ಬಿಗ್ಬಾಸ್ ನಿಂದ ಬಂದ ಮೇಲೆ ಖುಲಾಯಿಸಿತು ಜಿಮ್ ರವಿ ಲಕ್..!!
ಬಿಗ್ಬಾಸ್ ಮನೆಯಿಂದ ಕಳೆದ ವಾರ ಹೊರ ಬಂದ ಜಿಮ್ ರವಿ ಅವರ ಲಕ್ ಖುಲಾಯಿಸಿದಂತಿದೆ.. ಸಾಮಾನ್ಯವಾಗಿ ಬಿಗ್ಬಾಸ್ ಗೆ ಹೋಗಿ ಬಂದವರಿಗೆ ಸಿನಿಮಾ ಆಫರ್ ಬರೋದು ಕಾಮನ್.. ಯಾಕಂದ್ರೆ ಈ ದೊಡ್ಮನೆ ಸಾಮಾನ್ಯರವರೆಗೂ ಈ ಸ್ಪರ್ಧಿಗಳನ್ನ ತಲುಪಿಸಿ ಬಿಡುತ್ತೆ.. ಹೀಗಾಗೆ ಸದ್ಯ ಎಲಿಮಿನೇಟ್ ಆಗಿ ಬಂದಿರುವ ರವಿ ಅವರಿಗೆ ಸಿನಿಮಾಗಳ ಆಫರ್ ಹುಡುಕಿಕೊಂಡು ಬರುತ್ತಿದೆ..
ಈಗಾಗ್ಲೇ ಹಲವು ನಾಯಕರಿಗೆ ಜಿಮ್ ಟ್ರೈನರ್ ಆಗಿ ಹಾಗೆ ಖಳನಟರಾಗಿ ಗುರುತಿಸಿಕೊಂಡಿರುವ ಜಿಮ್ ರವಿ, ಇದೆ ಮೊದಲ ಬಾರಿಗೆ ನಾಯಕನಾಗಿ ಅಭಿನಯಿಸಲ್ಲಿದ್ದಾರೆ.. ಹೌದು, ಈಗಾಗ್ಲೇ ಮೂರು ಕತೆಗಳು ಹುಡುಕಿಕೊಂಡು ಬಂದಿದ್ದು ಮಾತುಕತೆ ನಡೆಯುತ್ತಿದೆಯಂತೆ.. ತನ್ನ ಹಿತೈಷಿಗಳೊಂದಿಗೆ ಮಾತನಾಡಿ ಸಿನಿಮಾವನ್ನ ಒಪ್ಪಿಕೊಳ್ಳುವುದಾಗಿ ತಿಳಿಸಿದ್ದಾರೆ.. ಜೊತೆಗೆ ಸ್ಪೋರ್ಟ್ಸ್ ಸಬ್ಜೆಕ್ಟ್ ಇರುವ ಕಥೆಗಳು ನನಗೆ ಸೂಟ್ ಆಗುವುದರಿಂದ ಅಂತ ಸಿನಿಮಾದಲ್ಲಿ ನಟಿಸಬೇಕು ಎಂಬ ಹಂಬಲವಿದೆ ಎಂದಿದ್ದಾರೆ..