ರಾಜ್ಯದ ಪೌರ ಕಾರ್ಮಿಕರಿಗೆ ಮಾಸಿಕ ಸಂಕಷ್ಟ ಪರಿಹಾರ ಭತ್ಯೆಯಾಗಿ ರೂ

0
44

ಬೆಂಗಳೂರು : ರಾಜ್ಯದ ಪೌರ ಕಾರ್ಮಿಕರಿಗೆ ಮಾಸಿಕ ಸಂಕಷ್ಟ ಪರಿಹಾರ ಭತ್ಯೆಯಾಗಿ ರೂ.2,000 ನೀಡುವುದಾಗಿ ಸರ್ಕಾರ ಘೋಷಿಸಿದೆ. ಈ ಸಂಬಂಧ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ ಬಳಿಕ ಮಾತನಾಡಿದ ಸಚಿವ ಜೆ.ಸಿ ಮಾಧುಸ್ವಾಮಿ ಅವರು,ಪೌರಕಾರ್ಮಿಕರಿಗೆ ಸಂಕಷ್ಟ ಭತ್ಯೆ ನೀಡಲು ನಿರ್ಧಾರಿಸಲಾಗಿದೆ .

 

 

ಮಾಸಿಕ 2000 ಸಂಕಷ್ಟ ಪರಿಹಾರ ಭತ್ಯೆ ನೀಡಲಾಗುತ್ತದೆ. ಎಲ್ಲಾ ಪೌರಕಾರ್ಮಿಕರಿಗೂ ಇದು ಸಿಗಲಿದೆ ಎಂದರು. 436 ನಮ್ಮಕ್ಲಿನಿಕ್ ಯೋಜನೆಗೆ ಒಪ್ಪಿಗೆ ಸೂಚಸಿಲಾಗಿದೆ. 438 ವೈದ್ಯಾಧಿಕಾರಿ, 438 ನರ್ಸ್ ಹುದ್ದೆ ಭರ್ತಿಗೆ ಅನುಮತಿ ನೀಡಲಾಗಿದೆ. 438 ದ್ವಿತೀಯ ದರ್ಜೆ ಸಹಾಯಕರ ನೇಮಕಕ್ಕೆ ಒಪ್ಪಿಗೆ ಸೂಚಿಸಲಾಗಿದೆ. ಗುತ್ತಿಗೆ ಆಧಾರದ ಮೇಲೆ ನೇಮಕಕ್ಕೆ ಅನುಮತಿಸಲಾಗಿದೆ.

 

 

 

ಬೆಂಗಳೂರಿನ ಎಲ್ಲಾ ವಾರ್ಡ್ ಗಳಲ್ಲಿಕ್ಲಿನಿಕ್ ಆರಂಭಿಸಲಾಗುತ್ತಿದೆ. ಇದಕ್ಕಾಗಿ 103 ಕೋಟಿ ಹಣ ನೀಡಲಾಗ್ತಿದೆ ಎಂದರು. ಇನ್ನೂ ಮುರುಘಾಮಠದಲ್ಲಿ ಬಸವೇಶ್ವರರ ಕಂಚಿನ ಪ್ರತಿಮೆ ನಿರ್ಮಾಣಕ್ಕೆ ಅನುಮತಿ ನೀಡಿದ್ದೆವು. 20 ಕೋಟಿ ಅನುದಾನವನ್ನ ನೀಡಲಾಗಿತ್ತು. ಉಳಿದ 10 ಕೋಟಿ ಬಿಡುಗಡೆಗೆ ಅನುಮತಿ ನೀಡಲಾಗಿದೆ ಎಂದು ಹೇಳಿದ್ದಾರೆ.

LEAVE A REPLY

Please enter your comment!
Please enter your name here