ದೇಶದೆಲ್ಲೆಡೆ ಭಾರತ್ ಬಂದ್‍ಗೆ ವ್ಯಾಪಕ ಬೆಂಬಲ..!

Date:

ಕೇಂದ್ರ ಸರ್ಕಾರ ಕಾರ್ಮಿಕ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ ಹಾಗೂ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸಲು ವಿಫಲವಾಗುತ್ತಿದೆ ಎಂದು ಶುಕ್ರವಾರ ಹಮ್ಮಿಕೊಂಡಿರುವ ಭಾರತ್ ಬಂದ್ ದೇಶದಾದ್ಯಂತ ವ್ಯಾಪಕ ಬೆಂಬಲ ವ್ಯಕ್ತವಾಗುತ್ತಿದ್ದು. ಸುಮಾರು ಹತ್ತಕ್ಕೂ ಹೆಚ್ಚು ಕಾರ್ಮಿಕ ಸಂಘಟನೆಗಳು ನೀಡಿದ ಕರೆಗೆ ಸೂಕ್ತ ರೀತಿಯ ಪ್ರತಿಕ್ರಿಯೆ ದೊರೆತಿದೆ. ನಾಲ್ಕು ಬೃಹತ್ ಮಹಾನಗರಗಳು ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಬಂದ್ ಸಂಪೂರ್ಣ ಯಶಸ್ವಿಯಾಗಿದೆ, ಕೆಲವೊಂದು ಪ್ರದೆಶಗಳಲ್ಲಿ ಮಾತ್ರ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ವಾಣಿಜ್ಯ ನಗರಿಯಾದ ಮುಂಬೈಗೆ ಇಂದಿನ ಬಂದ್ ಬಿಸಿ ತಟ್ಟಿದ್ದು ಕೆಲವೊಂದು ಸ್ಥಳಗಳಲ್ಲಿ ಅಹಿತಕರ ಘಟನೆ ನಡೆದರೂ ಬಂದ್ ಸಂಪೂರ್ಣ ಯಶಸ್ವಿಯಾಗಿದೆ. ವಿವಿಧ ಕಾರ್ಮಿಕ ಸಂಘಟನೆಗಳು ಇಂದಿನ ಬಂದ್‍ಗೆ ಬೆಂಬಲ ಸೂಚಿಸಿದ್ದ ಕಾರಣ ಕೈಗಾರಿಕಾ ಚಟುವಟಿಕೆಗಳು, ವಾಣಿಜ್ಯ ವಹಿವಾಟುಗಳು ಸಂಪೂರ್ಣವಾಗಿ ಬಂದ್ ಆಗಿದ್ದವು. ಪ್ರಮುಖ ನಗರಗಳಲ್ಲಿ ವಾಹನ ಸಂಚಾರವಿಲ್ಲದೆ ರಸ್ತೆಗಳೆಲ್ಲಾ ಬಿಕೋ ಎನ್ನುತ್ತಿದ್ದರೆ, ಮತ್ತೊಂದೆಡೆ ವಾಹನ ಸಂಚಾರವಿಲ್ಲದೇ ಪ್ರಯಾಣಿಕರು ಪರದಾಡುವ ಪರಿಸ್ಥತಿ ನಿರ್ಮಾಣವಾಗಿತ್ತು.
ಶಾಂತಿಯುತವಾಗಿ ನಡೆದ ಪ್ರತಿಭಟನೆಯಲ್ಲಿ ಕಾರ್ಮಿಕ ಸಂಘಟನೆಗಳು ಕೇಂದ್ರ ಸರ್ಕಾರದ ವಿರುದ್ದ ಘೋಷಣೆಗಳನ್ನು ಕೂಗಿದ್ದರು. ಬಂದ್‍ನ ಮುನ್ನೆಚ್ಚರಿಕೆ ಕ್ರಮವಾಗಿ ಪುಣೆ, ನಾಸಿಕ್, ಮುಂಬೈ ಹಾಗೂ ಬೆಂಗಳೂರು ನಗರಗಳಲ್ಲಿ ವ್ಯಾಪಕ ಪೊಲೀಸ್ ಬಂದೋಬಸ್ತ್ ಮಾಡಲಾಗಿತ್ತು. ಮುಷ್ಕರದಿಂದಾಗಿ ಬ್ಯಾಂಕ್‍ವಹಿವಾಟುಗಳು ಮತ್ತು ಶಾಲಾ ಕಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು.
ನಾವು ಇಂದು ನಡೆಸಿದ ಮುಷ್ಕರಕ್ಕೆ ಕಾರ್ಮಿಕ ಸಂಘಟನೆಗಳು ಉತ್ತಮ ರೀತಿಯಲ್ಲಿ ಸ್ಪಂದಿಸಿದ್ದಾರೆ. ತಿರುಚಿನಾಪಳ್ಳಿಯಲ್ಲಿರುವ ಬಿಎಚ್‍ಇಎಲ್ ಘಟಕದ ಶೇ.90 ರಷ್ಟು ಕಾರ್ಮಿಕರು ಕೆಲಸಕ್ಕೆ ಹಾಜರಾಗದೇ ಬಂದ್‍ನಲ್ಲಿ ಪಾಲ್ಗೊಂಡಿದ್ದಾರೆ ಎಂದು ಸಿಐಟಿಯು ಪ್ರಧಾನ ಕಾರ್ಯದರ್ಶಿ ತಪನ್ ಕುಮಾರ್ ತಿಳಿಸಿದ್ದಾರೆ.

POPULAR  STORIES :

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ

ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಶುಭಾಶಯ ಕೋರಿದ ಪ್ರಧಾನಿ ಮೋದಿ ನವದೆಹಲಿ: ಕನ್ನಡ ರಾಜ್ಯೋತ್ಸವ...

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ!

ಹಾಲು-ನೀರು ಸರಿಯಾದರೂ ಟೀ ರುಚಿಯಾಗಿಲ್ಲವಾ? ಹಾಗಿದ್ರೆ ತಪ್ಪು ಇಲ್ಲಿದೆ ನೋಡಿ! ಭಾರತೀಯರ ಜೀವನದಲ್ಲಿ...

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ ಎಂದ ವಿಶ್ವೇಶ್ವರ ಹೆಗಡೆ ಕಾಗೇರಿ

ಯುಟಿ ಖಾದರ್ ವಿರುದ್ದ ಭ್ರಷ್ಟಾಚಾರ ಆರೋಪ: ಹಾಲಿ ನ್ಯಾಯಾಧೀಶರಿಂದ ತನಿಖೆ ನಡೆಯಲಿ...