ಬಾಹುಬಲಿನ ಮೂವಿಗೆ ಸಂಬಂಧಿಸಿದ ಇನ್ನೂ ಕೆಲವೊಂದು ವಿಚಾರಗಳಿವೆ ಅವು ನಿಮಗೆ ಗೊತ್ತೆ.??

Date:

ನಮ್ಮ ಭಾರತದ ಚಿತ್ರಗಳಲ್ಲೇ ಅತೀ ಹೆಚ್ಚು ವೆಚ್ಚದಲ್ಲಿ ನಿರ್ಮಾಣ ಮಾಡಿರೋ ಚಿತ್ರಈ ಬಾಹುಬಲಿ. ಕಲಾತ್ಮಕ ದೃಶ್ಟಿಕೋನದಿಂದ ಆರಂಭವಾಗಿ,ಭಾರತೀಯ ಪೌರಾಣಿಕ ಹಾಗೂ ಆಧುನಿಕ ಸಿನಿಮಾದ ಲೇಪನದೊಂದಿಗೆ ನಿರ್ಮಿಸಲಾದ ಈ ಚಿತ್ರವು ಬಾಕ್ಸ್ ಆಫೀಸ್ ನಲ್ಲಿ ಬಿಡುಗಡೆಯಾದ ಎರಡನೇ ದಿನಕ್ಕೆ ಭಯಂಕರ ಸದ್ದೆಬ್ಬಿಸಿತು.

ಎಸ್.ಎಸ್. ರಾಜಮೌಳಿ ನಿರ್ದೇಶನ ಈ ಚಿತ್ರವು ಕಲೆಯ ಅದ್ಭುತ ಚಾಕಚಕ್ಯತೆಯನ್ನು ಸಾರುತ್ತವೆ.ಈ ಸಿನಿಮಾದ ನೆನಪಿನಲ್ಲಿ,ಇದರ ಮೊದಲ ವಾರ್ಷಿಕ ಸಂಭ್ರಮಾಚರಣೆಯ ಅಂಗವಾಗಿ ಇದಕ್ಕೆ ಸಂಬಂಧಿಸಿದ ಕೆಲವೊಂದು ವಿಷಯಗಳನ್ನು ನಿಮ್ಮ ಮುಂದಿಡುತ್ತೇವೆ.

1.ಈ ಜಲಪಾತದ ಕ್ರಮಬದ್ದವಾದ ಹರಿಯುವಿಕೆಯನ್ನು ಗಮನಿಸಿದ್ದೀರಾ?

ಇದನ್ನು ಚಿತ್ರೀಕರಿಸಲು 109 ದಿನ ಬೇಕಾಗಿತ್ತು.ಅಂದರೆ ಪೂರ್ತಿ ಸಿನಿಮಾದ ಚಿತ್ರೀಕರಣದ 1/3 ಭಾಗ .

2.ಭಲ್ಲಾಳದೇವನ ಮೂರ್ತಿಯು 8,000 K.g ತೂಕವಿತ್ತು.

ಇದೊಂದು 32 ಫೀಟ್ ಎತ್ತರದ ಪ್ರತಿಮೆ,ಇದನ್ನು 200 ಜನ ಶಿಲ್ಪಿಗಳಿಂದ ತಯಾರಿಸಲಾಗಿತ್ತು.ರಾಣಾ ಈ ಸಿನಿಮಾಕೋಸ್ಕರ 32 k.g ತೂಕ ಹೆಚ್ಚಿಸಿಕೊಂಡಿದ್ದಲ್ಲದೆ,ಅವನ ಪಾತ್ರಕ್ಕನುಗುಣವಾಗಿ ಅವನ ಆಹಾರ ಕ್ರಮವನ್ನೂ ಬದಲಾಯಿಸಿದ್ದನಂತೆ.

3.ಇದರಲ್ಲಿ ಕಾಣ ಸಿಗೋ ಈ ಮನಮೋಹಕ ದೃಶ್ಯದ ಹಿಂದೆ 17 VFX ಕಂಪನಿಗಳ ಹಾಗೂ 600 VFX ಕೆಲಸಗಾರರ ಶ್ರಮವಿದೆ.

ನೈಜ ಚಿತ್ರವನ್ನಾಧರಿಸಿ ಒಂದು ಇಮೇಜ್ ನ್ನು ರಚಿಸುವುದೇ ಈ Visual effects(VFX) ಅದಲ್ಲದೆ,25 ನ್ಯಾಷನಲ್ ಅವಾರ್ಡ್ ವಿನ್ನರ್ ಆಗಿರೋ ಸಾಬು ಸಿರಿಲ್ ಹಾಗೂ ಶ್ರೀನಿವಾಸ್ ಅವರ ಪರಿಶ್ರಮವೂ ಈ ಸಿನಿಮಾದ ಯಶಸ್ಸಿಗೆ ಕಾರಣವಾಗಿದೆ.

4.ಮ್ಯೂಸಿಯಂ ಇರೋ ಭಾರತೀಯ ಮೊದಲ ಸಿನಿಮಾ

ಈ ಮ್ಯೂಸಿಯಂನಲ್ಲಿ ಶಸ್ತ್ರಾಸ್ತ್ರಗಳ ಸಂಗ್ರಹಣಾಲಯ,ರಕ್ಷಣಾ ಕವಚ ಹಾಗೂ ಉಡುಗೆ ತೊಡುಗೆಗಳನ್ನು ನಿರ್ದೇಶಕರೇ ನಿರ್ಮಿಸಿದ್ದಾರೆ.

5.ಇದರ ಅತೀ ದೊಡ್ಡದಾದ ಪೋಸ್ಟರ್ ನ ಕಾರಣದಿಂದ ಇದು ಗಿನ್ನೆಸ್ ದಾಖಲೆ ಸ್ಥಾಪಿಸಿದೆ.

ಇದರ ಪೋಸ್ಟರ್ 50,000 sq.feet ಅಳತೆಯ ಎತ್ತರಕ್ಕೆ ವ್ಯಾಪಿಸಿತ್ತು.

6.ನಟ ಪ್ರಭಾಸ್ ಸುಮಾರು 1.5 ಕೋಟಿ ಯನ್ನು ಜಿಮ್ ನ ಸಾಧನಗಳಿಗಾಗಿ ಖರ್ಚು ಮಾಡಿದ್ದನಂತೆ.

ಆದರೆ ಈ ಸಿನಿಮಾದಲ್ಲಿ ಅವನನ್ನು ನೋಡಿದ ಬಳಿಕ ನಮಗೆ ಅಷ್ಟು ಅಚ್ಚರಿ ಅನಿಸಲಿಲ್ಲ.

7.ಬಾಹುಬಲಿಯ ಟ್ರೈಲರ್ ಕೇವಲ 24 ಘಂಟೆಗಳ ಅವಧಿಯಲ್ಲಿ,4.05 ಮಿಲಿಯನ್ ವೀಕ್ಷಕರನ್ನು ಯೂಟ್ಯೂಬ್ ನಲ್ಲೂ 1.5 ಮಿಲಿಯನ್ ವೀಕ್ಷಕರನ್ನು ಫೇಸ್ ಬುಕ್ ನಲ್ಲೂ ಸಂಪಾದಿಸಿತ್ತು. 

ಇದು ಬಾಲಿವುಡ್ ನ ಚರಿತ್ರೆಯಲ್ಲಿ ಅತೀ ದೊಡ್ದ ಯಶಸ್ವೀ ಟ್ರೈಲರ್ ಅಗಿರುವುದು.

8.ಸಿನಿಮಾದ 100 ವರುಷಗಳಲ್ಲಿ B.B.C ಸಾಕ್ಶ್ಯ ಚಿತ್ರಗಳ ಸಾಲಿನಲ್ಲಿ ಕಾಣಿಸಿಕೊಂಡ ಮೊತ್ತಮೊದಲನೇಯ ಚಿತ್ರವೇ ಈ ಬಾಹುಬಲಿ.

9.ಹೃತಿಕ್ ರೋಷನ್ ಹಾಗೂ ಜೋನ್ ಅಬ್ರಹಾಂ ನ್ನು ಪದೇ ಪದೇ ನಾಯಕನ ಪಾತ್ರ ವಹಿಸಲು ಕೇಳಿಕೊಳ್ಳಲಾಗಿತ್ತು.

ಆದ್ರೆ ಅವರಿಂದ ಯಾವ ಉತ್ತರವೂ ಬರದ ಕಾರಣ,ರಾಜ ಮೌಳಿ ತನ್ನ ಹೆಜ್ಜೆ ಮುಂದಿಟ್ಟು,ಪ್ರಭಾಸ್ ಹಾಗೂ ರಾಣಾ ರನ್ನು ಈ ಪಾತ್ರಗಳಿಗೆ ಆಯ್ಕೆ ಮಾಡಿದ್ರಂತೆ.

10.ಬಾಹುಬಲಿಯು 9.4 / 10 IMDB ಯ ರೇಟಿಂಗ್ ಪಡೆದ ಮೊತ್ತಮೊದಲ ಭಾರತೀಯ ಸಿನಿಮಾ ಅಗಿರುವುದು.

Internet movie data base (IMDB) ಇದೊಂದು ಆನ್ ಲೈನ್ ನಲ್ಲಿ ಎಲ್ಲಾ ಟಿ.ವಿ ಪ್ರೋಗ್ರಾಂ,ಸಿನಿಮಾ ಹಾಗೂ ಅನೇಕ ವೀಡಿಯೋ ಗೇಮ್ಸ್ ಗಳ ಡಾಟಾ ಬಗ್ಗೆ ಮಾಹಿತಿ ನೀಡುವ ಒಂದು ವ್ಯವಸ್ಥೆಯಾಗಿದೆ.ಇದರಲ್ಲಿ ರಿಜಿಸ್ಟರ್ ಆದ IMDB ಬಳಕೆದಾರರ ಒಟ್ಟು ವೋಟಿಂಗ್ ಆಧಾರದ ಮೇಲೆ ಒಂದು ಸಿಂಗಲ್ ರೇಟ್ ನ್ನು ನಿರ್ಧರಿಸಲಾಗುತ್ತದೆ.ಇದನ್ನೇ(IMDB)ರೇಟಿಂಗ್ ಎನ್ನಲಾಗುತ್ತದೆ.

ರಾಜ ಮೌಳಿ ಸಾಹೇಬರೆ! ನಿಮ್ಮನ್ನು ಇನ್ನು ಹಿಡಿಯುವ ಹಾಗೇ ಇಲ್ಲ!!!!!!!!

  • ಸ್ವರ್ಣಲತ ಭಟ್

POPULAR  STORIES :

ಸಲ್ಲು ವೆಡ್ಸ್ ಲೂಲಿಯಾ… ಕೊಹ್ಲಿ ವೆಡ್ಸ್ ಅನುಷ್ಕಾ….! ಇದಕ್ಕೆಲ್ಲಾ ಕಾರಣ ಸುಲ್ತಾನ್ ಚಿತ್ರ

ಚಿತೆಯಲ್ಲಿ ಮಲಗಿದ್ದ ವ್ಯಕ್ತಿ ಮತ್ತೆ ಜೀವಂತವಾದ..??

ಪಾಪಿಗಳು ಅಟ್ಟಹಾಸ ಮೆರೆದ ವಿಪರ್ಯಾಸದ ರಿಯಲ್ ಸ್ಟೋರಿ..!

ಕೋಹ್ಲಿ ಪ್ರಕಾರ ಪರ್ಫೆಕ್ಟ್ ಟೆಸ್ಟ್ ಬೌಲರ್ ಯಾರು?

ನಾಯಿಯನ್ನು ಟೆರೆಸ್ ಮೇಲಿನಿಂದ ಎಸೆದ ಮೃಗ ಯಾರು ಗೊತ್ತಾ..?

ಕುಂಬ್ಳೆ ಸವಾಲು ಗೆದ್ದ ಒಬ್ಬನೇ ಒಬ್ಬ ಆಟಗಾರ ಯಾರು? ವಿರಾಟ್ ಕೋಹ್ಲಿಯೇ ಗೆಲ್ಲದ ಸವಾಲು ಗೆದ್ದ ಯುವ ಆಟಗಾರ..!

ಎಲ್ಲರ ಮನಗೆದ್ದ ಧೋನಿಯ ಸ್ಪೂರ್ತಿದಾಯಕ ಮಾತುಗಳು..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...