ಬೆರಳಲ್ಲಿ ಇಲ್ಲದ ಚಿನ್ನದುಂಗುರ ಹಾಡಿನಲ್ಲಿತ್ತು…

Date:

ಹಾಡಿನ ಜಾಡು ಹಿಡಿದು….

||ಸಂಗೀತಕ್ಕೆ ಮನಸೋಲದೇ ಇರೋರು ಇದ್ದಾರ? ಖಂಡಿತಾ ಇಲ್ಲ…!‌ ಕೆಲವು ಸಿನಿಮಾ ಹಾಡುಗಳನ್ನಂತು ಪದೇ ಪದೇ ಗುನುಗುತ್ತಿರುತ್ತೇವೆ. ಕೆಲವೊಂದು ಹಾಡುಗಳಿಗೆ ಕೇಳುಗರಾದ ನಾವು-ನೀವು ನಮ್ಮದೇ ಆದ ಅರ್ಥ ಕಂಡುಕೊಂಡಿರುತ್ತೇವೆ. ಆದರೆ, ಎಷ್ಟೋ ಹಾಡುಗಳ ಬಗ್ಗೆ ನಾವು ಅಂದುಕೊಂಡಿರೋದೇ ಬೇರೆ, ರಚನೆಕಾರರು ಬರೆಯುವಾಗ ಕಲ್ಪಿಸಿಕೊಂಡಿರೋದೇ ಬೇರೆ ಆಗಿರುತ್ತೆ..!
ನಾವಿಲ್ಲಿ ಕೆಲವೊಂದು ಕನ್ನಡ ಹಾಡುಗಳ ಹುಟ್ಟಿನ ಮೂಲ ಮತ್ತು ರಚನೆಗಾರರು ಯಾವ ಅರ್ಥದಲ್ಲಿ ಬರೆದಿದ್ದಾರೆ ಎಂಬುದನ್ನು ಹೇಳುವ ಪ್ರಯತ್ನ ಮಾಡುತ್ತಿದ್ದೇವೆ…||

ಭಾಗ-11

ಬೇಡಿ ಬಂದವಳು

‘ನೀರಿನಲ್ಲಿ ಅಲೆಯ ಉಂಗುರ, ಭೂಮಿ ಮೆಲೆ ಹೂವಿನುಂಗುರ, ಮನ ಸೆಳೆದ ನಲ್ಲ ಕೊಟ್ಟನಲ್ಲ ಕೆನ್ನೆ ಮೇಲೆ ಪ್ರೇಮದುಂಗುರ’. ಅಬ್ಬಾ ಈ ಸಾಲುಗಳನ್ನ ಕೇಳ್ತಾ ಇದ್ರೆ ಮುದ್ದಾದ ಪ್ರೇಮಿಗಳ ನಡುವೆ ನಡೆಯೋ ಸರಸ, ವಿರಸಗಳನ್ನೇ ಅಕ್ಷರ ರೂಪದಲ್ಲಿ ಇಳಿಸಿ, ಹಾಡು ಮಾಡಲಾಗಿದೆ ಅನಿಸುತ್ತೆ. `ಬೇಡಿ ಬಂದವಳು’ ಸಿನ್ಮಾದ ಈ ಹಾಡನ್ನ ಬರೆದದ್ದು, ಆರ್.ಎನ್ ಜಯಗೋಪಾಲ. ಈ ಹಾಡು ಹುಟ್ಟಿದ್ದರ ಹಿಂದೆ ಒಂದು ಅದ್ಭುತ ಕತೆಯಿದೆ. ನಾಯಕ ಹಾಗೂ ನಾಯಕಿ ಇಬ್ಬರೂ ಮೋಹಕ್ಕೆ ಒಳಗಾಗಿರ್ತಾರೆ. ಇಂತ ಸನ್ನಿವೇಶದಲ್ಲಿ ಬರೋ ಒಂದು ರೊಮ್ಯಾಂಟಿಕ್ ಲವ್ ಸಾಂಗ್ ಬರ್ದು ಕೊಡು ಅಂತ ನಿರ್ದೇಶಕರು ಕೇಳಿದ್ರಂತೆ.


ಇನ್ನು ಆರ್.ಎನ್.ಜೆ ಹಾಡು ಬರೆಯೋಕೆ ಕುಳಿತಾಗ ಒಂದೂ ಹೊಳೆಯಲೇ ಇಲ್ಲ. ಅವ್ರಿಗೆ ಕೈಯಲ್ಲಿರೋ ಉಂಗುರವನ್ನು ಆಗಾಗ ತಿರುವೋ ಅಭ್ಯಾಸ. ಆದ್ರೆ ಅವತ್ತು ಹಾಗೆ ಮಾಡಿದಾಗ ಬೆರಳಲ್ಲಿ ಅವ್ರ ಉಂಗುರ ಇರಲೇ ಇಲ್ಲ. ತಕ್ಷಣ ನೆನಪಾಯ್ತು ಸ್ನಾನಕ್ಕೆ ಹೋಗುವಾಗ ರಿಂಗ್‍ನ್ನು ಹೋಟೆಲ್ ರೂಮ್‍ನ ಟೇಬಲ್ ಮೇಲೆ ಇಡೋಕೆ ಹೋದಾಗ ಅದು ಮಿಸ್ ಆಗಿ ನೀರಿನೊಳಗೆ ಬೀಳೊ ಚಾನ್ಸ್ ಇತ್ತು. ಕೊನೆಗೂ ಅದನ್ನ ಬಚಾವು ಮಾಡಿ ಮತ್ತೆ ಟೇಬಲ್ ಮೇಲೆ ಇಟ್ಟಿದ್ದು ನೆನಪಾಗಿ ಸ್ವಲ್ಪ ನಿರಾಳರಾದ್ರು. ಅದೇ ರಿಂಗು ನೀರಿನೊಳಗೆ ಬಿದ್ದಿದ್ರೆ ಅದರ ಸುತ್ತ ನೀರಿನ ಅಲೆಗಳು ಏಳುತಿದ್ವು, ಅಂತ ಯೋಚಿಸಿದ್ರು. ಮಿಂಚಿನಂತೆ `ನೀರಿನಲ್ಲಿ ಅಲೆಯ ಉಂಗುರ’ ಅನ್ನೋ ವಜ್ರದಂತಹ ಸಾಲುಗಳು ಹೊಳೆದ್ವು. ಹೂವು ಬಿದ್ದರೂ, ಹುಡುಗ ಕೆನ್ನೆಗೆ ಮುತ್ತಿಟ್ಟರೂ, ಹುಡುಗಿ ನಾಚಿ ನೀರಾಗಿ ಕಾಲ ಬೆರಳಿನಿಂದ ರಂಗೋಲಿ ಗೀಚುವಾಗಲೂ ಉಂಗುರದಂತ ಗುರುತೇ ಕಾಣಿಸುತ್ತದೆ ಅನ್ನೋದೆಲ್ಲವನ್ನು ಮನದಲ್ಲಿಯೇ ಯೋಚ್ನೆ ಮಾಡಿ ಒಂದೊಂದೆ ಸಾಲುಗಳನ್ನ ಬರೆದ್ರು ಆರ್.ಎನ್.ಜಯಗೋಪಾಲ್. ಆದ್ರೆ ಹಾಡು ಬರೆದು ಹೋಟೇಲ್‍ಗೆ ಹೋಗಿ ನೊಡಿದ್ರೆ ಟೇಬಲ್ ಮೇಲೆ ಇಟ್ಟಿದ್ದೆ ಅನ್ಕೊಂಡಿದ್ದ ಅವ್ರ ಉಂಗುರ ಇರಲೇ ಇಲ್ವಂತೆ. ಕೊನೆಗೆ ಆ ಗೋಲ್ಡನ್ ರಿಂಗ್ ಸಿಗಲೇ ಇಲ್ಲ. ಆದ್ರೆ ಗೋಲ್ಡನ್ ವರ್ಡ್‍ಗಳು ಇರೋ ಬ್ಯೂಟಿಫುಲ್ ಹಾಡನ್ನ ನಮ್ಗೆ ಗಿಫ್ಟ್ ಆಗಿ ನೀಡಿದ್ದಾರೆ ಆರ್.ಎನ್.ಜೆ.

-ಅಕ್ಷತಾ

https://www.youtube.com/watch?v=6H4ZktyxuKQ

 

 

 

Share post:

Subscribe

spot_imgspot_img

Popular

More like this
Related

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್

ಹಾಸನಾಂಬೆ ದೇವಾಲಯದ ಗರ್ಭಗುಡಿ ಬಾಗಿಲು ಓಪನ್ ಹಾಸನ: ಐತಿಹಾಸಿಕ ಪ್ರಸಿದ್ಧ ಹಾಸನಾಂಬೆ ದೇವಸ್ಥಾನದ...

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್!

ಬಂಗಾರದ ಬೆಲೆ ಏರಿಕೆ! ಬೆಳ್ಳಿಯೂ ದುಬಾರಿ, ಹೀಗಿದೆ ಇಂದಿನ ರೇಟ್! ಚಿನ್ನ ಖರೀದಿಗೆ...

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ!

ಕರ್ನಾಟಕದ 12 ಜಿಲ್ಲೆಗಳಲ್ಲಿ ವಿಪರೀತ ಮಳೆ: ಬೆಂಗಳೂರಿಗೆ ಯೆಲ್ಲೋ ಅಲರ್ಟ್ ಘೋಷಣೆ! ಬೆಂಗಳೂರು:...

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್

ನನ್ನ ಹೆಸರು ನೆನಪಿಸಿಕೊಳ್ಳದಿದ್ದರೆ ಕುಮಾರಸ್ವಾಮಿಗೆ ನಿದ್ದೆ ಬರುವುದಿಲ್ಲ: ಡಿ.ಕೆ.ಶಿವಕುಮಾರ್ ಬಿಗ್ ಬಾಸ್ ಕಾರ್ಯಕ್ರಮ...