No menu items!
5.1 C
Munich
Saturday, April 18, 2026

ವಿಕಿಪೀಡಿಯ’ ಸಿನಿಮಾದ ಮೆಲೋಡಿ ಸಾಂಗ್ ರಿಲೀಸ್…

Must read

ಸೋಮು ಹೊಯ್ಸಳ ನಿರ್ದೇಶನದಲ್ಲಿ ಮೂಡಿಬಂದಿರುವ ವಿಕಿಪೀಡಿಯ ಸಿನಿಮಾ ಇದೀಗ ಸಮಸ್ತ ಪ್ರೇಕ್ಷಕರ ಕುತೂಹಲದ ಕೇಂದ್ರ ಬಿಂದುವಾಗಿದೆ. ಬದುಕಿಗೆ ಹತ್ತಿರವಾದ, ಎಲ್ಲರ ಮನಸಿಗೆ ನಾಟುವಂತಹ ಕಥೆಯೊಂದನ್ನು ಎಣೆದಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಈಗಾಗಲೇ ಟ್ರೇಲರ್ ಮೂಲಕ ಸಾಕಷ್ಟು ನಿರೀಕ್ಷೆ ಹೆಚ್ಚಿಸಿರುವ ವಿಕಿಪೀಡಿಯ ಸಿನಿಮಾ 26ಕ್ಕೆ ತೆರೆಗೆ ಬರ್ತಿದ್ದು, ಹೀಗಾಗಿ ಚಿತ್ರತಂಡ ಒಂದೊಂದೇ ಹಾಡುಗಳನ್ನು ಅನಾವರಣ ಮಾಡ್ತಿದೆ. ಇದೀಗ ಮೋಡಕ್ಕೆ‌ ಮೋಡ ಎಂಬ ಮೆಲೋಡಿ ಗಾನಲಹರಿಯನ್ನು ಬಿಡುಗಡೆ ಮಾಡಿದ್ದು, ಈ ಹಾಡು ಕೇಳುಗರನ್ನು ಮಂತ್ರ‌ ಮುಗ್ದರನ್ನಾಗಿ ಮಾಡುತ್ತಿದೆ.

ಪ್ರಮೋದ್ ಮರವಂತೆ ಅರ್ಥಪೂರ್ಣ ಸಾಹಿತ್ಯದ ಹಾಡಿಗೆ ರಾಕ್ ಅಂಡ್ ನಿಲ್ ಸೊಗಸಾದ ಮ್ಯೂಸಿಕ್ ನೀಡಿದ್ದು, ರಘು ದೀಕ್ಷಿತ್ ಕಂಠಸಿರಿಯಲ್ಲಿ ಮೂಡಿಬಂದಿರುವ ಹಾಡಿಗೆ ಭಾರೀ ಮೆಚ್ಚುಗೆ ವ್ಯಕ್ತವಾಗ್ತಿದೆ. ಹಲವರು ಧಾರಾವಾಹಿಗಳಲ್ಲಿ ಮಿಂಚಿರುವ ಯಶವಂತ್ ಹೀರೋ ಆಗಿ ಬಣ್ಣ ಹಚ್ಚಿದ್ದು, ಇವರಿಗೆ ಜೋಡಿಯಾಗಿ ಆಶಿಕಾ ಸೋಮಶೇಖರ್ ನಟಿಸಿದ್ದಾರೆ. ಡ್ರಾಮಾ, ಎಮೋಷನಲ್, ಲವ್, ಸೆಂಟಿಮೆಂಟ್ ಎಲ್ಲದರ ಮಿಶ್ರಣ ವಿಕಿಪೀಡಿಯ ಚಿತ್ರಕ್ಕೆ ಚಿದಾನಂದ್ ಎಚ್‌.ಕೆ. ಅವರ ಛಾಯಾಗ್ರಹಣ, ರಾಕೇಶ್ ಮತ್ತು ನೀಲಿಮ ಸಂಗೀತ, ರವಿಚಂದ್ರನ್ ಸಿ. ಸಂಕಲನವಿದೆ. ರಫ್ ಕಟ್ ಪ್ರೊಡಕ್ಷನ್ ಅಡಿ ನಿರ್ಮಾಣವಾಗಿರುವ ಸಿನಿಮಾ 26ರಂದು ರಾಜ್ಯಾದ್ಯಂತ ತೆರೆಗೆ ಬರ್ತಿದೆ.

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article