ಬಿಗ್‍ಬಾಸ್ ಮನೇಲಿ ಪ್ರೈಮರಿ ಸ್ಕೂಲ್ ಟಾಸ್ಕ್ ಕೂಡ ನಡೀತಾ ಇದ್ದು, ಅದರಲ್ಲಿ ಹೆಡ್ ಮಾಸ್ಟರ್ ಪ್ರಥಮ್..! ಗುರುವಾರದ ಸಂಚಿಕೆಯಲ್ಲಿ ಶಾಲೆಯಲ್ಲಿ ಯಾವುದೇ ಪಾಠ ಪ್ರವಚನಗಳು ನಡೆಯಲಿಲ್ಲ ಬದ್ಲಾಗಿ ನಿನ್ನೆ ಬಿಗ್‍ಬಾಸ್ ಮನೇಲಿ ಶಾಲಾ ವಾರ್ಷಿಕೋತ್ಸವ ನಡೀತು..! ಈ ವಾರ್ಷಿಕೋತ್ಸದಲ್ಲಿ ಮುಖ್ಯ ಅತಿಥಿಯಾಗಿದ್ದ ಹೆಡ್ ಮಾಸ್ಟರ್ ಪ್ರಥಮ್ ಮನೆಯ ಎಲ್ಲಾ ಸದಸ್ಯರ ಕಾಲೆಳೆಯೋಕೆ ಪ್ರಯತ್ನ ಪಟ್ಟಿದ್ದಾನೆ. ವೇದಿಕೆ ಮೇಲೆ ಭಾಷಣ ಶುರು ಹಚ್ಕೊಂಡ ಪ್ರಥಮ್ ಈ ವಾರ ನಾನೇ ಬಾಸ್ ಅನ್ನೋ ರೀತಿ ಮಾತನಾಡಿದ್ದಾರೆ..! ಈ ಶಾಲೆಯಲ್ಲಿ ಎಲ್ಲರೂ ಶಿಸ್ತು ಕಾಪಾಡಬೇಕು. ಬಿಗ್‍ಬಾಸ್ ಪ್ರೈಮರಿ ಸ್ಕೂಲ್‍ನಲ್ಲಿ ಯಾರೂ ಕಿರಿಕ್ ಮಾಡಂಗಿಲ್ಲ..! ಕಿರಿಕ್ ಮಾಡೋಕ್ ಬಂದೋರ್ಗೆ ನಾನು ಕೂತ್ಕೊಳೋಗೂ ಆಗ್ದೇ ಇರೋ ತರ ಕೂಯ್ದಾಕ್ಬಿಟ್ಟಿದೀನಿ..! ಎಂದಿದ್ದಾರೆ ಪ್ರಥಮ್. ಇನ್ನು ವೇದಿಕೆ ಮೇಲೆ ಜೇಬಿನಲ್ಲಿ ಕೈಹಾಕೊಂಡು ಮಾತಾಡೋದು ಸರಿನಾ..? ಎಂದು ಭುವನ್ ಕೇಳಿದ ಪ್ರಶ್ನೆಗೆ ನಾನು ಈ ಸ್ಕೂಲಿಗೆ ಪ್ರಿನ್ಸಿಪಾಲ್ ಇಲ್ಲಿ ಅಯೋಗ್ಯನ್ ತರ ಮಾತಾಡೋಹಾಗಿಲ್ಲ. ನನ್ ಮಾತ್ ಕೇಳುಸ್ಕೊಳೋದಾದ್ರೂ ಕೇಳುಸ್ಕೊಳಿ ಅಂತ ಭುವನ್‍ಗೆ ಖಾರವಾಗಿ ಮಾತಾಡಿದ್ದಾರೆ..! ನಮ್ಮ ಬಿಗ್‍ಬಾಸ್ ಮನೇಲಿ ದೊಡ್ಡೋರ್ನ ತುಂಬಾ ಗೌರವಿಸ್ತಾ ಇದೀನಿ..! ತುಂಬಾ ಇಷ್ಟ ಆದೋರ್ನ ಪ್ರೀತುಸ್ತಾ ಇದೀನಿ..! ಪ್ರೀತುಸ್ತಾನೆ ಇರ್ತೀನಿ..! ಅಂತ ಸಂಜನಾ ಕಡೆ ಕೈ ತೋರ್ಸಿ ಭಾಷಣ ಮಾಡುದ್ರು ಪ್ರಥಮ್..! ನನ್ನ ಶಾಲೇಲಿ ಯಾವ ಕುಟಿಕಾಗಳಿಗೂ ಕುಟುಕೋ ಅವಕಾಶ ಇಲ್ಲ ಎಂದಿರೋ ಪ್ರಥಮ್ ಅವರನ್ನಲ್ಲೇಲ್ಲಾ ಬಾತ್‍ರೂಂ ಏರಿಯಾದಲ್ಲಿ ನೇತು ಹಾಕಿದ್ದಾರಂತೆ..! ಇದಕ್ಕೆಲ್ಲಾ ಒಂದು ಚಾನ್ಸ್ ಗಾಗಿ ಕಾಯ್ತಾ ಇದ್ದ ಕೀರ್ತಿ ಹಾಗೂ ಭುವನ್ ವಿವಿಧ ಆಟೋಟ ಸ್ಪರ್ಧೆಯ ವೇಳೆ ಪ್ರಥಮ್‍ಗೆ ಸಖತ್ ಟಾಂಗ್ ಕೊಟ್ಟಿದ್ದಾರೆ..! ಖ್ಯಾತ ನಟ ವಿರೇಂದ್ರಗೋಪಾಲ್ ವಾಯ್ಸ್ ನಲ್ಲಿ ಮಿಮಿಕ್ರಿ ಮಾಡಿದ ಕೀರ್ತಿ ಬಿಗ್‍ಬಾಸ್‍ನಲ್ಲಿರೋ ಎಲ್ರನ್ನೂ ಒಂದ್ಕಡೆಯಿಂದ ಕಾಲೆಳೆತಾ ಬಂದ್ರು. ಅದರಲ್ಲೂ ಪ್ರಥಮ್‍ಗೆ ಚಾರ್ಜ್ ತಗೊಂಡ ಕೀರ್ತಿ ಅವ್ನಿಗೆ ದೇವ್ರು ಮನುಷ್ಯ ಅಂತ ಭೂಮಿಗೆ ಬಿಟ್ಟಿದ್ದೇ ದೊಡ್ಡ ಗ್ರೇಟ್ ಅಂತೆ..! ಬಿಟ್ಟಾದ್ರೂ ಬಿಟ್ಟ ಈ ಬಿಗ್‍ಬಾಸ್‍ಗೆ ಎಂಗ್ಲಾ ಬಂದಾ..? ಯಾವುದೋ ಹುಳ ಅದು.. ಅವ್ನ ಕಾಟ ತಡೆಯೋಕಾಗ್ತಾ ಇಲ್ಲ ಅಂತ ಟಾಂಗ್ ಕೊಟ್ಟಿದ್ದಾರೆ..! ಅಷ್ಟೇ ಅಲ್ಲ ಕೀರ್ತಿ ಪ್ರಥಮ್‍ಗೆ ಹಾಡಿನ ಮೂಲಕ ಹುಚ್ಚಾ ಅಂತ ವ್ಯಂಗ್ಯ ಮಾಡಿದ್ದಾರೆ..! ಒಟ್ನಲ್ಲಿ ಗುರುವಾರದ ಎಪಿಸೋಡ್‍ನಲ್ಲಿ ಮುಯ್ಯಿಗೆ ಮುಯ್ಯಿ ಅಂತ ಎಲ್ರೂ ಅವರವರ ಕಾಲೆಳ್ಕೊಂಡ್ರೆ ಇತ್ತ ವೀಕ್ಷಕರಿಗೆ ಸಖತ್ ಮನರಂಜನೆ ನೀಡಿದಂತೂ ಸತ್ಯ..
Like us on Facebook The New India Times
ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333
POPULAR STORIES :
ದರ್ಶನ್‍ರನ್ನು ಬಿಗ್‍ಬಾಸ್ ವೇದಿಕೆಗೆ ಕರ್ದಿದೀರಾ ಎಂಬ ಅಭಿಮಾನಿಯ ಪ್ರಶ್ನೆಗೆ ಸುದೀಪ್ ಕೊಟ್ಟ ಉತ್ತರವೇನು..?
ಗುಡ್ ನ್ಯೂಸ್: ಚಿನ್ನದ ಬೆಲೆ 3000ರೂ ಇಳಿಕೆ..!
ನೀವು ಸ್ಮಾರ್ಟ್ ಫೋನ್ ಯೂಸ್ ಮಾಡ್ತೀರಾ..? ಹಾಗಾದ್ರೆ ಈ ಸ್ಟೋರಿ ಓದಿ..!
ಕುಡುಕರಿಗೆ ಶಾಕ್ ಕೊಟ್ಟ ಸುಪ್ರೀಂ: ದೇಶದ ಎಲ್ಲಾ ಹೆದ್ದಾರಿಗಳಲ್ಲಿನ ಬಾರ್, ವೈನ್ ಶಾಪ್ ಬಂದ್…!
ಶಾಕಿಂಗ್ ವೀಡಿಯೋ: ಬಟ್ಟೆ ಅಂಗಡಿಯಲ್ಲಿ ಬ್ಲಾಸ್ಟ್ ಆಯ್ತು ಜೇಬಲಿದ್ದ ಮೊಬೈಲ್..!