ಬೆಂಗಳೂರಿಗೆ ಬರುತ್ತಿದೆ ವಿಶ್ವದ ಅತೀ ದೊಡ್ಡ ವಿಮಾನ ..!

Date:

ವಿಶ್ವದ ಅತಿ ದೊಡ್ಡ ವಿಮಾನ ಎಂದೇ ಖ್ಯಾತಿ ಪಡೆದ ದುಬೈ ಮೂಲದ ಏರ್‌ಲೈನ್‌ ಎಮಿರೇಟ್ಸ್ A380 , ಬೆಂಗಳೂರಿನ ಕೆಂಪೇಗೌಡ ವಿಮಾನ ನಿಲ್ದಾಣಕ್ಕೆ ಬರುತ್ತಿದೆ.

 

ಇದು ವಿಶ್ವದ ಅತಿ ದೊಡ್ಡ ಪ್ರಯಾಣಿಕರ ವಿಮಾನ . ಅದೂ ಕೂಡಾ ಇಂದೆ ಬರಿತ್ತಿದ್ದು , ಮದ್ಯಾಹ್ನ ಬೆಂಗಳೂರು ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿಯುತ್ತೆ .

ಈ ಮೂಲಕ ಇನ್ನು ದುಬೈ-ಬೆಂಗಳೂರು ವಿಮಾನ ಸೇವೆ ಸಹ ಅರಂಭವಾಗಲಿದೆ. ಈ ವಿಮಾನವು ದುಬೈನಿಂದ ಇಂದು ಬೆಳಗ್ಗೆ 10 ಕ್ಕೆ ಹೊರಟಿದೆ . ಬೆಂಗಳೂರಿಗೆ ಮಧ್ಯಾಹ್ನ 3:40 ಕ್ಕೆ ಬಂದಿಳಿಯಲಿದೆ .

ಡಬಲ್ ಡೆಕ್ಕರ್ ವಿಮಾನವಾಗಿರುವ ಇದು 500 ಕ್ಕಿಂತಲೂ ಹೆಚ್ಚು ಜನರನ್ನು ಹೊರುವ ಸಾಮರ್ಥ್ಯ ಹೊಂದಿದೆ . ಈ ವಿಮಾನವು ಬೇರೊಬ್ಬರಿ 510 ರಿಂದ 575 ಟನ್‌ಗಳಷ್ಟು ತೂಕವನ್ನು ಹೊಂದಿದೆ. ಇದರ ಉದ್ದ 72.7 ಮೀಟರ್ ಮತ್ತು ಎತ್ತರ 24.1 ಮೀಟರ್ ಆಗಿದೆ.

A380 ವಿಮಾನವು ಬೋಯಿಂಗ್ 777 ವಿಮಾನಕ್ಕಿಂತ 45 % ರಷ್ಟು ಹೆಚ್ಚು ಆಸನಗಳ ಸಾಮರ್ಥ್ಯವನ್ನು ಇದಕ್ಕಿದೆ . ಇನ್ನೂ ಈ ಐತಿಹಾಸಿಕ ಕ್ಷಣಕ್ಕೆ ಸಾಕಷ್ಟು ಜನ ಕಾತುರದಿಂದ ಕಾಯುತ್ತಿದ್ದು , ವಿಮಾನವನ್ನು ನೋಡಲು ಎಲ್ಲರೂ ಸಜ್ಜಾಗಿದ್ದಾರೆ , ಎಂದು ಬೆಂಗಳೂರು ವಿಮಾನ ನಿಲ್ದಾಣದ ಅಧಿಕಾರಿಗಳು ತಿಳಿಸಿದ್ದಾರೆ.

Share post:

Subscribe

spot_imgspot_img

Popular

More like this
Related

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ

ಸೆಪ್ಟೆಂಬರ್ 22ರಿಂದ ಅಕ್ಟೋಬರ್ 7ರವರೆಗೆ ಜಾತಿ ಜನಗಣತಿ: ಸಿಎಂ ಸಿದ್ದರಾಮಯ್ಯ ಬೆಂಗಳೂರು:- ರಾಜ್ಯದಲ್ಲಿ...

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ

ಮೀನು ಹಿಡಿಯುತ್ತಿದ್ದ ಬಾಲಕರನ್ನು ಮಾತನಾಡಿಸಿದ ಟಿಬಿ ಜಯಚಂದ್ರ ಶಿರಾ ಶಾಸಕರಾದ ಹಾಗೂ ದೆಹಲಿಯ...

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ!

Movie ticket price: ಇಂದಿನಿಂದ ಚಿತ್ರಮಂದಿರಗಳಲ್ಲಿ ಏಕರೂಪ ಟಿಕೆಟ್ ದರ ಜಾರಿ! ಬೆಂಗಳೂರು:...