30 ಲಕ್ಷ ಕೋಟಿ ಬ್ಲಾಕ್ ಮನಿ ಷೇರು ಮಾರುಕಟ್ಟೆಯಲ್ಲಿದೆಯಂತೆ : ಆದಾಯ ತೆರಿಗೆ ಇಲಾಖೆಯ ಮಾಹಿತಿ

Date:

ಷೇರು ಮಾರುಕಟ್ಟೆಯಲ್ಲಿರೋ ಗರಿಷ್ಟ ಮಟ್ಟದ ಹೂಡಿಕೆದಾರರಲ್ಲಿ ಅನೇಕರು ಇನ್ನೂ ತಮ್ಮ I-T ರಿಟರ್ನ್ಸ್ ನ ಒಪ್ಪಿಸಲಿಲ್ಲವೆಂಬ ಸುದ್ದಿಯೊಂದನ್ನು ಆದಾಯ ತೆರಿಗೆ ಇಲಾಖೆ ತಿಳಿಸಿದೆ.ತೆರಿಗೆ ಪಾವತಿಸುವುದರಿಂದ ತಪ್ಪಿಸಿಕೊಳ್ಳಲು ಹಾಗೂ ತಮ್ಮಲ್ಲಿರೋ ಕಪ್ಪು ಹಣವನ್ನು ಬಚ್ಚಿಡುವ ಉದ್ದೇಶದಿಂದ ಹೆಚ್ಚಿನ ಹೂಡಿಕೆದಾರರು BSE ಯಲ್ಲಿ ಲಿಸ್ಟ್ ಆದ ಕಂಪನಿಗಳಲ್ಲಿ ತಮ್ಮ ಹಣವನ್ನು ಹೂಡುತ್ತಿರುವುದು ಕಂಡು ಬರುತ್ತಿದ್ದು,ಈ ನಿಟ್ಟಿನಲ್ಲಿ ಆದಾಯ ತೆರಿಗೆ ಇಲಾಖೆ ತುರ್ತು ಕ್ರಮ ಕೈಗೊಳ್ಳಲು ಹೊರಟಿದೆ.

2013-14 ಹಾಗೂ 2014-15 ರಲ್ಲಿ ಇಲಾಖೆಗೆ BSE ಮತ್ತು NSE ಯಿಂದ ಒಪ್ಪಿಸಲಾದ STT (Securities Transaction tax) ಮಾಹಿತಿಯನ್ವಯ,ಇಲಾಖೆಯು ಪ್ರತೀಯೊಬ್ಬ ವ್ಯಕ್ತಿ ಹಾಗೂ ಕಂಪನಿಯ ಬಗ್ಗೆ ಮಾಹಿತಿಯನ್ನು ಕಲೆಹಾಕುತ್ತಿದೆ.STT ರಿಟರ್ನ್ಸ್ ಗಳು, ಸ್ಟಾಕ್ ಎಕ್ಸ್ ಚೇಂಜ್ ನಲ್ಲಿ ನಡೆದ ‍ಎಲ್ಲಾ ವಿಧದ ಮಾರಾಟ/ಖರೀದಿಯ ವ್ಯವಹಾರದ ಬಗ್ಗೆ ಮಾಹಿತಿ,ಹಾಗೂ ಇನ್ಟ್ರಾ ಡೇ ವ್ಯವಹಾರಗಳ ಸಂಪೂರ್ಣ ಮಾಹಿತಿಯನ್ನೊಳಗೊಂಡಿದೆ.

ಮೊತ್ತಮೊದಲ ಬಾರಿಗೆ ಆದಾಯ ತೆರಿಗೆ ಇಲಾಖೆಯು,ಈ ತರಹದ ಮಾಹಿತಿಯನ್ನುಪಯೋಗಿಸಿ,ಒಂದು ದೊಡ್ಡ ತನಿಖೆಯನ್ನು ನಡೆಸುತ್ತಿದ್ದು, ಪರಿಣಾಮ ನಮ್ಮ ಕಣ್ಣ ಮುಂದೆ. ಇದಲ್ಲದೆ ಈ ದಾಖಲೆಗಳಿಂದ, ಸಾಕಷ್ಟು ಆದಾಯ ಇದ್ದಾಗಿಯೂ, ಹಿಂದೆಂದೂ IT ರಿಟರ್ನ್ಸ್ ಒಪ್ಪಿಸದ ಅನೇಕ ವ್ಯಕ್ತಿಗಳ ಹೆಸರುಗಳು ಬೆಳಕಿಗೆ ಬರುವಂತಿದೆ. ಅರ್ಥಾತ್, ಒಬ್ಬ ವ್ಯಕ್ತಿಯ ವಾರ್ಷಿಕ ವಹಿವಾಟು 2,800 ಕೋಟಿ ಇದ್ದು, ದಾಖಲೆಗಳ ಪ್ರಕಾರ ಈತ ತನ್ನ ಹಣವನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು,ಆಮೇಲೆ ಆತನ ಜೀವ ಮಾನದಲ್ಲಿ ಇದುವರೆಗೆ ಯಾವುದೇ ರಿಟರ್ನ್ ನ ಒಪ್ಪಿಸದೇ ಇರುವುದು, ಇದೇ ರೀತಿಯಲ್ಲಿ ಓರ್ವ ಹೆಂಗಸೊಬ್ಬಳು ದೆಹಲಿಯ ಅತೀ ಶ್ರೀಮಂತರ ಸ್ಥಳವೆಂದೇ ಹೆಸರುವಾಸಿಯಾಗಿರೋ ಜೋರ್ ಬಾಗ್ ನಲ್ಲಿ ವಾಸಿಸುತ್ತಿದ್ದು,ಸುಮಾರು 250 ಕೋಟಿಗೂ ಹೆಚ್ಚು ಹಣವನ್ನು 2014-15 ರಲ್ಲಿ ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದ್ದು,ಈಕೆಯೂ ತನ್ನ ಜೀವಿತಾವಧಿಯಲ್ಲಿ ಇದುವರೆಗೆ ಯಾವ ರಿಟರ್ನ್ ನ ಇಲಾಖೆಗೆ ಒಪ್ಪಿಸದೇ ಇರುವುದು.

ಹಲವು ಕಂಪನಿಗಳು ಹಾಗೂ ವ್ಯಕ್ತಿಗಳು PAN ಕಾರ್ಡ್ ಸಂಬಂಧವಾಗಿಯೂ, ಅದರ ದುರ್ಬಳಕೆ ಮಾಡಿದ್ದಾರೆ ಎನ್ನಲಾಗುತ್ತಿದೆ. ದಕ್ಷಿಣ ದೆಹಲಿಯ ಸುಖ ದೇವ ವಿಹಾರ ದಲ್ಲಿರುವ ಕೆಲವೊಂದು ಬ್ರೋಕರೇಜ್ ಕಂಪನಿಗಳು, ಡುಪ್ಲಿಕೇಟ್ PAN ಉಪ್ಯೋಗಿಸಿ ಸುಮಾರು 2,000 ಕೋಟಿಗೂ ಹೆಚ್ಚಿನ ವ್ಯವಹಾರವನ್ನು ಷೇರು ಮಾರುಕಟ್ಟೆಯಲ್ಲಿ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.ಇಂತಹ ವಂಚನೆಯ ವ್ಯವಹಾರಗಳು ಷೇರು ಮಾರುಕಟ್ಟೆಗಳ ಆದಾಯವನ್ನು ಹೆಚ್ಚಿಸಲು ಸಮರ್ಥವಾಗುತ್ತವೆ ಎನ್ನುತ್ತಾರೆ, ಇದರಂತೆ,2014-15 ರ ಷೇರು ಮಾರುಕಟ್ಟೆಯ ವಹಿವಾಟುಗಳು 32 ಲಕ್ಷ ಕೋಟಿಯಿಂದ 66 ಲಕ್ಷ ಕೋಟಿಯ ವರೆಗೆ ವಿಸ್ತರಿಸಿದೆ ಎಂದ ಆದಾಯ ಇಲಾಖೆ ವರದಿ ಮಾಡಿದೆ.

ಈ ದಾಖಲೆಗಳಿಂದ ಬಂದ ಮಾಹಿತಿಯನ್ವಯ ಷೇರು ಮಾರುಕಟ್ಟೆಯಲ್ಲಿ,ಒಟ್ಟು ಹೂಡಿಕೆದಾರರಲ್ಲಿ,ಕೇವಲ 3 % ಹೂಡಿಕೆದಾರರಷ್ಟೇ 61 ಲಕ್ಷ ಕೋಟಿಯನ್ನು BSE ಲಿಸ್ಟೆಡ್ ಕಂಪನಿಯಲ್ಲಿ ವಿನಿಯೋಗಿಸಿದ್ದಾರಂತೆ.ಇದಲ್ಲದೆ ಈ 3% ಹೂಡಿಕೆದಾರರಲ್ಲಿ 47% ವ್ಯಕ್ತಿಗಳು ತಮ್ಮ ರಿಟರ್ನ್ಸ್ ನ,2014-15 ರಲ್ಲಿ ಒಪ್ಪಿಸಲೇ ಇಲ್ಲವಂತೆ,ಅಂದರೆ ನಿಜವಾಗಿ ಹೇಳುವುದಾದಲ್ಲಿ ಈ ದಾಖಲೆಗಳು,ಒಂದು ವರುಷದಲ್ಲಿ ಸುಮಾರು 30 ಲಕ್ಷ ಕೋಟಿ ಹಣವನ್ನು ಷೇರು ಮಾರುಕಟ್ಟೆಯಲ್ಲಿ ತಮ್ಮ ಆದಾಯವನ್ನು ವ್ಯಕ್ತ ಪಡಿಸದೇ ಹೂಡಿದ್ದಾರೆ ಎಂದು ತಿಳಿಸುತ್ತವೆ.ಇದನ್ನು ಆಯಾ ರಾಜ್ಯಗಳಿಗೆ ಹೋಲಿಸುವುದಾದಲ್ಲಿ,ಇವರಲ್ಲಿ ಹೆಚ್ಚಿನವರು ಮಹಾರಾಷ್ಟ್ರ,ಗುಜರಾಥ್ ಹಾಗೂ ತಮಿಳ್ ನಾಡಿನವರಾಗಿದ್ದಾರಂತೆ

STT ಆರಂಭವಾದ ಬಳಿಕ ಈ ತರಹದ ಅವ್ಯವಹಾರಗಳು ನಡೆಯುವುದು ಗಣನೀಯವಾಗಿ ಕಡಿಮೆಯಾಗಿವೆ ಎಂದು NSE ತಿಳಿಸಿದೆ.ಅಂತಹುದೇನಾದರೂ ಅವ್ಯವಹಾರಗಳು ತಿಳಿದು ಬಂದಲ್ಲಿ ನಾವು ನಮ್ಮ ಮಾಹಿತಿಯನ್ನು SEBI ಹಾಗೂ FIU ಗೆ ವರ್ಗಾಯಿಸುತ್ತೇವೆ.ಅವರು ಇಂತಹುದರ ವಿರುದ್ದ ತಕ್ಕ ಕ್ರಮ ಕೈಗೊಳ್ಳುತ್ತಾರೆ ಎಂದೂ ತಿಳಿಸಿದೆ.

2013-14ರಲ್ಲಿ ಹೂಡಿಕೆದಾರರ ಸಂಖ್ಯೆಯು 47,625 ರಿಂದ 2014-15 ಕ್ಕಾಗೋವಾಗ 1,21,423 ಕ್ಕೆ ಹೆಚ್ಚಿದೆ.ಈ ಎಲ್ಲಾ ಹೂಡಿಕೆದಾರರನ್ನು ಪತ್ತೆ ಹಚ್ಚಲಾಗಿದ್ದು

ಇವರುಗಳು ಮಾರುಕಟ್ಟೆಯಲ್ಲಿ ನಡೆದಿರೋ 2,000ಕೋಟಿ ಯಿಂದ 10,000ಕೋಟಿ ಯ ತನಕ ದ ವಹಿವಾಟಿನಲ್ಲಿ ಶಾಮೀಲಾಗಿದ್ದಾರೆ ಎಂದು ತಿಳಿದು ಬಂದಿದೆ.

  •  ಸ್ವರ್ಣಲತ ಭಟ್

POPULAR  STORIES :

ವಿಷ ಕುಡಿದು ಆತ್ಮಹತ್ಯೆ ಯತ್ನಿಸುವ ನಾಟಕವಾಡಿದ ರೈತನ ವಿಡಿಯೋ ವೈರಲ್..!

ಜಿಯೋ ಗ್ರಾಹಕರಿಗೆ ಶಾಕಿಂಗ್ ನ್ಯೂಸ್.. ಸ್ಪೀಡ್ ಕಳೆದುಕೊಳ್ಳುತ್ತಿದೆ ಜಿಯೋ ಸಿಮ್..!

ಐಸಿಸಿ ಟೆಸ್ಟ್ ರ್ಯಾಂಕಿಂಗ್: ಅಶ್ವಿನ್ ನಂ.1 ಬೌಲರ್..!

60 ಕೋಟಿ ಹರಾಜು ಕೂಗಿ ನಂಬರ್ ಪ್ಲೇಟ್ ಪಡೆದ ಭಾರತೀಯ ಉದ್ಯಮಿ..!

ಕಾಂಪೌಂಡ್ ವಿಚಾರವಾಗಿ ಎರಡು ಕುಟುಂಬಗಳ ಸಿನಿಮೀಯ ರೀತಿಯಲ್ಲಿ ಬಡಿದಾಟ..!

ಲಾರಿ ವಾಹನ ಚಾಲಕರ ದಿಢೀರ್ ಮುಷ್ಕರ: ಇಂದು ಪೆಟ್ರೋಲ್, ಡೀಸೆಲ್ ಸಿಗೋದು ಡೌಟ್..!

ಅಪ್ಪನ ಅಪ್ಪುಗೆಯಿಂದ ಬದುಕುಳಿಯಿತು ಕೂಸು..!

ಬಿಎಂಡಬ್ಲ್ಯೂ ವಾಪಾಸ್ ನೀಡಲು ನಿರ್ಧರಿಸಿದ ದೀಪಾ ಕರ್ಮಕರ್.

Share post:

Subscribe

spot_imgspot_img

Popular

More like this
Related

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ!

ಯೆಲ್ಲೋ ಮೆಟ್ರೋ ಪ್ರಯಾಣಿಕರಿಗೆ ಗುಡ್ ನ್ಯೂಸ್! ಐದನೇ ರೈಲಿನ ಟೆಸ್ಟಿಂಗ್ ಆರಂಭ! ಬೆಂಗಳೂರು:...

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ

ಪ್ರತಿದಿನ ಮೌತ್‌ವಾಶ್ ಬಳಸುವುದು ಒಳ್ಳೆಯದೋ ಕೆಟ್ಟದ್ದೋ? ಇಲ್ಲಿದೆ ಮಾಹಿತಿ ಇತ್ತೀಚಿನ ದಿನಗಳಲ್ಲಿ ಮೌತ್‌ವಾಶ್...

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು: ಡಿ.ಕೆ. ಶಿವಕುಮಾರ್

ವೈಯಕ್ತಿಕ ಹಾಗೂ ಅನಗತ್ಯ ಪ್ರಶ್ನೆಗಳಿದ್ದರೆ ಈ ಪ್ರಶ್ನೆ ಉದ್ಭವಿಸುವುದಿಲ್ಲ ಎಂದು ಹೇಳಬಹುದು:...

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ?

ರಶ್ಮಿಕಾ, ದೇವರಕೊಂಡ ಎಂಗೇಜ್‌ಮೆಂಟ್‌, ಫೆಬ್ರವರಿಯಲ್ಲಿ ಮದುವೆ? ಜನಪ್ರಿಯ ಜೋಡಿ ರಶ್ಮಿಕಾ ಮಂದಣ್ಣ ಹಾಗೂ...