ಬಿಬಿಸಿ ಹೊರ ತಂದಿರುವ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ನಮ್ಮ ಕನ್ನಡದ ಹೆಮ್ಮೆಯ ಮಹಿಳೆಯೋರ್ವರ ಹೆಸರು ಸೇರ್ಪಡೆಯಾಗಿದೆ. ಸಾವಿರಾರು ಮರಗಳಿಗೆ ತಾಯಿಯಾಗಿರುವ ‘ವೃಕ್ಷಗಳ ಮಾತೆ’ ಕನ್ನಡ ನಾಡಿನ ಹೆಮ್ಮಯ ಮಹಿಳೆ ಸಾಲು ಮರದ ತಿಮ್ಮಕ್ಕ.. ಹೌದು ಬಿಬಿಸಿ ಹೊರ ತಂದಿರುವ 2016ರ ವಿಶ್ವದ ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ 105 ವಯಸ್ಸಿನ ತಿಮ್ಮಕ್ಕ ಅವರ ಹೆಸರು ಸೇರ್ಪಡೆಯಾಗಿದೆ. ಕಳೆದ 80 ವರ್ಷಗಳಿಂದ 8 ಸಾವಿರಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಿಸುತ್ತಿರುವ ಇವರು ತಮ್ಮ ಮಕ್ಕಳನ್ನು ಮರಗಳ ಮೂಲಕವಾಗಿ ನೋಡುತ್ತಿದ್ದಾರೆ. ಅವರ ಪರಿಸರ ಕಾಳಜಿಯನ್ನು ನೋಡಿ ಈ ಬಾರಿ ಪ್ರಭಾವಿ ಮಹಿಳೆಯರ ಪಟ್ಟಿಗೆ ಇವರು ಹೆಸರು ಸೇರ್ಪಡೆಗೊಂಡಿದೆ.. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಮಾಗಡಿ ತಾಲೂಕಿನ ಹುಳಿಕಲ್ಲು ಗ್ರಾಮದ ತಿಮ್ಮಕ್ಕ ಚಿಕ್ಕಯ್ಯ ದಂಪತಿಗಳು ತಮ್ಮ ಗ್ರಾಮದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸುಮಾರು 4 ಕಿಮೀವರೆಗೆ 284 ಆಲದ ಮರಗಳನ್ನು ನೆಟ್ಟು ಪೋಷಿಸಿದ್ದಾರೆ. ಇದೀಗ ಈ ಎಲ್ಲಾ ಮರಗಳನ್ನು ಸರ್ಕಾರ ನಿರ್ವಹಣೆರ ಮಾಡುತ್ತಿವೆ.
ಇವರ ಜೊತೆಯಲ್ಲೇ ನಟಿ ಸನ್ನಿ ಲಿಯೋನ್, ಮಹಾರಾಷ್ಟ್ರದ ಗೌರಿ ಜಿಂದಾರ್ಕರ್, ನೇಹಾ ಸಿಂಗ್, ತಮಿಳುನಾಡಿನ ಟ್ರ್ಯಾಕ್ಟರ್ ಕ್ಲೀನ್ ಆಫ್ ಇಂಡಿಯಾ ಮಲ್ಲಿಕಾ ಶ್ರೀನಿವಾಸ್ ಮುಂತಾದವರು ಬಿಬಿಸಿಯ 2016ರ ಪ್ರಭಾವಿ ಮಹಿಳೆಯ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
Like us on Facebook The New India Times
POPULAR STORIES :
ಇನ್ಮುಂದೆ ಬಿಗ್ ಬಜಾರ್‍ನಲ್ಲೂ ಮನಿ ವಿತ್‍ಡ್ರಾ ಮಾಡ್ಕೊಳ್ಳಿ..!
ಅವನಿಗೆ ಅವಳು ಇಷ್ಟವಾಗಿದ್ದು ಪ್ರತಿಭಟನೆಯಲ್ಲಿ. ಅವಳು ಇವನ ಮುಖ ನೋಡಿದ್ದು ಸೆರಗು ಸಿಕ್ಕಿಬಿದ್ದಾಗ.!
50 ಲಕ್ಷ ಮಂದಿಗೆ ಸ್ಮಾರ್ಟ್ ಫೋನ್ & 1 ವರ್ಷ ಡೇಟಾ ಉಚಿತ
ರೈಲ್ವೇ ಆಫರ್: ಇನ್ಮುಂದೆ ಆನ್‍ಲೈನ್ ಬುಕಿಂಗ್‍ಗೆ ಹೆಚ್ಚುವರಿ ಶುಲ್ಕ ಇಲ್ಲ..!
ಕ್ಯೂನಲ್ಲಿ ನಿಂತಿದ್ದ ಜನರಿಗೆ ಹಿಗ್ಗಾ ಮುಗ್ಗಾ ಥಳಿಸಿದ ಪೊಲೀಸ್..!