ಬಿಬಿಎಂಪಿಗೆ ಎರಡು ಲಕ್ಷ ರಾಷ್ಟ್ರಧ್ವಜಗಳ ಹಸ್ತಾಂತರ

Date:

ಬೆಂಗಳೂರು : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವತಿಯಿಂದ ಸ್ವಾತಂತ್ರ್ಯದ ಅಮೃತ ಮಹೋತ್ಸವ ಪ್ರಯುಕ್ತ ಬಿಬಿಎಂಪಿಗೆ ಎರಡು ಲಕ್ಷ ರಾಷ್ಟ್ರಧ್ವಜಗಳ ಹಸ್ತಾಂತರ ಮಾಡಲಿದೆ. ಬೆಂಗಳೂರು ನಗರದ ಪ್ರತಿಯೊಂದು ಮನೆಗಳಲ್ಲಿ ರಾಷ್ಟ್ರಧ್ವಜ ರಾರಾಜಿಸುವಂತೆ ಮಾಡಲು ಇಲಾಖೆಯಿಂದ ಬೆಂಗಳೂರು ಮಹಾನಗರ ಪಾಲಿಕೆಗೆ 2 ಲಕ್ಷ ಧ್ವಜಗಳನ್ನು ಹಸ್ತಾಂತರಿಸಲಾಗುತ್ತಿದೆ. ಈ ಧ್ವಜಗಳನ್ನು ಬಿಬಿಎಂಪಿ ಪ್ರತಿ ಮನೆಗಳಿಗೂ ವಿತರಣೆ ಮಾಡಲಿದೆ.

ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಅಂಗವಾಗಿ ಆಗಸ್ಟ್ 8ರಿಂದ ಆ.17ರ ವರೆಗೆ ಕೇಂದ್ರ ಸರ್ಕಾರ ಸೂಚಿಸಿದಂತೆ ದೇಶಾದ್ಯಂತ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅಲ್ಲದೆ ಪ್ರತಿಯೊಂದು ಮನೆ ಹಾಗೂ ಅಂಗಡಿಗಳ ಮುಂದೆ ತಿರಂಗ ಹಾರಿಸುವಂತೆ ಸೂಚನೆ ನೀಡಲಾಗಿದೆ. ಈ ನಡುವೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸ್ವಾತಂತ್ರ್ಯದ ಅಮೃತ ಮಹೋತ್ಸವ ಉನ್ನತ ಮಟ್ಟದ ಸಮಿತಿ ತಿರಂಗ ಅಭಿಯಾನವನ್ನು ಆರಂಭಿಸಲಿದೆ. ಇದರ ಭಾಗವಾಗಿ 2 ಲಕ್ಷ ರಾಷ್ಟ್ರಧ್ವಜಗಳನ್ನು ಬಿಬಿಎಂಪಿಗೆ ಹಸ್ತಾಂತರಿಸಲಾಗುತ್ತಿದ್ದು, ಅಧಿಕಾರಿಗಳು ಪ್ರತಿ ಮನೆಗಳಿಗೂ ಧ್ವಜಗಳನ್ನು ವಿತರಣೆ ಮಾಡಲಿದ್ದಾರೆ.

Share post:

Subscribe

spot_imgspot_img

Popular

More like this
Related

ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ!

Anushka Shetty: ಖ್ಯಾತ ಉದ್ಯಮಿಯ ಕೈಹಿಡಿಯಲಿದ್ದಾರಂತೆ ನಟಿ ಅನುಷ್ಕಾ ನಟಿ! ಸೌತ್ ಇಂಡಿಯಾದ...

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು

ಮಹಿಳೆಯರ ಆರೋಗ್ಯಕ್ಕಾಗಿ ದಿನನಿತ್ಯ ಪಾಲಿಸಬೇಕಾದ 7 ಸರಳ ಅಭ್ಯಾಸಗಳು ಮಹಿಳೆಯರ ಜೀವನ ಕಾರ್ಯಭಾರಗಳಿಂದ...

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು

ಗಾಂಜಾ ಅಮಲಿನಲ್ಲಿ ಆಟೋ ಚಾಲನೆ: ಸರಣಿ ಡಿಕ್ಕಿ, ಚಾಲಕನಿಗೆ ಸಾರ್ವಜನಿಕರ ಧರ್ಮದೇಟು ಹಾಸನ:...

ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ

ಹೋಟೆಲ್ ಬಿಲ್‌ʼಗಳಲ್ಲಿ ಹೆಚ್ಚುವರಿ ಗ್ಯಾಸ್ ಶುಲ್ಕ ಸೇರ್ಪಡೆ: ಗ್ರಾಹಕರಿಂದ ಆಕ್ರೋಶ ಬೆಂಗಳೂರು: ದೇಶಾದ್ಯಂತ...