ಬೇನಾಮಿ ಆಸ್ತಿ ಹೊಂದಿರುವರ ಮೇಲಿದೆ ಮೋದಿಯ ಹದ್ದಿನ ಕಣ್ಣು..!

Date:

ನೋಟ್ ಬ್ಯಾನ್ ಆದ ನಂತರ ದಿನಕ್ಕೊಂದು ನಿಯಮಗಳನ್ನು ತಂದು ಕಪ್ಪು ಕುಳಗಳ ಬೆವರಿಳಿಸುತ್ತಿರುವ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಈಗ ಮತ್ತೊಂದು ಮಾಸ್ಟರ್ ಪ್ಲಾನ್‍ನಿಂದ ಕಾಳಧನಿಕರ ನಿದ್ದೆಗೆಡಿಸಿದ್ದಾರೆ..! ಕಾಳಧನಿಕರು ಕಾನೂನಿಂದ ಪಾರಾಗಬೇಕು ಅಂತ ಬೇನಾಮಿ ಆಸ್ತಿ ಮಾಡಿಕೊಂಡಿದ್ರೆ. ಅದರ ಮೇಲೆ ಮೋದಿ ಕಣ್ಣಿಟ್ಟಿದ್ದಾರೆ ನೋಡಿ..! ಅಕಸ್ಮಾತ್ ಬೇನಾಮಿ ಆಸ್ತಿ ದೊರತಿದ್ದೇ ಆದಲ್ಲಿ ನಿಮ್ಮ ಗ್ರಹಚಾರ ಸರಿ ಇಲ್ಲ ಅಂದ್ಕೊಳ್ಳಿ..! ಯಾಕಂದ್ರೆ ಬೇನಾಮಿ ಆಸ್ತಿ ಹೊಂದಿದವರ ಮೇಲೆ ಮೋದಿ ಬ್ರಹ್ಮಾಸ್ತ್ರ ಹೂಡಲು ರೆಡಿಯಾಗಿದ್ದು, ಬೇನಾಮಿ ಆಸ್ತಿ ಹೊಂದಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮಕ್ಕೆ ಮುಂದಾಗಿದ್ದಾರೆ..! ಇಂತಹ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದಲ್ಲದೆ ಭಾರಿ ಮೊತ್ತದ ದಂಡವನ್ನೂ ವಿಧಿಸುವುದಾಗಿ ಎಚ್ಚರಿಸಿದ್ದಾರೆ.
1998 ರಲ್ಲಿ ಬೇನಾಮಿ ಆಸ್ತಿಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಇದಕ್ಕೊಂದು ಕಾಯಿದೆ ಜಾರಿಯಾಗಬೇಕು ಎಂದು ಹೇಳಿ ಒಂದು ಕಾಯಿದೆ ಜಾರಿಗೆ ಬಂದಿತಾದ್ರೂ ಅವುಗಳಲ್ಲಿದ್ದ ಕೆಲವು ಲೋಪದೋಷಗಳಿಂದ ಸಕ್ಸಸ್ ಕಾಣಲಿಲ್ಲ. ಇದರಿಂದ ಸರ್ಕಾರ ತೆರಿಗೆ ವಂಚಿಸುತ್ತಿರುವ ಕಾಳಧನಿಕರ ಭೇಟೆಗಾಗಿ ಈಗ ಬೇನಾಮಿ ವಹಿವಾಟು ನಿಷೆಧ ತಿದ್ದುಪಡಿ-2016ರ ವಿಧೇಯಕವನ್ನು ಸಂಸತ್‍ನಲ್ಲಿ ಮಂಡಿಸಿ, ಕಾಯ್ದೆಯ ರೂಪಕ್ಕೆ ತರಲಾಗಿದೆ.
ಈ ಕುರಿತಾಗಿ ಪ್ರಧಾನಿ ಮೋದಿ ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಹೇಳಿಕೆ ನೀಡಿರುವ ಮೂಲಕ ಕಪ್ಪು ಕುಳಗಳ ನಿದ್ದೆಗೆಡಿಸಿದ್ದಾರೆ. ಕಾಯಿದೆಯನ್ನು ಕಾರ್ಯರೂಪಕ್ಕಿಳಿಸುವಾಗ ಸರ್ಕಾರ ಯಾವುದೇ ಗುಟ್ಟು ಬಿಟ್ಟುಕೊಟ್ಟಿಲ್ಲ ಅನ್ನೋದೆ ವಿಶೇಷ.
ಬೇನಾಮಿ ಆಸ್ತಿ ಅಂದ್ರೆ ಯಾವ್ದು..?
ಬೇನಾಮಿ ಆಸ್ತಿ ಅಂದ್ರೆ. ಒಬ್ಬ ವ್ಯಕ್ತಿ ತನ್ನ ಹಣದಿಂದ ಬೇರೆಯವರ ಹೆಸರಿನಲ್ಲಿ ಆಸ್ತಿ ಕೊಂಡಿದ್ದರೆ ಅದು ಬೇನಾಮಿ ಆಸ್ತಿಯಾಗುತ್ತೆ. ವ್ಯಕ್ತಿ ತನ್ನ ಪತ್ನಿ, ಮಕ್ಕಳು, ಅಥವಾ ಸಂಬಂಧಿಕರ ಹೆಸರಿನಲ್ಲಿ ಆಸ್ತಿ ಖರೀದಿಸಿ ಅದರಿಂದ ಅನಧಿಕೃತ ಆದಾಯ ಲಭ್ಯವಾಗ್ತಾ ಇದ್ರೆ ಅದು ಬೇನಾಮಿ. ಸರ್ಕಾರಕ್ಕೆ ಲೆಕ್ಕ ತೋರಿಸದೇ ಈ ರೀತಿ ಆಸ್ತಿ ಹೊಂದಿದರೆ ಅವುಗಳು ಬೇನಾಮಿ ಪಾಪರ್ಟಿ ಲಿಸ್ಟ್..!
ವಾಸ್ತವದಲ್ಲಿ ಎಲ್ಲಾ ಕಪ್ಪು ಕುಳಗಳು ಈ ಬೇನಾಮಿ ಆಸ್ತಿಗಳ ಮೂಲಕವೇ ಹೆಚ್ಚು ಆದಾಯ ಪಡೆಯುತ್ತಿದ್ದು, ನಕಲಿ ಗುರುತು ಪತ್ರ ಸೃಷ್ಠಿ ಮಾಡಿ ಮತ್ತೊಬ್ಬನ ಹೆಸರಿನಲ್ಲಿ ಆಸ್ತಿ ಖರೀದಿಸಿ ಅದಕ್ಕೆ ಹಣ ಹೂಡಿಕೆ ಮಾಡ್ತಾನೆ. ಇಂತಹ ಚಿರಾಸ್ಥಿ ಹಾಗೂ ಚರಾಸ್ಥಿಯ ಮೇಲೆ ಮೋದಿ ಕಣ್ಣಿಟ್ಟಿದ್ದು ತಪ್ಪಿತಸ್ಥರ ವಿರುದ್ದ ಕಠಿಣ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ್ದಾರೆ.
ಬೇನಾಮಿ ಆಸ್ತಿದಾರರಿಗೆ ಶಿಕ್ಷೆಯಾದ್ರೂ ಏನು..?
ಬೇನಾಮಿ ಆಸ್ತಿ ನಿಷೇಧ ಕಾಯ್ದೆ ತಿದ್ದುಪಡಿ ಪ್ರಕಾರ ಆಪಾದಿತರಿಗೆ 7 ವರ್ಷ ಕಠಿಣ ಜೈಲು ಶಿಕ್ಷೆ ಕಾಯಂ..!
ಅಕ್ರಮ ಆಸ್ತಿಯ ಮೇಲೆ ಮಾರುಕಟ್ಟೆಯ ಶೇ. 25ರಷ್ಟು ದಂಡ ವಿಧಿಸುವ ಅಧಿಕಾರ
ಬೇನಾಮಿ ಸ್ವತ್ತು ಮುಟ್ಟುಗೋಲು, ವ್ಯಾಜ್ಯ ಇತ್ಯರ್ಥ ವೇಳೆ ವ್ಯಕ್ತಿಯ ಬೇನಾಮಿ ಆಸ್ತಿಯ ಯಾವುದೇ ಪರಿಹಾರ ಸಿಗೊಲ್ಲ..!

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಆಧಾರ್ ಪೇಮೆಂಟ್ ಆ್ಯಪ್ ಬಳಸೋದಾದ್ರೂ ಹೇಗೆ..?

ಎಚ್ಚರ..! ಚೆಕ್ ಬೌನ್ಸ್ ಆದ್ರೆ ಅದು ಜಾಮೀನು ರಹಿತ ಅಪರಾಧ..!

ಕನ್ನಡಿಗರಿಗಿಲ್ಲಿದೆ ಶುಭ ಸುದ್ದಿ: ಖಾಸಗಿ ವಲಯದಲ್ಲಿ ಕನ್ನಡಿಗರಿಗೂ ಮೀಸಲಾತಿ

25 ಪೈಸೆಯಿಂದ ಲಕ್ಷಾಧಿಪತಿಯಾದ್ರು..! ಹೇಗೆ ಗೊತ್ತಾ..?

ಯುವತಿಯನ್ನು ನುಂಗಿದ ಮೊಸಳೆ..! ಅದರ ಅಸಲಿ ಕಥೆ ಏನು ಗೊತ್ತಾ..?

ಡ್ರೆಸ್ ಬಗ್ಗೆ ಕಮೆಂಟ್: ಗಂಡನ ಎದುರೆ ನಡೀತು ಪತ್ನಿಗೆ ಹಲ್ಲೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...