No menu items!
11.9 C
Munich
Thursday, April 30, 2026

‘ರೌಡಿಫೆಲೋ’ ಆಗ್ತಿದ್ದಾರೆ ಆರ್ .ಜೆ ರೋಹಿತ್ ..! ಹೊಸ ಸಾಹಸಕ್ಕೆ ಕೈ ಹಾಕಿದ ‘ಬಕಾಸುರ’ ..!

Must read

ಆರ್ ಜೆ ರೋಹಿತ್ …ತಮ್ಮ ಖಡಕ್ ಧ್ವನಿಯಿಂದ ಜನಜನಿತರಾದವರು . ರೇಡಿಯೋ ಜಾಕಿಯಾಗಿ ಮನೆಮಾತಾದ ರಾಕ್ ಸ್ಟಾರ್ ರೋಹಿತ್ , ಬಿಗ್ ಬಾಸ್ ನಲ್ಲಿ ಸ್ಪರ್ಧಿಸಿ, ಬಳಿಕ ಸಿನಿಯಾನ ಶುರುಮಾಡಿದ್ರು. ನಟನಾಗಿ, ನಾಯಕ ನಟನಾಗಿ ಗುರುತಿಸಿಕೊಂಡ ಅವರು, ನಿರ್ಮಾಣದ ಹೊಣೆಯನ್ನೂ ನಿಭಾಯಿಸಿದ್ದಾರೆ. ಇದೀಗ ಸಿನಿಪಯಣದ ಹೊಸ ಸಾಹಸಕ್ಕೆ ಕೈ ಹಾಕುತ್ತಿದ್ದಾರೆ . ನಟನೆ, ‌ನಿರ್ಮಾಣದ ಜೊತೆಗೆ ಆ್ಯಕ್ಷನ್ ಕಟ್ ಹೇಳಲಿದ್ದಾರೆ ಆರ್ .ಜೆ ರೋಹಿತ್ .

ರೌಡಿ ಫೆಲೋ ಆದ ರೋಹಿತ್ ! : ಬಿಗ್ ಬಾಸ್ ಗೆ ಹೋಗಿಬಂದ ಬಳಿಕ ಬಾಂಬೆ ಮಿಠಾಯಿ ಅನ್ನೋ ಸಿನಿಮಾದಲ್ಲೊಂದು ಪುಟ್ಟ ಪಾತ್ರ ಮಾಡಿದ ರೋಹಿತ್ ನಂತರ 2016ರಲ್ಲಿ ತೆರೆಕಂಡ , ನವನೀತ್ ನಿರ್ದೇಶನದ ಕರ್ವ ಸಿನಿಮಾದಲ್ಲಿ ಮುಖ್ಯಭೂಮಿಕೆಯಲ್ಲಿ ಅಭಿನಯಿಸಿದ್ರು. ಅದಾದ ನಂತರ ಕರ್ವ ಡೈರೆಕ್ಟರ್ ನವನೀತ್ ನಿರ್ದೇಶನದ ಬಕಾಸುರ ಸಿನಿಮಾದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ಚಿತ್ರ ನಿರ್ಮಾಣವನ್ನೂ ಮಾಡಿದರು . ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಅಭಿನಯದ ‘ರುಸ್ತುಂ’ನಲ್ಲಿ ಖಡಕ್ ಪೊಲೀಸ್ ಅಧಿಕಾರಿಯಾಗಿ ಸದ್ದು ಮಾಡಿದರು . ಹೀಗೆ ನಟನೆಯಲ್ಲಿ ಬ್ಯುಸಿ ಇರುವುದರ ಜೊತೆಗೆ ನಿರ್ಮಾಣದತ್ತವೂ ಮುಖಮಾಡಿರುವ ರೋಹಿತ್ ಇದೀಗ ನಿರ್ದೇಶನ ಮಾಡಲು ಹೊರಟಿದ್ದಾರೆ.


ರೌಡಿ ಫೆಲೋ ಎಂಬ ಸಿನಿಮಾಕ್ಕೆ ರೋಹಿತ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಈ ಸಿನಿಮಾಕ್ಕೆ ನಾಯಕಿಯಾಗಿ ವಿದ್ಯಾ ಪ್ರದೀಪ್ ಆಯ್ಕೆಯಾಗಿದ್ದಾರೆ. ತಾಯಿ – ಮಗನ ಸೆಂಟಿಮೆಂಟ್ , ಯುವಕನೊಬ್ಬನ ಕೋಪದಿಂದ ಸಂಭವಿಸುವ ಘಟನೆ ಚಿತ್ರದ ತಿರುಳಾಗಿದ್ದು, ತಾಯಿ ಪಾತ್ರದಲ್ಲಿ ಬಹುಭಾಷಾ ನಟಿ ಊರ್ವಶಿ ಅಭಿನಯಿಸಲಿದ್ದಾರೆ. ಬಹುಭಾಷಾ ನಟ ಪ್ರಕಾಶ್ ರಾಜ್ ಮುಖ್ಯಪಾತ್ರವೊಂದರಲ್ಲಿ ನಟಿಸುತ್ತಿದ್ದಾರೆ. ದಿಯಾ ಪ್ರೊಡ್ಯುಸರ್ ಕೃಷ್ಣ ಚೈತನ್ಯ ರೌಡಿಫೆಲೋಗೆ ಬಂಡವಾಳ ಹಾಕುತ್ತಿದ್ದಾರೆ.

ರಾಮಾ ರಾಮಾ ರೇ ಸಿನಿಮಾಟೋಗ್ರಾಫರ್ ಲವಿತ್ ಸಿನಿಮಾಟೋಗ್ರಫಿ ಹೊಣೆ ಹೊತ್ತಿದ್ದಾರೆ. ರವಿ ಬಸ್ರೂರ್ ಹಿನ್ನೆಲೆ ಸಂಗೀತವಿದೆ. ಹಾಡುಗಳಿಗೆ ನಕುಲ್ ಮ್ಯೂಸಿಕ್ ಕಂಪೋಸ್ ಮಾಡಲಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.


ಕೆಜಿಎಫ್ ಡೈರೆಕ್ಟರ್ ಪ್ರಶಾಂತ್ ನೀಲ್ 2018ರಲ್ಲಿ ತನ್ನನ್ನು ಕರೆದು ಪಾತ್ರ ಒಪ್ಪಿಕೊಳ್ಳುವ ಮುನ್ನ ನಾನು ಸ್ಕ್ರಿಪ್ಟ್ ನೋಡಿ ಹೇಳ್ತೀನಿ ಅಂದಿದ್ರು. ಅಂತೆಯೇ ನಾನು ಅವರಿಗೆ ನಾಲ್ಕೈದು ಸ್ಕ್ರಿಪ್ಟ್ ಗಳನ್ನು ಕಳುಹಿಸಿದ್ದೆ , ಅವರು ಈ ಸ್ಕ್ರಿಪ್ಟ್ ಚೆನ್ನಾಗಿದೆ ಮಾಡು ಅಂದ್ರು. ಕಾರಣಾಂತರಗಳಿಂದ ನಾನೇ ನಿರ್ದೇಶನ ಮಾಡುವಂತಾಯಿತು. ಕಥೆ ಕೇಳಿದ ಮೇಲೆ ಈ ಸಿನಿನಾಕ್ಕೆ ರೌಡಿಫೆಲೋ ಟೈಟಲ್ ಸೂಕ್ತ ಅನಿಸಿತು ಅಂತ ರೋಹಿತ್ ಹೇಳಿದ್ದಾರೆ.

ಗಂಗೂಲಿ, ಧೋನಿ, ಕೊಹ್ಲಿ ಮಾತ್ರ ಯಶಸ್ವಿ ನಾಯಕರಲ್ಲ ; ದ್ರಾವಿಡ್ ಕೂಡ ಉತ್ತಮ ಕ್ಯಾಪ್ಟನ್ : ಗಂಭೀರ್

ಕೊರೋನಾ ‘ಪತಂಜಲಿ’ ಔಷಧಕ್ಕೆ ಬ್ರೇಕ್ ..!

IAS ಅಧಿಕಾರಿ ವಿಜಯಶಂಕರ್ ಆತ್ಮಹತ್ಯೆ

ಹಟ್ಟಿಕಾಪಿ’ ಹುಟ್ಟಿದ್ದು ಹೇಗೆ? ಬೈಕ್ ಪೆಟ್ರೋಲ್ ಗೆ ಕಾಸಿರದ ಕನ್ನಡಿಗ ಉದ್ಯಮಿಯಾದ ಸ್ಟೋರಿ!

ಮೊಡವೆಗೆ ಆ ಕ್ರೀಮ್ ಈ ಕ್ರೀಮ್ ಯಾಕೆ? ನಿಮ್ಮ ಮನೆಯಲ್ಲೇ ಇವೆ ಆ ಮದ್ದುಗಳು!

ಗುಡ್ ನ್ಯೂಸ್ : ಕೊರೋನಾಗೆ ‘ಪತಂಜಲಿ’ ಮದ್ದು ..!

ಈಕೆ ಕಾಲುಗಳೇ ಇಲ್ಲದ ಈಜುಗಾರ್ತಿ ..!

 ಸಚಿವ ಸುಧಾಕರ್ ಪತ್ನಿ, ಮಗಳಿಗೂ ಕೊರೋನಾ ದೃಢ

ಇಲ್ಲಿದೆ ಗಂಡಸರ ಮೊಲೆತೊಟ್ಟಿನ ಗುಟ್ಟು ..!

ಉಗ್ರರ ಹುಟ್ಟಡಗಿಸಿದ ಲೇಡಿ ಸಿಂಗಂ ರಿಯಲ್ ಸ್ಟೋರಿ  

ಇವರು 800 ಮಕ್ಕಳ ಮಹಾತಾಯಿ …!

“ಆಫ್ ಸ್ಕ್ರೀನಲ್ಲೂ ಚೆನ್ನಾಗಿ ನಟಿಸ್ತೀರಿ’’ : ಸುಶಾಂತ್ ಕುರಿತ ಸಲ್ಮಾನ್ ಟ್ವೀಟ್ ಗೆ ನೆಟ್ಟಿಗರು ಕಿಡಿ

ಯುವ ಪ್ರತಿಭೆಗಳ ಆಶಾಕಿರಣ ‘ಉನ್ನತಿ’ ..! 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ವಿಜ್ಞಾನಿಯಾಗಲಿದ್ದವರು ಸ್ವಾಮೀಜಿಯಾದ್ರು – ಶ್ರೀ ನಿರ್ಮಲಾನಂದನಾಥ ಸ್ವಾಮೀಜಿಯವರ ಸ್ಟೋರಿ 

ಅವತ್ತು ಭಿಕ್ಷೆ ಬೇಡಿದ, ಚಿಂದಿ ಆಯ್ದ, ಚಹಾ ಮಾರಿದ…ಇವತ್ತು ಮಾರ್ಷಲ್ ಆರ್ಟ್ ಟೀಚರ್…!

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಹೇಶ್ ಬಾಬು ‘ಸರ್ಕಾರಿ ವಾರಿ ಪಾಟ’ ಸಿನಿಮಾದಲ್ಲಿ ನಟಿಸುವ ಸ್ಯಾಂಡಲ್ ವುಡ್ ಸ್ಟಾರ್  ಸುದೀಪ್ ಅಲ್ಲ ..! ಮತ್ಯಾರು?

ಇದು ಬೆಂಗಳೂರಿನ ಉಬರ್ ನಂದಿನಿ ಯಶೋಗಾಥೆ!

ಯಾವ ರಾಶಿ, ನಕ್ಷತ್ರದಲ್ಲಿ ನಡೆಯಲಿದೆ ಸೂರ್ಯಗ್ರಹಣ? ಗ್ರಹಣ ಕಾಲದಲ್ಲಿ ಏನ್ಮಾಡ್ಬೇಕು? ರಾಶಿಗಳ ಫಲಾಫಲಗಳೇನು?

ವಿಶ್ವದ ಅತ್ಯಂತ ಹೆಚ್ಚು ಬೆಲೆಯ ಹಣ್ಣು ಯಾವುದು? ಈ ಹಣ್ಣಿನ ಬೆಲೆ 154019.39 ರೂಪಾಯಿಗಳು!

ಮಾಲೀಕರಿಲ್ಲದ ಅಂಗಡಿಯಲ್ಲಿ ಗ್ರಾಹಕರೇ ವ್ಯಾಪಾರಿ …ಬೇಕಾಗಿದ್ದು ತಗೋಳಿ ದುಡ್ ಹಾಕಿ ಹೋಗಿ ..!

ಭಾರತದಲ್ಲಿ ಭಾರತೀಯರಿಗೆ “ನೋ ಎಂಟ್ರಿ” ಭಾರತೀಯರಿಗೇ ಪ್ರವೇಶ ನೀಡದ ಭಾರತದ ಸ್ಥಳಗಳು..!

ರಿಲೀಸ್ ಗೂ ಮುನ್ನವೇ ರಜನಿಕಾಂತ್ 2.0 , ಪ್ರಭಾಸ್ ‘ಬಾಹುಬಲಿ’ ರೆಕಾರ್ಡ್ ಬ್ರೇಕ್ ಮಾಡಿದ ಯಶ್ ‘ಕೆಜಿಎಫ್- 2’ …!

ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?

ಅಂದು ಅವರ ಮನೆಯಲ್ಲ ಟಿವಿ ಇರಲಿಲ್ಲ ; ಇಂದು ವಿಶ್ವವೇ ಠೀವಿಯಿಂದ ಸಲಾಂ ಅಂತಿದೆ ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article