ರೋಹಿತ್ ಶರ್ಮಾ, ರಹಾನೆಗೆ ಅರ್ಜುನ ಪ್ರಶಸ್ತಿ…!

Date:

ಭಾರತ ಕ್ರಿಕೇಟ್ ತಂಡದ ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಹಾಗೂ ಅಜಿಂಕ್ಯಾ ರಹಾನೆ ಅವರಿಗೆ ಈ ಬಾರಿಯ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಶುಕ್ರವಾರ ಜವಹರ್‍ಲಾಲ್ ನೆಹರು ಮೈದಾನದಲ್ಲಿ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರಧಾನ ಕಾರ್ಯಕ್ರಮದಲ್ಲಿ ಕ್ರೀಡಾ ಸಚಿವ ವಿಜಯ್ ಗೋಯಲ್ ಅವರು ಈ ಇಬ್ಬರು ಆಟಗಾರರಿಗೆ ಅರ್ಜುನ ಪ್ರಶಸ್ತಿಯನ್ನು ನೀಡಿದರು.
ರೋಹಿತ್ ಶರ್ಮಾ ಅವರ ಹೆಸರು ಕಳೆದ 2015ರಲ್ಲಿಯೇ ನಾಮ ನಿರ್ದೇಶನಗೊಂಡಿದ್ದು, ರೋಹಿತ್ ಅವರು ಆ ವೇಳೆ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಳ್ಳಬೇಕಿದ್ದ ಕಾರಣದಿಂದ ಅಂದು ರಾಷ್ಟ್ರಪತಿ ಭವನದಲ್ಲಿ ನಡೆದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ 2015ರ ಪ್ರಶಸ್ತಿಯನ್ನು ರೋಹಿತ್ ಸೆ. 16ರಂದು ಪಡೆದುಕೊಂಡಿದ್ದಾರೆ. ಇನ್ನು ಈ ವರ್ಷದ ಅರ್ಜುನ ಪ್ರಶಸ್ತಿಗೆ ಅಜಿಂಕ್ಯಾ ರಹಾನೆ ಪಾತ್ರರಾಗಿದ್ದಾರೆ. ಅಜಿಂಕ್ಯಾ ಮತ್ತು ರೋಹಿತ್ ಇಬ್ಬರು ಒಂದೇ ವೇದಿಕೆಯಲ್ಲಿ ಸಚಿವ ವಿಜಯ್ ಗೋಯಲ್ ಅವರಿಂದ ಪ್ರಶಸ್ತಿಯನ್ನು ಸ್ವೀಕರಿಸಿದ್ದಾರೆ. ಅರ್ಜುನ ಪ್ರಶಸ್ತಿಗೆ ಭಾಜನರಾದ ಈ ಇಬ್ಬರು ಆಟಗಾರರಿಗೆ 5 ಲಕ್ಷ ನಗದು ಬಹುಮಾನ ಹಾಗೂ ಸರ್ಟಿಫಿಕೇಟ್ ನೀಡಿ ಗೌರವಿಸಲಾಗಿದೆ.

POPULAR  STORIES :

ಸರ್ಕಾರ ಬಿದ್ದರೂ 20ರ ನಂತರ ನೀರು ಬಿಡೆನು: ಸಿಎಂ ಸಿದ್ದರಾಮಯ್ಯ ಗುಡುಗು..!

ಚೀನಾ ತನ್ನ ದೇಶದ 6 ವರ್ಷದ ಮಕ್ಕಳನ್ನು ಭವಿಷ್ಯದ ಒಲಿಂಪಿಕ್ ದಿಗ್ಗಜರನ್ನು ಮಾಡಲು ಕೊಡುವ ಕಠಿಣ ತರಬೇತಿ..!

ತಿಂಗಳಲ್ಲಿ ಎರಡನೇ ಬಾರಿ ಪೆಟ್ರೊಲ್ ದರ ಏರಿಕೆ…!

ತಾಮ್ರದ ಪಾತ್ರೆಯಲ್ಲಿ ಕೂಡಿಟ್ಟ ನೀರನ್ನು ಸೇವಿಸುವುದು ಉತ್ತಮ ಯಾಕೆ..?

ಪತಂಜಲಿಯ ಸಿ.ಇ.ಒ ಆಚಾರ್ಯ ಬಾಲಕೃಷ್ಣ , ಈಗ ದೇಶದ ಅತ್ಯಂತ ಶ್ರೀಮಂತರಲ್ಲಿ ಒಬ್ಬರು..!

ಸಿರಿಯಾ ದೇಶದ ಮಹಿಳೆಯರನ್ನು ಲೈಂಗಿಕ ಗುಲಾಮಗಿರಿಯಿಂದ ರಕ್ಷಿಸಲು ಪಣ ತೊಟ್ಟು ನಿಂತ ದಿಟ್ಟ ಮಹಿಳೆ.

ಬಿಎಸ್‍ಎನ್‍ಎಲ್ ಜೊತೆ ಜಿಯೋ ಒಪ್ಪಂದ…!

Share post:

Subscribe

spot_imgspot_img

Popular

More like this
Related

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ

ಕಾರೊಂದು ಸೇತುವೆ ಮೇಲಿಂದ ಉರುಳಿ ಓರ್ವ ಸಾವು, ನಾಲ್ವರು ಗಂಭೀರ ಕೋಲಾರ:- ಜಿಲ್ಲೆ...

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ ಸಿದ್ದರಾ,ಯ್ಯ

ಸಮೀಕ್ಷೆ ನಡೆಸದಿದ್ದರೆ ಸಮಾಜದಲ್ಲಿ ಜನರ ಸ್ಥಿತಿಗತಿ ಬಗ್ಗೆ ಅರಿಯಲು ಸಾಧ್ಯವಿಲ್ಲ: ಸಿಎಂ...

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು?

ಬೆರಳಿನ ಮೇಲೆ ಕೂದಲು ಇದ್ದರೆ ಅದೃಷ್ಟಾನಾ? ಶಾಸ್ತ್ರ ಹೇಳುವುದೇನು? ಕೆಲವರಿಗೆ ಕೈ ಅಥವಾ...

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...