ತನ್ನ ನೇರ ಮಾತುಗಾರಿಕೆಯಿಂದಲೇ ಹೆಸರುವಾಸಿಯಾಗಿರೋ ಫೈರ್ ಬ್ರ್ಯಾಂಡ್ ಜರ್ನಲಿಸ್ಟ್ ಅರ್ನಬ್ ಗೋಸ್ವಾಮಿ ಟೈಮ್ಸ್ ನೌ ಸಂಸ್ಥೆಯ ಪ್ರಧಾನ ಸಂಪಾದಕ ಹುದ್ದೆಗೆ ರಾಜಿನಾಮೆ ನೀಡಿದ್ದು, ಇನ್ಮುಂದೆ ಅರ್ನಬ್ ಯಾವ ಸುದ್ದಿ ವಾಹಿನಿಯಲ್ಲೂ ಕಾಣುಸ್ಕೊಳೊಲ್ವಾ ಅನ್ನೊ ಸಂಶಯ ಈಗ ದೂರವಾಗಿದೆ..! ಯಾಕಂದ್ರೆ ಅರ್ನಬ್ ತಮ್ಮದೇ ಆದ ಹೊಸ ಸುದ್ದಿವಾಹಿನಿಯನ್ನು ಹೊರ ತರಲಿದ್ದಾರೆ ಎಂಬ ಸುದ್ದಿ ಕೆಲ ಮಾಧ್ಯಮಗಳಿಂದ ತಿಳಿದು ಬಂದಿದೆ. ಅಷ್ಟೇ ಅಲ್ಲ ತಮ್ಮದೇ ಆದ ಹೊಸ ಮೀಡಿಯಾಗೆ ರಿಪಬ್ಲಿಕ್ ಅಂತಾನು ನಾಮಕರಣ ಮಾಡಿದ್ದಾರೆ..! ಆದ್ರೆ ಅದು ಯಾವಾಗ ಲೋಕಾರ್ಪಣೆಯಾಗುತ್ತೆ ಅನ್ನೋದೆ ಎಲ್ಲರ ಪ್ರಶ್ನೆಯಾಗಿದೆ..! ದೇಶದ ಅತ್ಯಂತ ಜನಪ್ರಿಯ ಸುದ್ದಿ ನಿರೂಪಕ ಅರ್ನಬ್ ಗೋಸ್ವಾಮಿ ಅವರ ಹೊಸ ಸಂಸ್ಥೆಯ ಬಗ್ಗೆ ಈಗಾಗ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಚರ್ಚೆ ನಡೆಯುತ್ತಿದ್ದು, ಅರ್ನಬ್ ಅವರನ್ನು ಮತ್ತೆ ಮಾಧ್ಯಮ ವೃತ್ತಿಯಲ್ಲಿ ನೋಡೋಕೆ ಜನ ಕಾತರದಿಂದ ಕಾಯ್ತಾ ಇದ್ದಾರೆ. ಇನ್ನು ಅವರ ಕನಸಿನ ಕೂಸಾದ ರಿಪಬ್ಲಿಕ್ ಸುದ್ದಿವಾಹಿನಿಯನ್ನು ಜನವರಿ 26ರ ರಿಪಬ್ಲಿಕ್ ಡೇ ದಂದು ಆರಂಭವಾಗ್ಬೋದು ಅಂತ ಅಭಿಮಾನಿಗಳು ಮಾತನಾಡ್ತಾ ಇದ್ದಾರೆ. ಈಗಾಗಲೇ ಈ ಹೊಸ ಸುದ್ದಿ ವಾಹಿನಿಗೆ ಮಾಧ್ಯಮ ಸಂಸ್ಥೆಗಳಲ್ಲಿನ ಉದ್ಯಮಿಗಳು, ಜಾಹೀರಾತು ಸಂಸ್ಥೆಗಳು ಬಂಡವಾಳ ಹೂಡಲು ಮುಂದೆ ಬಂದಿದ್ದು, ಸದ್ಯದಲ್ಲೇ ತೆರೆಕಾಣುವ ನಿರೀಕ್ಷೆ ಇದೆ. 1995ರಲ್ಲಿ ಟಿವಿ ಲೋಕಕ್ಕೆ ಪರಿಚಿತರಾದ ಅರ್ನಬ್ ಅವರು ಟೈಮ್ಸ್ ನೌ ನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸುತ್ತಿದ್ರು. ಇದಕ್ಕೂ ಮುನ್ನ ಅವರು ಕೊಲ್ಕತ್ತಾದ ದಿ ಟೆಲಿಗ್ರಾಫ್‍ನಲ್ಲಿ ಪತ್ರಕರ್ತರಾಗಿ ಕೆಲಸ ಮಾಡ್ತಾ ಇದ್ರು. ಇದೀಗ ಟೈಮ್ಸ್ ನೌ ಸಂಸ್ಥೆಗೆ ರಾಜಿನಾಮೆ ನೀಡಿರುವ ಅರ್ನಬ್, ಈ ಸ್ಥಾನದಲ್ಲಿ ಆಂಕರ್ ರಾಹುಲ್ ಶಿವಶಂಕರ್ ಅವರು ಕಾಣಿಸಿಕೊಂಡಿದ್ದಾರೆ.
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ಬಿಗ್‍ಬಾಸ್ ಮನೆಯಲ್ಲಿ ಸಖತ್ ವಾಕ್ಸಮರ..!
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!