ಉಪವಾಸವೆಂದರೇನು? ಎಂಬ ಪ್ರಶ್ನೆಗೆ ತೀರಾ ಸಿಂಪಲ್ಲಾಗಿ ಸಿಗೋ ಉತ್ತರ ಆಹಾರ ಸೇವನೆ ಮಾಡದೇ ಇರೋದು..ಇದನ್ನೇ ಸ್ವಲ್ಪ ತಿಳಿದವರಲ್ಲಿ ಕೇಳಿದಲ್ಲಿ “ಉಪವಾಸವೆಂಬುದು ಕೇವಲ ಆಹಾರವನ್ನು ತ್ಯಜಿಸುವುದಷ್ಟೇ ಅಲ್ಲ,ಬದಲಾಗಿ ನಮ್ಮಲ್ಲಿರೋ ಕೆಟ್ಟ ವಿಚಾರಗಳನ್ನೂ ತ್ಯಜಿಸಿ ದೇವರ ಧ್ಯಾನದಲ್ಲಿ ಸಂಪೂರ್ಣವಾಗಿ ನಮ್ಮನ್ನು ನಾವು ತೊಡಗಿಸಿಕೊಳ್ಳುವುದು ಎಂದು ಹೇಳುತ್ತಾರೆ…ನಿಜ..ಇದೆಲ್ಲಾನೂ ನಿಜ…ಎಲ್ಲಾ ಧರ್ಮಗಳಲ್ಲೂ ಉಪವಾಸಕ್ಕೆ ತನ್ನದೇ ಆದ ಮಹತ್ವವಿದೆ. ಮುಸಲ್ಮಾನರಲ್ಲಿ ಈದ್ ಗೂ ಮೊದಲು ರೋಜಾ ಮಾಡುತ್ತಿರುವಂತೆ, ಕ್ರಿಶ್ಚಿಯನ್, ಸಿಖ್, ಬೌದ್ಧ ಹೀಗೆ ಎಲ್ಲಾ ಧರ್ಮಗಳಲ್ಲಿ ಉಪವಾಸ ಮಾಡುತ್ತಾರೆ
ಅದರಲ್ಲೂ ಹಿಂದೂ ಸಂಪ್ರದಾಯಗಳಲ್ಲಿ ಈ ನವರಾತ್ರಿಯ 9 ದಿನವೂ ನಿರಂತರ ಉಪ್ವಾಸವಿರುವವರೂ ಇದ್ದಾರೆ.ಯಾಕೆ ಈ ಉಪವಾಸ? ಕೇವಲ ಇದು ದೈವಧ್ಯಾನಕ್ಕಷ್ಟೇ ಸಮರ್ಪಿತವೇ? ಎಂಬ ಪ್ರಶ್ನೆ ನಿಮ್ಮನ್ನೆಂದಾದರೂ ಕಾಡಿದೆಯೇ? ಬನ್ನಿ ತಕ್ಕ ಮಟ್ಟಿಗೆ ಇದಕ್ಕೆ ಉತ್ತರ ಹುಡುಕೋ ಸಣ್ಣ ಪ್ರಯತ್ನ ಮಾಡೋಣವೇ?
ಉಪವಾಸದಿಂದ ನಮ್ಮ ದೇಹಕ್ಕೆ ಅನೇಕ ತರಹದ ಲಾಭವಿದೆಯಂತೆ; ದಿನದ 24 ಘಂಟೆಯೂ ನಮ್ಮ ದೇಹದ ಜೀರ್ಣಾಂಗ ವ್ಯೂಹ ಕೆಲಸ ಮಾಡುತ್ತಿರುತ್ತದೆ, ಹೌದು! ಈಗಿನ ಕಾಲದ ಬಗೆ ಬಗೆಯ ಲೇಟೆಸ್ಟ್ ಮಾದರಿಯ ಆಹಾರಗಳಿಗೆ ಮಾರು ಹೋಗದಿರೋ ತಿಂಡಿಪೋತರಿದ್ದಾರೆಯೇ??? ಮತ್ತೆ ನಮ್ಮ ಜೀರ್ಣ ಅಂಗ ದಣಿಯದಿರುತ್ತದೆಯೇ?
ಹಾಗಾಗಿ ಅದಕ್ಕೆ ಸ್ವಲ್ಪ ರೆಸ್ಟ್ ಬೇಡವೇ???
ಉಪವಾಸದಿಂದ ದೇಹದ ಜೊತೆಜೊತೆಗೆ ನಮ್ಮ ಬ್ರೇನ್ ಮೇಲೂ ಧನಾತ್ಮಕ ಪರಿಣಾಮ ಉಂಟಾಗುತ್ತದಂತೆ. ಪ್ರಸಿದ್ದ ವೈದ್ಯರಾದ ಡಾ!ಆಯಿಜಕ್ ಮಥಾಯಿಯವರ ಹೇಳಿಕೆಯಂತೆ ನಮ್ಮ ದೇಹಕ್ಕೆ ಉಪವಾಸದಿಂದ ಈ ಕೆಳಗಿನ ಲಾಭವಿದೆಯಂತೆ.
ಆರೋಗ್ಯ ಪೂರ್ಣ ತ್ವಚೆ
ಫಾಸ್ಟಿಂಗ್ ಸಮಯದಲ್ಲಿ ಜೀರ್ಣಾಂಗ ವ್ಯೂಹದ ಕೆಲಸ ಕಡಿಮೆಯಿರುವುದರಿಂದ ದೇಹದ ಇತರ ಅಂಗಗಳು ಇನ್ನೂ ವ್ಯವಸ್ತಿತವಾದ ರೀತಿಯಿಂದ ಕೆಲಸ ಮಾಡುತ್ತದೆ,ಇದರಿಂದ ಸ್ಕಿನ್ ಸೆಲ್ಸ್ ರೀಜನರೇಟ್ ಆಗುವುದಲ್ಲದೆ ಚರ್ಮದ ಕಾಂತಿ ಇಮ್ಮಡಿಸುತ್ತದೆ.
ತೂಕ ಇಳಿತ
ಕೆಲವು ದಿನ ಅಥವಾ ಕೆಲವು ಘಂಟೆಗಳ ಉಪವಾಸದಿಂದ ನಮ್ಮ ದೇಹದ ಕೊಬ್ಬನ್ನು ಕರಗಿಸಲು ಸಹಾಯವಾಗುತ್ತದೆ. ವ್ರತಗಳ ಸಂದರ್ಭದಲ್ಲಿ ದೇಹಕ್ಕೆ ಶಕ್ತಿಯ ಅಗತ್ಯವಿರುವುದರಿಂದ ನಮ್ಮ ಶರೀರದಲ್ಲಿ ಶೇಖರಿಸಲ್ಪಟ್ಟಿರೋ ಕೊಬ್ಬನ್ನು ಅದು ಉಪಯೋಗಿಸುವುದರಿಂದ ಕೊಬ್ಬು ಕರಗುವುದಲ್ಲದೆ ತೂಕದಲ್ಲಿ ಇಳಿತವುಂಟಾಗುತ್ತದೆ.
ಬ್ರೇನ್ ಫಂಕ್ಷನ್
ಫಾಸ್ಟಿಂಗ್ ನಿಂದ ಶರೀರದಲ್ಲಿ (B.D.N.F) ಎಂಬ ವಿಶೇಷ ತರಹದ ಪ್ರೋಟೀನ್ ಉತ್ಪಾದನೆಯಾಗುತ್ತದೆ. ಇದು ನಮ್ಮ ಬ್ರೇನ್ ಸೆಲ್ಸ್ ಹಾನಿಗೊಳಗಾಗುವುದನ್ನು ತಪ್ಪಿಸುತ್ತದೆ. ಇದರಿಂದಾಗಿ ನಮ್ಮ ನೆನಪು ಶಕ್ತಿ ಹೆಚ್ಚುತ್ತದೆ.
ಡಿ ಟಾಕ್ಸಿಫಿಕೇಷನ್
ದಿನವಿಡೀ ಏನೂ ತಿನ್ನದಿರುವ ಕಾರಣದಿಂದ ದೇಹದಲ್ಲಿರೋ ಟಾಕ್ಸಿನ್ಸ್ ಹೊರಹಾಕಲ್ಪಡುತ್ತದೆ.ಹೀಗಾಗಿ ದೇಹದ ಎಲ್ಲಾ ಅಂಗಗಳೂ ವ್ಯವಸ್ಥಿತವಾಗಿ ಕೆಲಸ ಮಾಡುತ್ತದೆ.
ರೋಗ ನಿರೋಧಕ ಶಕ್ತಿಯ ಹೆಚ್ಚಳ
ಉಪವಾಸದಿಂದ ದೇಹದ ಬಿಳಿರಕ್ತ ಕಣಗಳು ಹೆಚ್ಚಾಗುತ್ತದೆ,ಇದರಿಂದಾಗಿ ನಮ್ಮ ದೇಹದ ಇಮ್ಯೂನ್ ಸಿಸ್ಟಂ ಹೆಚ್ಚುತ್ತದೆ.
ಡಯಾಬಿಟೀಸ್ ನಿಯಂತ್ರಣ
ದೇಹದ ಇನ್ಸುಲಿನ್ ಸೆನ್ಸಿಟಿವಿಟಿ ಮೇಲೆ ಪಾಸಿಟಿವ್ ಪರಿಣಾಮವುಂಟಾಗುತ್ತದೆ, ದೇಹಕ್ಕೆ ಬೇಕಾಗೋ ಗ್ಲೂಕೋಸ್ ನ್ನು ರಕ್ತದಲ್ಲಿರೊ ಸಕ್ಕರೆಯಂಶದಿಂದ ಪೂರೈಸಲ್ಪಡುತ್ತದೆ. ಇದರಿಂದಾಗಿ ಡಯಾಬಿಟೀಸ್ ನಿಯಂತ್ರಣಕ್ಕೆ ಬರುತ್ತದೆ.
ಉಪವಾಸದ ಸಂದರ್ಭದಲ್ಲಿ ನೀವು ಅನುಸರಿಸಲೇಬೇಕಾದುದು
1.ಉಪವಾಸದ ದಿನಗಳಲ್ಲಿ ವ್ಯಾಯಾಮಗಳಿಂದ ದೂರವಿರಿ. ಈ ಸಂದರ್ಭಗಳಲ್ಲಿ ದೇಹಕ್ಕೆ ಅತ್ಯಧಿಕ ಕ್ಯಾಲರಿ ಅಗತ್ಯವಿರುವುದರಿಂದ, ನಿಮ್ಮನ್ನು ಹಸಿವು, ಸುಸ್ತು ಹಾಗೂ ತಲೆತಿರುಗುವಿಕೆ ಬಾಧಿಸಬಹುದು.
2.ಅಧಿಕ ಒತ್ತಡದ ಕೆಲಸದಿಂದ, ಹಾಗೂ ಕೋಪ ತಾಪಗಳಿಂದ ದೂರವಿರಿ. ಇದರಿಂದಾಗಿ ನಿಮಗೆ ತಲೆನೋವು ಹಾಗೂ ಹೈ.ಬಿ.ಪಿ ಬಾಧಿಸಬಹುದು.
೩.ನಿಮ್ಮ ಫಲಾಹಾರದ ಸಂದರ್ಭದಲ್ಲಿ ಆದಷ್ಟು ಹಣ್ಣುಗಳು,ಎಳನೀರು,ಮಜ್ಜಿಗೆ ನೀರುಗಳನ್ನು ಸೇವಿಸಿ.ಇದರಿಂದಾಗಿ ನಿಮ್ಮ ದೇಹಕ್ಕೆ ಸಾಕಷ್ಟು ನ್ಯೂಟ್ರೀಷಿಯನ್ ಹಾಗೂ ಎನರ್ಜಿ ಸಿಗುತ್ತದೆ.
೪.ಉಪವಾಸ ಮುಗಿಯುತ್ತಿದ್ದಂತೆ,ಹೆವಿ ಡಯಟ್ ಸೇವಿಸದಿರಿ,ಇದರಿಂದಾಗಿ ನಿಮ್ಮ ಜೀರ್ಣ ವ್ಯವಸ್ಥೆಯಲ್ಲಿ ಏರುಪೇರಾಗೋ ಸಾಧ್ಯತೆಗಳು ಹೆಚ್ಚು. ಬೆಳಗ್ಗೆ ಖಾಲಿ ಹೊಟ್ಟೆಗೆ ಜೇನುಹನಿಯಜೊತೆಗೆ ಒಂದು ಗ್ಲಾಸ್ ನಿಂಬೆ ಹಣ್ಣಿನ ಜ್ಯೂಸ್ ಸೇವಿಸಿದಲ್ಲಿ ಉತ್ತಮ ಪರಿಣಾಮಕಾರಿ.ಇದರ ಬದಲಿಗೆ ಬೇರೇ ಹಣ್ಣೂ ಅಥವಾ ತರಕಾರಿಯ ರಸಗಳನ್ನೂ ಸೇವಿಸಬಹುದು. ಇದಾದ ಬಳಿಕವಷ್ಟೇ ಹಿತಮಿತ ವಾದ,ಕಡಿಮೆ ಎಣ್ಣೆಯ ಅಂಶ ಹೊಂದಿದ ಆಹಾರವನ್ನೇ ಸೇವಿಸಿ.
ಫ್ರೆಂಡ್ಸ್!ಇದನ್ನೆಲ್ಲಾ ತಿಳಿದ ಬಳಿಕ,ವರುಷ ಪೂರ್ತಿ ಬಿಡಿ! ಕಡೇ ಪಕ್ಷ …….ವರುಷಕ್ಕೊಂದು ಬಾರಿಯಾದರೂ ಉಪವಾಸ ಮಾಡಲಾರಿರಾ????
- ಸ್ವರ್ಣಲತ ಭಟ್
Like us on Facebook The New India Times
POPULAR STORIES :
ಮತ್ತೊಂದು ಮದುವೆ ವದಂತಿ ಸುಳ್ಳು: ರಾಧಿಕಾ ಕುಮಾರ ಸ್ವಾಮಿ.
24ರ ಹರೆಯದ ಯುವತಿ 68ರ ತಾತನ ಅಚ್ಚರಿಯ ಜುಗಲ್‍ಬಂಧಿ…!
ಲೋಧಾ ಶಿಫಾರಸ್ಸು ಉಲ್ಲಂಘನೆ: 3ನೇ ಟೆಸ್ಟ್ ಪಂದ್ಯ ನಡೆಯೋದು ಬಹುತೇಕ ಡೌಟ್..?
ಪಾಕ್ ವಿರುದ್ದದ ಆನ್ಲೈನ್ ಅರ್ಜಿಯನ್ನು ಆರ್ಕೈವ್ ಪಟ್ಟಿಗೆ ಹಾಕಿ ತನ್ನ ದ್ವಂದ್ವ ನಿಲುವು ಪ್ರದರ್ಶಿದ ಅಮೇರಿಕಾ..!
ಚೆನೈನ ಅಪೋಲೋ ಆಸ್ಪತ್ರೆಗೆ ದಾಖಲಾಗಿರೋ ಜಯಲಲಿತಾ ಈಗ ಹೇಗಿದ್ದಾರೆ?
ಸಲ್ಮಾನ್, ಶಾರುಖ್, ಅಮೀರ್ ಖಾನ್ ಪಾಕಿಸ್ತಾನಕ್ಕೆ ಹೋಗಲಿ : ಸಾದ್ವಿ ಪ್ರಾಚಿ