ಕಾಂಗ್ರೆಸ್ ಕೈಗೊಂಡಿರುವ ಭಾರತ್ ಜೋಡೋ ಯಾತ್ರೆ ಸಂಬಂಧ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಈ ಸಂಬಂಧ ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದು ಎಐಸಿಸಿಯಿಂದ ರಾಹುಲ್ ಗಾಂಧಿಯವರು ಭಾರತ್ ಜೋಡೋ ವಿಚಾರವಾಗಿ ಚರ್ಚೆ ಆಗುತ್ತಿದೆ. ಹರಿಪ್ರಸಾದ್ ಮುಖಂಡತ್ವದಲ್ಲಿ ಈ ಕಾರ್ಯಕ್ರಮ ನಡೆಸಲಾಗ್ತಿದೆ. ಪ್ರತಿ ದಿನ ಎಷ್ಟು ಕಿಮೀ ನಡೆಯಬೇಕು ಅಂತ ಚರ್ಚೆ ಮಾಡಲಾಗ್ತಿದೆ. ಸೆ7 ನೇ ತಾರೀಕು ರಾಜೀವ್ ಗಾಂಧಿಯವರ ಸಮಾಧಿಗೆ ನಮಿಸಿ ನಂತರ ಕನ್ಯಾ ಕುಮಾರಿಯಿಂದ ಪಾದಯಾತ್ರೆ ಮಾಡಲಾಗ್ತಿದೆ. ನಮ್ಮ ರಾಜ್ಯದಲ್ಲಿ 511 ಕಿಮೀ ನಡಿಗೆ ಆಗಲಿದೆ. ಕೆಲವು ಕಡೆ ಫಾರೆಸ್ಟ್ ಇದೆ ಹೀಗಾಗಿ ಪೊಲೀಸರೊಂದಿಗೆ ಚರ್ಚೆ ಮಾಡಿ ತೀರ್ಮಾನ ಮಾಡಲಾಗುತ್ತದೆ. 21 ದಿನ ನಮ್ಮ ರಾಜ್ಯದಲ್ಲಿ ಪಾದಯಾತ್ರೆ ಇರಲಿದೆ. ನಾವು ಪೂರ್ಣ ಯೋಜನೆ ಬಗ್ಗೆ ತಿಳಿಸುತ್ತೇನೆ. ಚಿತ್ರದುರ್ಗ, ತುಮಕೂರು, ಮೈಸೂರು, ಮಂಡ್ಯ ನಾನು ಖುದ್ದಾಗಿ ಹೋಗಿದ್ದೇನೆ. ಸಮಯವನ್ನು ದೆಹಲಿಯವರು ತೀರ್ಮಾನ ಮಾಡ್ತಾರೆ. ಈ ದೇಶದಲ್ಲಿ ಶಾಂತಿ ಸೌಹಾರ್ದತೆ ಆಗಬೇಕು ಎಂಬ ನಿಟ್ಟಿನಲ್ಲಿ ಈ ಕಾರ್ಯಕ್ರಮ ಆಗುತ್ತಿದೆ. ಈ ದೇಶ ಯಾವ ರೀತಿ ಮುಂದೆ ತೆಗದುಕೊಂಡು ಹೋಗಬೇಕು ಎಂಬುದು ಇದರ ಉದ್ದೇಶ. ಜನರ ಪ್ರೋತ್ಸಾಹ ಚೆನ್ನಾಗಿದೆ. ಪೊಲಿಟಿಕಲ್ ಅಫೈರ್ ಮೀಟಿಂಗ್ ಕರೆಯಲಾಗುತ್ತದೆ. ಆಗ ಎಲ್ಲಾ ವಿಚಾರ ಚರ್ಚೆ ಮಾಡಿ ಅಂತಿಮ ಯೋಜನೆ ರೂಪಿಸುತ್ತೇವೆ ಎಂದು ಹೇಳಿದ್ದಾರೆ.
ಭಾರತ್ ಜೋಡೋ ಯಾತ್ರೆ ಸಂಬಂಧ ಕ ಡಿಕೆ ಶಿವಕುಮಾರ್ ಹೇಳಿದ್ದೇನು ?
Date: