ಅರಣ್ಯ ಸಂರಕ್ಷಣೆಯಲ್ಲಿ ಬಂಡೀಪುರ ಅಭಯಾರಣ್ಯಕ್ಕೆ ಇಡೀ ರಾಜ್ಯದಲ್ಲೇ ಮೊದಲ ಸ್ಥಾನ ಪಡೆದಿದ್ದು, ಇಡೀ ದೇಶದಲ್ಲೇ 1 ರಿಂದ 3ನೇ ಸ್ಥಾನ ಪಡೆಯುವ ನಿರೀಕ್ಷೆ ಇದೆ ಎಂದು CFO ಡಾ.ರಮೇಶ್ ಕುಮಾರ್ ತಿಳಿಸಿದ್ದಾರೆ.
ಬಂಡೀಪುರದಲ್ಲಿ ಆಯೋಜಿಸಿದ್ದ ಮಾಧ್ಯಮ ಕಾರ್ಯಾಗಾರದಲ್ಲಿ ಮಾತ್ನಾಡಿದ ಅವರು, ಗುಂಡ್ಲುಪೇಟೆ ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅಪರೂಪದ ಜೀವ ವೈವಿಧ್ಯಗಳಿಗೆ ಆಶ್ರಯ ತಾಣವಾಗಿದೆ.
ಪ್ರವಾಸೋದ್ಯಮ, ಪ್ರೊಟೆಕ್ಷನ್, ಸಿಬ್ಬಂದಿ, ಅರಣ್ಯ ಸಂರಕ್ಷಣೆ ಸಂಬಂಧ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ ಹಾಗೂ NDCA ನೀಡಿದ ರೇಟಿಂಗ್ 97.5% ಇದೆ. ಹೀಗಾಗಿ ಬಂಡೀಪುರ ವನ್ಯ ಜೀವಿಗಳು ಅತ್ಯಂತ ಸುರಕ್ಷಿತ ತಾಣವಾಗಿರೋದು ನಮ್ಮ ಹೆಮ್ಮೆ ಎಂದು ತಿಳಿಸಿದ್ರು.