ಬಾಕ್ಸ್‍ಆಫೀಸ್‍ನಲ್ಲಿ ನಮ್ಮ ನಾಡಿನ ನಮ್ಮ ಚಿತ್ರಗಳೆ ಒಳ್ಳೆ ಬೆಳೆಯನ್ನ ತೆಗಿತಿವೆ.. ಇದು ಮುಂದಿನ ತಿಂಗಳು ಮತ್ತಷ್ಟು ಹೆಚ್ಚಾಗೋ ಸಾಧ್ಯತೆಗಳಿವೆ.. ಯಾಕಂದ್ರೆ ಹಣವನ್ನ ಕೊಳ್ಳೆ ಹೊಡೆಯೋಕೆ ಅಂತಾನೆ ಕ್ವಾಲಿಟಿ ಇರೋ ದೊಡ್ಡ ದೊಡ್ಡ ಸಿನಿಮಾಗಳು ರೆಡಿಯಾಗ್ತಿವೆ..
1.ಕೋಟಿಗೊಬ್ಬ-2
ಅದರಲ್ಲಿ ಮೊದಲನೆಯದ್ದು ಕಿಚ್ಚ ಸುದೀಪ್ ಅಭಿನಯದ ಕೋಟಿಗೊಬ್ಬ-2 ಸಿನಿಮಾ..
ಯಸ್ ಇದೇ ಮೊದಲ ಬಾರಿಗೆ ಏಕ ಕಾಲಕ್ಕೆ ಸುದೀಪ್ ಅಭಿನಯದ ಚಿತ್ರವೊಂದು ತಮಿಳು ಹಾಗೆ ಕನ್ನಡದಲ್ಲಿ ತೆರೆಗೆ ಬರಲಿದೆ.. ಈಗಾಗ್ಲೇ ಅಂದಾಜಿನ ಪ್ರಕಾರ 1000ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ಈ ಸಿನಿಮಾ ಸೌಂಡ್ ಮಾಡೋದ್ರಲ್ಲಿ ಡೌಟ್ ಇಲ್ಲ ಅಂತಾ ಹೇಳಲಾಗಿದೆ.. ಈ ಮೂಲಕ ಈ ರನ್ನನ ಚಿತ್ರ ಒಂದೇ ದಿನದಲ್ಲಿ ಗಲ್ಲಪೆಟ್ಟಿಗೆಯನ್ನ ತುಂಬೋದ್ರಲ್ಲಿ ಡೌಟ್ ಇಲ್ಲ..
ಇನ್ನೂ ಪವರ್‍ಸ್ಟಾರ್ ಪುನೀತ್‍ರಾಜ್ ಕುಮಾರ್ ಅಭಿನಯದ ದೊಡ್ಡಮನೆ ಹುಡುಗ ಚಿತ್ರದ ಟೀಸರ್ ಸಿನಿಮಾವನ್ನ ಕಾಯೋ ಹಾಗೆ ಮಾಡಿಬಿಟ್ಟಿದೆ..
ನಿರ್ದೇಶಕ ಸೂರಿ ಹಾಗೆ ಅಪ್ಪು ಅವ್ರ ಕಾಂಬಿನೇಷನ್ ಕಮಾಲ್ ಮಾಡೋಕೆ ಸಿದ್ದವಾಗಿದ್ದು, ಮುಂದಿನ ತಿಂಗಳಲ್ಲಿ ದೊಡ್ಡಮನೆಯವರ ರಂಗು ಹೆಚ್ಚಲಿದೆ.. ಇನ್ನೂ ಹಸಲಿಗೆ ಇದು ಈ ಪವರ್‍ಸ್ಟಾರ್‍ನ 25ನೇ ಸಿನಿಮಾವಾಗಿರೋದ್ರಿಂದ ಹಾಗೆ ರೆಬಲ್‍ಸ್ಟಾರ್ ಗತ್ತುಗಮ್ಮತ್ತು ದೊಡ್ಡಮನೆ ಹುಡಗ ಕಿಕ್‍ನ ಹೆಚ್ಚಿಸಿದೆ…
3.ಮುಂಗಾರುಮಳೆ-2
ಗೋಲ್ಡನ್‍ಸ್ಟಾರ್ ಗಣೇಶ್ ಹಾಗೆ ಶಶಾಂಕ್ ಕಾಂಬಿನೇಷನ್‍ನಲ್ಲಿ ಸಿದ್ದವಾಗಿರೋ, ಕ್ರೇಜಿಸ್ಟಾರ್ ಅಪ್ಪನ ಪಾತ್ರಧಾರಿಯಾಗಿರೋ ಮುಂಗಾರುಮಳೆ-2 ಕೂಡ ಬಾಕ್ಸ್‍ಆಫೀಸ್‍ನಲ್ಲಿ ಹಣದ ಮಳೆ ಸುರಿಸೋಕೆ ಸಿದ್ದವಾಗಿದೆ..
ಈಗಾಗ್ಲೇ ಮುಂಗಾರುಮಳೆ ಟೀಸರ್‍ನಲ್ಲಿ ಸ್ಟಾರ್‍ಗಳೆ ಪ್ರಶ್ನೆ ಕೇಳ್ತಿದ್ಧಾರೆ.. ಉತ್ತರಕ್ಕೆ ಇನ್ನೇನಿದ್ರು ಕೆಲದಿನಗಳು ಕಾಯ್ಲೇಬೇಕು..
ಇನ್ನೂ ಈ ಲಿಸ್ಟ್‍ನಲ್ಲಿರೋ ಮತ್ತೊಂದು ಸಿನಿಮಾವೆಂದ್ರೆ ಅದು ಕಲ್ಪನಾ-2.. ಮತ್ತೆ ಉಪ್ಪಿ ಜೀಯ ಮೈ ಮೇಲೆ ಭೂತ ಬರಲಿದೆ.. ಈಗಾಗ್ಲೇ ಈ ಸಿನಿಮಾದ ಬಗ್ಗೆ ಕೂಡ ಪಾಸಿಟಿವ್ ರೆಸ್ಪಾನ್ಸ್ ಇದ್ದು ಹೇಗಿರಲಿದ್ದಾನೆ ಹಾಗೆ ಇರಲಿದ್ದಾಳೆ ಈ ಕಲ್ಪನಾ ಅಂತಾ ನೋಡೋಕೆ ಕಾಯ್ತಿದ್ದಾರೆ ಸಿನಿ ಪ್ರೇಮಿ.. ಈ ಸಿನಿಮಾ ಕೂಡ ಇದೇ ತಿಂಗಳ ಅಂತ್ಯ ಅಥವಾ ಮುಂದಿನ ತಿಂಗಳು ತೆರೆಗೆ ಬರಲಿದೆ.
ಇದಿಷ್ಟು ಜುಲೈನಲ್ಲಿ ನೋಡೋಕೆ ಸಿಗಬಹುದಾದ ಕೋಟಿ ಕೋಟಿ ಕೊಳ್ಳೆ ಹೊಡೆಯೋ ನಿರೀಕ್ಷೆಗಳನ್ನ ಹುಟ್ಟುಹಾಕಿರೋ ಸಿನಿಮಾಗಳು.. ಇನ್ನೂ ಶೂಟಿಂಗ್‍ನ ಹಂತದಲ್ಲಿರೋ ಚಾಲೆಂಜಿಗ್‍ಸ್ಟಾರ್ ಅಭಿನಯದ ಚಕ್ರವರ್ತಿ, ರನ್ನನ ಹೆಬ್ಬುಲಿ ಹಾಗೆ ಯಶ್ ಅಭಿನಯಿಸ್ತಿರೋ ಸಂತು ಸ್ಟ್ರೈಟ್ ಫಾರ್ವಡ್ ಮೂವೀಗಳು ಹೊಸ ಹೊಸ ದಾಖಲೆಯನ್ನ ಬರೆಯೋದ್ರಲ್ಲಿ ಡೌಟ್‍ಯಿಲ್ಲ.. ಹೀಗಾದ್ರು ನಮ್ಮ ಚಿತ್ರಗಳು ಪರಭಾಷೆಯ ಚಿತ್ರಗಳಿಗೆ ಟಾಂಗ್ ನೀಡಿ ಮುಂದೆ ಸಾಗ್ಲಿ ಅನ್ನೋದು ನಮ್ಮ ಉದ್ದೇಶ..
- ಅಶೋಕ್ ರಾಜ್
POPULAR STORIES :
ಶಾಸಕ ಸ್ಥಾನಕ್ಕೆ ಅಂಬರೀಷ್ ರಾಜೀನಾಮೆ..!!
68 ನೇ ವಯಸ್ಸಿನ ತಾತ 10ನೇ ತರಗತಿಯ ವಿದ್ಯಾರ್ಥಿ..!!
ಮಹಿಳೆ ಮೇಲೆ ಅತ್ಯಾಚಾರ..! ಭಾರತೀಯ ಆಟಗಾರ ಅರೆಸ್ಟ್ ಯಾರು ಆ ರೇಪಿಸ್ಟ್ ಕ್ರಿಕೆಟರ್…?
ಅಷ್ಟಕ್ಕೂ ರಜನಿ ಹೀಗೇಕೆ ಮಾಡಿದ್ಲು? ಪ್ರೀತಿಸಿದ ಹುಡುಗ ಮತ್ತು ಅಪ್ಪ, ಅಮ್ಮ, ಅಣ್ಣ.!
`ರೋಬೋಫೀಲಿಯಾ’ ಇದು `ಫ್ಯೂಚರ್ ಆಫ್ ಸೆಕ್ಸ್’
ನಿಮ್ಮ ರೂಂಮೇಟ್ ನ ಗೊರಕೆ ತಪ್ಪಿಸಬೇಕೇ?? ಇಲ್ಲಿದೆ ಉಪಾಯ…
ದರ್ಭೆಯನ್ನುಪವಿತ್ರವಾಗಿ ಶುಭ ಹಾಗೂ ಅಶುಭ ಸಂದರ್ಭಗಳಲ್ಲಿ ನಮ್ಮಬಲಕೈ ಬೆರಳಲ್ಲಿ ಯಾಕೆ ಧರಿಸುತ್ತೇವೆ????
ಗೀತಾ ಟಂಡನ್ ಖತರ್ನಾಕ್ ಸ್ಟಂಟ್ ಮಹಿಳೆಯ ಕಥೆ..!
ಮಿನಿಸ್ಟರ್ ಗಿರಿ ಬಿಟ್ಟುಕೊಡ್ತಾರಂತೆ ಅಂಬಿ… ಆದ್ರೆ ಕಂಡೀಷನ್ಸ್ ಅಪ್ಲೈ…!!