ಗುಂಡು ಪ್ರಿಯರಿಗೆ ಇಲ್ಲೊಂದು ಶುಭ ಸುದ್ದಿಯೊಂದು ಕಾದಿದೆ ನೋಡಿ. ನಿಮ್ಮ ನೆಚ್ಚಿನ ಮಧ್ಯ ಬಿಯರ್ ಆಗಿದ್ರೆ ಈ ಸ್ಟೋರಿ ನೋಡಿ ಖುಷಿ ಪಡೋದಂತೂ ಖಂಡಿತಾ ಸತ್ಯ..! ಯಾಕಂದ್ರೆ ಹಾಲಿಗಿಂತ ಬಿಯರ್ ಆರೋಗ್ಯಕ್ಕೆ ಒಳ್ಳೇದು ಎಂದು ವರದಿಯೊಂದು ಹೇಳಿದೆ. ಈ ರೀತಿಯ ವರದಿಯೊಂದು ನೀಡಿದ್ದು ಬೇರ್ಯಾರೂ ಅಲ್ಲ ಅಮೇರಿಕಾದ ಪೇಟಾ ಸಂಸ್ಥೆ..! ಇದೀಗ ಪ್ರಾಣಿ ಹಿಂಸೆ ವಿರುದ್ದ ಬೃಹತ್ ಪ್ರತಿಭಟನೆ ನಡೆಸುತ್ತಿರೋ ದಿ ಪೀಪಲ್ ಫಾರ್ ಎಥಿಕಲ್ ಟ್ರೀಟ್‍ಮೆಂಟ್ ಆಫ್ ಅನಿಮಲ್ ಸಂಘಟನೆ ಅಮೇರಿಕಾದ ಪ್ರಮುಖ ವಿಶ್ವವಿದ್ಯಾನಿಲಯವೊಂದರಲ್ಲಿ ಈ ಕುರಿತು ಜಾಹಿರಾತು ಕೂಡ ಮಾಡಿದ್ದಾರೆ..! ಇಷ್ಟು ದಿನ ನಮಗೆ ಸಾಕಷ್ಟು ವೈದ್ಯರು ಹಾಲು ಕುಡಿಯಿರಿ ಆರೋಗ್ಯಕ್ಕೆ ತುಂಬಾ ಉಪಯೋಗ ಅಂತ ಇದ್ದ ಸಂದರ್ಭದಲ್ಲಿ ಈ ಸಂಸ್ಥೆ ವಿದ್ಯಾರ್ಥಿಗಳಿಗೆ ಹಾಲಿನ ಬದಲಿಗೆ ಬಿಯರ್ ಕುಡಿದರೆ ಆರೋಗ್ಯಕರವಾಗಿರ್ಬೋದು ಎಂದು ಹೇಳಿದೆ. ಪ್ರತಿನಿತ್ಯ ಹಾಲು ಸೇವನೆಯಿಂದ ಮೂಳೆ ಸವೆತ ಉಂಟಾಗುವ ಲಕ್ಷಣಗಳಿವೆ. ಆದ್ರಿಂದ ಬಿಯರ್ ಕುಡಿಯೋದ್ರಿಂದ ಮೂಳೆ ಗಟ್ಟಿಯಾಗುತ್ತದೆ ಅಂತಾ ಪೇಟಾ ಹೇಳಿದೆ. ಡೈರಿ ಉತ್ಪನ್ನಗಳಿಂದ ಮಾನವರಿಗೆ ಹೃದಯ ಸಂಬಂಧಿ ಕಾಯಿಲೆಗಳು, ಸಕ್ಕರೆ ಕಾಯಿಲೆ ಮತ್ತು ಕ್ಯಾನ್ಸರ್ ಬರುವ ಲಕ್ಷಣಗಳು ಹೆಚ್ಚಿದ್ದು, ಅದೇ ಬಿಯರ್ ಸೇವನೆಯಿಂದ ಈ ಎಲ್ಲಾ ರೋಗಗಳಿಂದ ಪಾರಾಗುವುದಲ್ಲದೇ.. ಉತ್ತಮ ಆರೋಗ್ಯಕರ ದೇಹಕ್ಕೆ ಬಿಯರ್ ಸಹಕಾರಿ ಎಂದು ಪೇಟಾ ತನ್ನ ಬ್ಲಾಗ್‍ನಲ್ಲಿ ಹೇಳಿಕೊಂಡಿದೆ..
Like us on Facebook The New India Times
POPULAR STORIES :
ಟಾಪ್-2 ನಿಂದ ಮೈಕ್ರೋಮ್ಯಾಕ್ಸ್ ಔಟ್.. ನಂ.1 ಯಾರ್ ಗೊತ್ತಾ..?
ಭಾರತದ ಕಾಂಡೋಮ್ ಜಾಹೀರಾತಿಗೆ ಗೇಲ್, ಬ್ರಾವೋ ಸಖತ್ ಸ್ಟೆಪ್
ನಾಳೆ ಮುಕುಂದ ಮುರಾರಿಗೆ ಸಂತು ಸ್ಟ್ರೈಟ್ ಫಾರ್ವರ್ಡ್ ಚಾಲೆಂಜ್..!
ಧೋನಿಯ ಅದ್ಭುತ ರನ್ನೌಟ್ ವೀಡಿಯೋ ವೈರಲ್..!
ವೃತ್ತಿಯಲ್ಲಿ ವಾಟರ್ ಟ್ಯಾಂಕ್ ಡ್ರೈವರ್.. ದಕ್ಕಿದ್ದು ಮಿಸ್ಟರ್ ಏಷ್ಯಾ ಅವಾರ್ಡ್..!
ನಾಗೇಂದ್ರ ಪ್ರಸಾದ್ – ಶುಭಪೂಂಜ ಮದುವೆಯಾದ್ರು.!! ಇನ್‍ಸೈಡ್ ಸ್ಟೋರಿ ಏನು ಗೊತ್ತಾ..?
ದೊಡ್ಡ ನಾಲಿಗೆ ಮಗು..!! ನಗುವನ್ನ ಮರೆತ ಮನೆಯವರು..! ಈಗ ಹೇಗಿದೆ ಗೊತ್ತ ಈ ಪುಟ್ಟ ಜೀವ..?