ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರಣೆಗೆ ತೀವ್ರ ವಿರೋಧಗಳಿದ್ದರೂ ರಾಜ್ಯ ಸರ್ಕಾರ ನ.10ರಂದು ಟಿಪ್ಪು ಜಯಂತಿ ಆಚರಿಸುತ್ತಿರುವುದನ್ನು ಖಂಡಿಸಿ ಭಾರತೀಯ ಜನತಾ ಪಾರ್ಟಿ (ಬಿ.ಜೆ.ಪಿ) ಮಂಗಳವಾರ ನಗರದ ಮುರಿಯಾ ಸರ್ಕಲ್ ಬಳಿ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ರಾಜ್ಯದಲ್ಲಿ ಟಿಪ್ಪು ಜಯಂತಿ ಆಚರೆಣೆಗೆ ತೀವ್ರ ವಿರೋಧವಿದ್ದರೂ ಕೂಡ ರಾಜ್ಯ ಸರ್ಕಾರ ಅದಕ್ಕೂ ಮೀರಿ ಆಚರಣೆಗೆ ಮುಂದಾಗಿರುವುದು ಖಂಡನೀಯ ಎಂದು ಬಿಜೆಪಿ ನಾಯಕರು ಆರೋಪಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಾಯಕ ಬಿ.ಎಸ್ ಯಡಿಯೂರಪ್ಪ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ ಟಿಪ್ಪು ಜಯಂತಿ ಆಚರಣೆಯನ್ನು ರದ್ದುಗೊಳಿಸುತ್ತೇವೆ ಎಂದು ಹೇಳಿದ್ದಾರೆ. ಅಲ್ಲದೇ ನವೆಂಬರ್ 10 ರಂದು ಟಿಪ್ಪು ಜಯಂತಿ ಆಚರಿಸಿದ್ದೇ ಆದಲ್ಲಿ ಎಲ್ಲರೂ ಕಪ್ಪು ಬಾವುಟ ಹಿಡಿದು ಪ್ರತಿಭಟನೆ ನಡೆಸೋಣ ಪೊಲೀಸರು ನಮ್ಮನ್ನು ಬಂಧಿಸಿದರೂ ನಾವು ಬಂಧನಕ್ಕೆ ಸಿದ್ಧರಿದ್ದೇವೆ ಎಂದು ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಇನ್ನು ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಆರ್ ಆಶೋಕ್ ಟಿಪ್ಪುವಿನ ಹಿಂದೆ ಬಿದ್ದವರಿಗೆ ಎಂದು ಒಳ್ಳೆಯದಾಗಿಲ್ಲ. ಟಿಪ್ಪು ಖಡ್ಗವನ್ನು ತಂದ ವಿಜಯ್ ಮಲ್ಯ ದೇಶವನ್ನೇ ಬಿಟ್ಟು ಹೋದರು. ಟಿಪ್ಪುವಿನ ಕುರಿತು ಧಾರಾವಾಹಿ ಮಾಡಿದ ಸಂಜಯ್ ಖಾನ್ ಕೂಡ ಸದ್ದಿಲ್ಲದೆ ಹೋದ್ರು ಎಂದು ಟೀಕಿಸಿದ್ದಾರೆ. ಹೀಗೆ ಮುಂದುವರೆಯಲು ಬಿಟ್ರೆ ಕಾಂಗ್ರೆಸ್ ಸರ್ಕಾರ ಅಫ್ಜಲ್ ಜಯಂತಿಯೂ ಕೂಡ ಮಾಡ್ಬೋದು ಎಂದು ಖಾರವಾಗಿ ನುಡಿದಿದ್ದಾರೆ.
https://youtu.be/pWdGxY0GU_g
Like us on Facebook The New India Times
POPULAR STORIES :
ಮಾಸ್ತಿಗುಡಿ ದುರಂತ: ಐವರ ವಿರುದ್ದ ಜಾಮೀನು ರಹಿತ ವಾರೆಂಟ್ ಜಾರಿ..!
12 ವರ್ಷದ ಅಪ್ರಾಪ್ತ ಬಾಲಕನಿಂದ 18 ವರ್ಷದ ಯುವತಿ ತಾಯಿಯಾದ್ಲು..!
ವಿಲನ್ ಸಿನಿಮಾದ ಮತ್ತೊಂದು ಸ್ಪೆಷಾಲಿಟಿ ಏನ್ ಗೊತ್ತಾ..?
ಹಾಂಕಾಂಗ್ ಸ್ವಾತಂತ್ರ್ಯವನ್ನು ನಿರ್ಭಂಧಿಸುವ ಮಸೂದೆ ಅಂಗೀಕರಿಸಿದ ಚೀನಾ