ಹೆಡ್ ಬುಷ್ ಟಾಪ್ ಗೆ ಬರಲು ಶೂನ್ಯ ಕೊಡುಗೆ…!

0
102

ವಿಭಿನ್ನ ಆಲೋಚನೆ ಹಾಗೂ ಕಲ್ಪನೆಗಳಿದ್ದರೆ , ಕನ್ನಡ ಚಿತ್ರರಂಗ ಅವರನ್ನ ಬಾಚಿ ತಬ್ಬಿಕೊಳ್ಳುತ್ತದೆ ಅನ್ನೋದ್ರಲ್ಲಿ ಸಂದೇಹವಿಲ್ಲ . ಯಾಕೆ ಈ ವಿಚಾರ ಅಂದ್ರೆ ಇಲ್ಲೊಬ್ಬ ಸ್ಪೆಷಲ್ ಡೈರೆಕ್ಟರ್ ಬಗ್ಗೆ ಇವತ್ತು ಬರೆಯಲಾಗುತ್ತೆ . ಅವರೇ ಶೂನ್ಯ..

ಹೆಸರು ಶೂನ್ಯ ಆದರೇ ಆಲೋಚನೆ ಹಾಗೂ ಕೆಲಸ ಮಾತ್ರ ಸಂಪೂರ್ಣ. ಶೂನ್ಯ ಕನ್ನಡ ಇಂಡಸ್ಟ್ರಿಯ ಎಂಗ್ and Talented ಡೈರೆಕ್ಟರ್. ಇವರು ಹೆಡ್ ಬುಷ್ ಸಿನಿಮಾದ ಮೂಲಕ ಸಖತ್ ಸೌಂಡ್ ಮಾಡ್ತಿದ್ದಾರೆ . ಧನಂಜಯ ಅನ್ನುವ ನಟ ರಾಕ್ಷಸ ಅಭಿನಯದ ಈ ಹೆಡ್ ಬುಷ್ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು . ಆ ನಿರೀಕ್ಷೆಗಳನ್ನ ಹುಸಿ ಮಾಡದೆ , ಪ್ರೇಕ್ಷಕ ಪ್ರಭು ಅಬ್ಬಾ ಎಂದು ಫುಲ್ ಮಾಕ್ಸ್ ಕೊಡುವ ಹಾಗೆ ಚಿತ್ರವನ್ನ ನಿರ್ದೇಶಿಸಿದ್ದಾರೆ.


ಈ ಸಿನಿಮಾ ಎಂಬತ್ತರ ದಶಕಕ್ಕೆ ಕರೆದೊಯ್ಯುವುದುರಲ್ಲಿ , ಶೂನ್ಯ ನೂರಕ್ಕೆ ನೂರು ಯಶಸ್ವಿ ಆಗಿದ್ದಾರೆ. ಡಾನ್ ಜಯರಾಜ್ ಪಾತ್ರವನ್ನು ತದ್ರೂಪ ಇಳಿಸುವುದರಲ್ಲಿ ಸೈ ಎನಿಸಿಕೊಂಡಿದ್ದಾರೆ . ಹಾಗೇನೆ ಜಾತ್ರೆ ಸನ್ನಿವೇಶಗಳು ಬಹಳ ಚಿತ್ರದಲ್ಲಿ ನೋಡಿರ್ತಿವಿ . ಆದರೆ , ಕರಗ ಸನ್ನಿವೇಶದಲ್ಲಿ ಶೂನ್ಯ ಅವರ ನಿರ್ದೇಶನ ಅತ್ಯದ್ಬುತ . ಅಲ್ಲದೆ , ಚಿತ್ರದ ಪ್ರತಿ ಫ್ರೇಮ್ ನಲ್ಲಿ ಬರಿ ನಟರೆ ಅಲ್ಲ ನಿರ್ದೇಶಕನ ಕೈಚಳಕ ಎದ್ದು ಕಾಣುತ್ತದೆ. ಅಗ್ನಿ ಶ್ರೀಧರ್ ರವರು ಬರೆದ ಸತ್ಯ ಘಟನೆಯ ಕಥೆಗೆ ನಿರ್ದೇಶಕ ಶೂನ್ಯ ಫುಲ್ ಮಾರ್ಕ್ಸ್ ಗಿಟ್ಟಿಸಿಕೊಂಡಿದ್ದಾರೆ.

ಚಿತ್ರವನ್ನ ನೋಡಿದ ಪ್ರತಿಯೊಬ್ಬರೂ ಶೂನ್ಯ ಅವರ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡುತ್ತಿದ್ದಾರೆ ‌ . ಹಾಗೇನೆ ಸಾಕಷ್ಟು ಭರವಸೆಯನ್ನ ಶೂನ್ಯ ತಮ್ಮ ಕೈಚಳಕದ ಮೂಲಕ ಕ್ರಿಯೇಟ್ ಮಾಡಿದ್ದಾರೆ .

ಇನ್ನೂ ಸಿನಿಮಾದ ಬಗ್ಗೆ ಸಾಕಷ್ಟು ಮೆಚ್ಚುಗೆಯ ಮಾತುಗಳು ಕೇಳಿಬರುತ್ತಿವೆ . ಡಾಲಿ ಧನಂಜಯ ಆ್ಯಕ್ಟಿಂಗ್ ಬೆಂಕಿಯಂತೆ ಪ್ರಜ್ವಲಿಸಿದ್ರೆ , ಲೂಸ್ ಮಾದ ಯೋಗಿ ಆದಿಯಾಗಿ ಪ್ರತಿಯೊಬ್ಬರೂ ಅವರವರ ಪಾತ್ರಕ್ಕೆ ಜೀವ ತುಂಬಿದ್ದಾರೆ . ಇನ್ನೂ ಸಿನಿಮಾ ನೋಡ್ತಾ ನೋಡ್ತಾ ಪ್ರೇಕ್ಷಕರನ್ನ ಹಳೆ ಬೆಂಗಳೂರು ಅಂಡರ್ ವರ್ಡ್ ಗೆ ಕರೆದುಕೊಂಡು ಹೋಗಿತ್ತೆ . ಕ್ಯಾಮರಾ ವರ್ಕ್ ಹಾಗೂ ಸ್ಕ್ರೀನ್ ಪ್ಲೇ ಗೆ ಪ್ರೇಕ್ಷಕರು ಫಿದಾ ಆಗಿದ್ದಾರೆ . ಅಷ್ಟೇ ಅಲ್ಲಾ ಚಿತ್ರದಲ್ಲಿ ಮೂಡಿಬಂದ ಸಂಗೀತ ಸಂಗೀತ ಪ್ರೀಯರು ವಾವ್ ಅನ್ನುವಂತೆ ಮಾಡಿದೆ ‌. ಇನ್ನೂ ಪ್ರೇಕ್ಷಕರು ಹೇಳುವ ಪ್ರಕಾರ ಸಿನಿಮಾ ಟೋಟಲಿ ಸೂಪರ್ , ಬಟ್ interval ಮುಂಜೆ ಕಥೆಯನ್ನ ಕೊಂಚ ಡ್ರ್ಯಾಗ್ ಮಾಡಿದ ಹಾಗಾಯ್ತು. ಅದ್ನಾ ಬಿಟ್ರೆ ನಿರ್ದೇಶಕ ಶೂನ್ಯ ಹೆಡ್ ಬುಷ್ ಸಿನಿಮಾವನ್ನ ಟಾಪ್ ಲೇವಲ್ ಗೆ ತೆಗೆದುಕೊಂಡು ಹೋಗಿದ್ದಾರೆ ಪ್ರೇಕ್ಷಕ ಪ್ರಭು .

ಈ ಡಾಲಿ ಸಿನಿ ಕೇರಿಯರ್ ನಲ್ಲಿ ಕಲೆಕ್ಷನ್ ದಾಖಲೆ ಸೃಷ್ಟಿಸಿದೆ . 494Screens ನಲ್ಲಿ ಹೆಡ್ ಬುಷ್ ಪ್ರದರ್ಶನಗೊಂಡಿದ್ದು , 1127 ಪ್ರದರ್ಶನಗಳು ಪ್ರದರ್ಶನಗೊಂಡಿವೆ . ಒಟ್ಟು ಕಲೆಕ್ಷನ್ 4.23Cr ಗ್ರಾಸ್ ಎಂದು ಹೇಳಲಾಗಿದೆ .

LEAVE A REPLY

Please enter your comment!
Please enter your name here