ಬಿಗ್ ಬಾಸ್ ಸೀಸನ್ 5 ರ ಮೂರನೇ ವಾರದ ಎಲಿಮಿನೇಟ್ ಪ್ರಕ್ರಿಯೆ ನಡೆದಿದೆ.
ಮೊದಲೆರಡು ವಾರದಲ್ಲಿ ಜನಸಾಮಾನ್ಯರು ಎಲಿಮಿನೇಟ್ ಆಗಿದ್ರು. ಸತತ ಎರಡು ವಾರವೂ ಜನಸಾಮಾನ್ಯರು ಎಲಿಮಿನೇಟ್ ಆಗಿದ್ದು ವೀಕ್ಷಕರಿಗೆ ಬೇಸರವಾಗಿತ್ತು. ಜೊತೆಗೆ ಇದು ಆಕ್ರೋಶಕ್ಕೂ ಕಾರಣವಾಗಿತ್ತು.
ಆದರೆ, ಈ ವಾರ ನಿರೀಕ್ಷೆಯಂತೆ ನಿರ್ದೇಶಕ ದಯಾಳ್ ಪದ್ಮನಾಭನ್ ಎಲಿಮಿನೇಟ್ ಆಗಿದ್ದಾರೆ.
ಇದರೊಂದಿಗೆ ಬಿಗ್ ಬಾಸ್ ಸೀಸನ್ 5 ರಲ್ಲಿ ಎಲಿಮಿನೇಟ್ ಆದ ಮೊದಲ ಸೆಲಬ್ರಿಟಿ ಪಟ್ಟ ದಯಾಳ್ ಅವರಿಗೆ ಒಲಿದಂತಾಗಿದೆ.