು.
ತಿಲಕ್ ಮಾತನಾಡಿ, ಕಾಲೇಜಿನಲ್ಲಿ ನಡೆಯುವ ರ್ಯಾಗಿಂಗ್ ಅನಾಹುತಗಳ ಒಂದು ಎಳೆಯನ್ನು ಇಟ್ಟುಕೊಂಡು ಸಿನಿಮಾ ಮಾಡಲಾಗಿದೆ. ಒಂದೊಳ್ಳೆ ಮೆಸೇಜ್ ಇದೆ. ಥೀಯೇಟರಿಗೆ ಬಂದ ನಿಮಗೆ ಖಂಡಿತಾ ಮನರಂಜನೆ ಸಿಗುತ್ತೆ. ನೀವು ಕೊಟ್ಟ ದುಡ್ಡಿಗೆ ಮೋಸವಿಲ್ಲ ಎಂದು ಹೇಳಿದರು.


ರಘುಭಟ್ ಮಾತನಾಡಿ, ರಾಜ್ಯದ ನಾನಾ ಕಡೆಗಳಲ್ಲಿ ಚಿತ್ರೀಕರಣ ನಡೆದಿದೆ. ಇದೊಂದು ಹಾರರ್ ಕಮರ್ಷಿಯಲ್ ಮೂವಿ. ಕುಟುಂಬ ಸಮೇತ ಚಿತ್ರಮಂದಿರಕ್ಕೆ ಬಂದು ನೋಡಿ. ನಿಮಗೆ ಸಿನಿಮಾ ಇಷ್ಟವಾಗುತ್ತೆ. ನಿಮ್ಮ ಪ್ರೀತಿ, ಪ್ರೋತ್ಸಾಹ ನಮ್ಮಮೇಲಿರಲಿ ಎಂದರು.
ನಾಯಕ ನಟಿ ದಿಶಾ ಪೂವಯ್ಯ ಮಾತನಾಡಿ, ರಘುಭಟ್ ಅವರ ಜೊತೆ ನಟಿಸಿರುವ ಮೊದಲ ಸಿನಿಮಾ ಇದು. ಕಾಲೇಜು ಲೈಫ್, ಲವ್ ಎಲ್ಲವೂ ಸಿನಿಮಾದಲ್ಲಿದೆ. ರ್ಯಾಗಿಂಗ್ ಅನಾಹುತದ ಬಗ್ಗೆ ಮೆಸೇಜ್ ಇದೆ. ಏನು? ಹೇಗೆ ಎನ್ನೋದನ್ನು ಚಿತ್ರಮಂದಿರದಲ್ಲೇ ನೋಡಬೇಕು ಎಂದು ಹೇಳಿದ್ರು.


ಅನ್ವೇಷಿ ವೇಮುಗಲ್ ಜಗನ್ನಾಥ್ ರಾವ್ ನಿರ್ದೇಶನದ ಚಿತ್ರ. ವಿ.ಜಯರಾಂ ಚಿತ್ರಕ್ಕೆ ಬಂಡವಾಳ ಹಾಕಿದ್ದಾರೆ. ದಿಶಾ ಪೂವಯ್ಯ ಅವರಲ್ಲದೆ ರಮ್ಯಾ ಬಾರ್ನ, ಅನಿ ಅಗರ್ ವಾಲ್ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

Share post:

Subscribe

spot_imgspot_img

Popular

More like this
Related

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು

ಪ್ರಜ್ವಲ್ ವಿಡಿಯೋ ವೈರಲ್ ಕೇಸ್: SIT ಚಾರ್ಜ್​ಶೀಟಲ್ಲಿ ಸ್ಫೋಟಕ ಅಂಶ ಬಯಲು ಹಾಸನ:...

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ

ಇರಾನ್–ಇಸ್ರೇಲ್ ಯುದ್ಧ ಎಫೆಕ್ಟ್: ರಾಜ್ಯದಲ್ಲಿ LPG ಸಂಕಷ್ಟ, ಹೋಟೆಲ್ಗಳಿಗೆ ಬೀಗ ಬೆಂಗಳೂರು: ಇರಾನ್–ಇಸ್ರೇಲ್...

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು?

ಫುಡ್ ಪಾಯಿಸನ್‌ ಗೆ ಮದ್ಯಪಾನ ಪರಿಹಾರವೇ? ತಜ್ಞರು ಹೇಳೋದೇನು? “ಭಾರಿ ಊಟದ ನಂತರ...

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ

ಶ್ರೀಲಂಕಾ ನ್ಯಾಯಮೂರ್ತಿ ಅರ್ಜಿ: ಗೂಗಲ್, ಕೇಂದ್ರ ಸರ್ಕಾರದಿಂದ ಆಕ್ಷೇಪ: ವಿಚಾರಣೆ ಮುಂದೂಡಿಕೆ ಬೆಂಗಳೂರು:...