ವಯಸ್ಸಿನ್ನೂ 22, ಸಾಧಿಸಿದ್ದು ಬೆಟ್ಟದಷ್ಟು – ಈಕೆ ಕ್ರೀಡಾಲೋಕದ ಮಿಂಚು, ಯೂತ್ ಐಕಾನ್!
ಅಪೂರ್ವಿ ಚಂದಿಲಾ. ಭಾರತೀಯ ಏರ್ ರೈಫೆಲ್ನಲ್ಲಿ ‘ ಅಪೂರ್ವ ’ ಸಾಧನೆ ಮಾಡಿದ ಸಾಧಕಿ. ಅತ್ಯಂತ ಕಿರಿ ವಯಸ್ಸಿನಲ್ಲೇ ಚಿನ್ನದ ಪದಕ ಗೆದ್ದ ಪೋರಿ. ಅದರಲ್ಲೂ ಬರೀ 22 ವಯಸ್ಸಿನಲ್ಲೇ 4 ಪದಕ ಗೆದ್ದ ಕುವರಿ ಎಂದು ಭಾರತೀಯ ಕ್ರೀಡಾ ಲೋಕದಲ್ಲಿ ದೊಡ್ಡ ಹೆಸರು ಮಾಡಿದ್ದಾಳೆ. ಸದ್ಯ ರಾಜಸ್ಥಾನದ ಯೂತ್ ಐಕಾನ್.
ಅಪೂರ್ವಿ ಹುಟ್ಟಿದ್ದು 1993, ಜನವರಿ 4ರಂದು ರಾಜಸ್ಥಾನದ ಜೈಪುರದಲ್ಲಿ. ತಂದೆ ಕುಲ್ದೀಪ್ ಸಿಂಗ್ ಚಂಡಿಲಾ, ತಾಯಿ ಬಿಂದು ರಾಥೋಡ್. ತಂದೆ ಕುಟುಂಬದ ನಿರ್ವಹಣೆಗಾಗಿ ಸಣ್ಣ ಹೋಟೆಲ್ ವೊಂದನ್ನು ನಡೆಸುತ್ತಿದ್ದರು. ಇನ್ನು ಅಪೂರ್ವಿ ತಮ್ಮ ಪ್ರಾಥಮಿಕ ಶಿಕ್ಷಣವನ್ನ ಜೈಪುರದ ಮಹಾರಾಣಿ ಗಾಯಿತ್ರಿ ದೇವಿ ಶಾಲೆಯಲ್ಲಿ ಪೂರ್ಣಗೊಳಿಸಿದ್ರು. ಡೆಲ್ಲಿ ವಿಶ್ವವಿದ್ಯಾನಿಲಯದ ಜೀಸಸ್ ಅಂಡ್ ಮೇರಿ ಕಾಲೇಜ್ನಲ್ಲಿ ಸಮಾಜಶಾಸ್ತ್ರ ವಿಷಯದಲ್ಲಿ ಪದವಿ ಪಡೀತಾರೆ.
ಇನ್ನು 2012, ಅಂದರೆ ಮೊದಲ ಬಾರಿಗೆ ದೆಹಲಿಯಲ್ಲಿ ನಡೆದ 100 ಮೀಟರ್ ಏರ್ ರೈಫಲ್ ನ್ಯಾಷನಲ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕವನ್ನ ಗಳಿಸ್ತಾರೆ. 2014ರಲ್ಲಿ ನೆದರ್ನ್ಯಾಂಡ್ನಲ್ಲಿ ನಡೆದ ಇಂಟರ್ಶೂಟ್ ಚಾಂಪಿಯನ್ಷಿಪ್ನಲ್ಲಿ ವೈಯಕ್ತಿಕ 2 ಹಾಗೂ ಭಾರತ ತಂಡದ ಪರ ಎರಡು ಪದಕ ಸೇರಿದಂತೆ ಒಟ್ಟು 4 ಪದಕಗಳನ್ನ ಗೆಲ್ಲುವ ಮೂಲಕ ಶೂಟಿಂಗ್ನಲ್ಲಿ ಭಾರತೀಯರ ಕಣ್ಮಣಿಯಾಗ್ತಾರೆ.
ಅದೇ ವರ್ಷ, 2014ರಲ್ಲಿ ಗ್ಲ್ಯಾಸ್ಕೋದಲ್ಲಿ ನಡೆದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತವನ್ನ ಏರ್ ರೈಫೆಲ್ ಶೂಟಿಂಗ್ನಲ್ಲಿ ಪ್ರತಿನಿಧಿಸಿ, ಪೈನಲ್ ಪ್ರವೇಶಿಸಿದ ಅಪೂರ್ವಿ ಚಂಡಿಲಾ, 206.7 ಪಾಯಂಟ್ಗಳನ್ನ ಕಲೆ ಹಾಕುವ ಮೂಲಕ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಹೊಸ ದಾಖಲೆಯನ್ನ ಬರೀತಾರೆ. ಏರ್ ರೈಫೆಲ್ ನಲ್ಲಿ ಭಾರತವನ್ನು ಇಡೀ ವಿಶ್ವವೇ ನೋಡುವಂತೆ ಸಾಧನೆ ಮರೆಯುತ್ತಾಳೆ.
2016ರ ರಿಯೋ ಒಲಂಪಿಕ್ಸ್ನಲ್ಲಿ ಮಹಿಳಾ ವಿಭಾಗದ 10ಮೀಟರ್ ಏರ್ ರೈಪೆಲ್ನಲ್ಲಿ ಭಾಗವಹಿಸಲು ಭಾರತದ ಪರ ಅರ್ಹತೆ ಪಡೆದ ಅಪೂರ್ವಿ, 51 ಸ್ಪರ್ಧಿಗಳ ಕ್ರೀಡಾಕೂಟದಲ್ಲಿ ಅರ್ಹತಾ ಸುತ್ತಿನಲ್ಲಿ 34ನೇ ಸ್ಥಾನ ಗಳಿಸುವ ಮೂಲಕ ಟೂರ್ನಿಯಿಂದ ನಿರ್ಗಮಿಸ್ತಾರೆ. ಕಳೆದ 2018ರ ಏಷ್ಯಾನ್ ಗೇಮ್ಸ್ನಲ್ಲಿ ರವಿಕುಮಾರ್ ಜೊತೆಗೂಡಿ, 10ಮೀಟರ್ ಏರ್ ರೈಫೆಲ್ನಲ್ಲಿ ಕಂಚಿನ ಪದಕ ಗಳಿಸ್ತಾರೆ.
ಆಮೇಲೆ ನೋಡಿ, ಅಪೂರ್ವಿ ಅವರು, ಭಾರತೀಯ ಮಾಜಿ ರಾಷ್ಟ್ರೀಯ ಚಾಂಪಿಯನ್ ರಾಖೇಶ್ ಮನ್ಪತ್ ಅವರ ಬಳಿ ಅಭ್ಯಾಸ ಆರಂಭಿಸುತ್ತಾರೆ. ನಂತರದಲ್ಲಿ ಡೆಲ್ಲಿಯಲ್ಲಿ ಕಳೆದ 2018ರಲ್ಲಿ ನಡೆದ ಐ.ಎಸ್.ಎಸ್.ಎಫ್. ವಿಶ್ವಕಪ್ನಲ್ಲಿ ಚಿನ್ನದ ಪದಕವನ್ನ ಗಳಿಸುವ ಮೂಲಕ ಶೂಟಿಂಗ್ನಲ್ಲಿ ಇಡೀ ದೇಶದ ಗಮನ ಸೆಳೆಯುತ್ತಾರೆ ಕ್ರೀಡಾ ಸಾಧಕಿ ಅಪೂರ್ವಿ ಅವರು.
ಇನ್ನು ತನ್ನ 22ನೇ ವಯಸ್ಸಿಗೆ ಅತಿದೊಡ್ಡ 4 ರಾಷ್ಟ್ರೀಯ ಪ್ರಶಸ್ತಿ ಗೆದ್ದ ಅಪೂರ್ವಿ ಚಂಡಿಲಾರ ಸಾಧನೆಯನ್ನ ಗುರುತಿಸಿ, ರಾಜಸ್ಥಾನ ಸರ್ಕಾರ, 2014ರ ಚುನಾವಣೆಯಲ್ಲಿ ಯೂತ್ ಐಕಾನ್ ಆಫ್ ದಿ ಸ್ಟೇಟ್ ಎಂದು ಘೋಷಿಸಿತ್ತು. ಅಷ್ಟೇ ಅಲ್ಲ, ಚುನಾವಣಾ ರಾಯಭಾರಿಯನ್ನಾಗಿ ಕೂಡ ನೇಮಿಸಿತ್ತು. ಏನೇ ಹೇಳಿ, ಸಾಧನೆಗೆ ಯಾವುದೇ ವಯಸ್ಸಿನ ಅಡ್ಡಿಯಾಗದು ಎಂಬ ಮಾತಿಗೆ ಅಪೂರ್ವಿ ಚಂಡಿಲಾ ಸ್ಪಷ್ಟ ಉದಾಹರಣೆಯಾಗಿದ್ದಾರೆ.