ಕನ್ನಡ ದೃಶ್ಯ ಮಾಧ್ಯಮಕ್ಕೆ ಹೊಸ ಎಂಟ್ರಿ – ಬಿಎನ್ ಟಿವಿ

Date:

ಕನ್ನಡದಲ್ಲಿ ಈಗಾಗಲೇ ಹತ್ತಾರು ಮನರಂಜನಾ ಚಾನಲ್ ಗಳಿವೆ, ಜೊತೆಗೆ ಅಷ್ಟೇ ಸಂಖ್ಯೆಯಲ್ಲಿ ಸುದ್ದಿ ವಾಹಿನಿಗಳೂ ಇವೆ..! ಆದ್ರೆ ಈಗ ಹೊಸದೊಂದು ವಾಹಿನಿ ಹೊಸ ಸ್ಟೈಲಲ್ಲಿ ಕನ್ನಡಿಗರಿಗೆ ಮನರಂಜನೆ ಹಾಗೂ ಸುದ್ದಿ ಕೊಡೋಕೆ ರೆಡಿಯಾಗಿದೆ..! ಕನ್ನಡದಲ್ಲಿ ಈ ಹಿಂದೆ ಇನ್ಫೋಟೇನ್ಮೆಂಟ್ ಕಾನ್ಸೆಪ್ಟಲ್ಲಿ ಕೆಲವು ವಾಹಿನಿಗಳು ಕಾರ್ಯನಿರ್ವಹಿಸಿದ್ರೂ ಈಗ ಸಂಪೂರ್ಣವಾಗಿ ಸುದ್ದಿ ಹಾಗೂ ಮನರಂಜನೆಗೆ ಸಮಾನ ಅವಕಾಶವಿರುವ ಇನ್ಫೋಟೇನ್ಮೆಂಟ್ ಚಾನಲ್ಲೊಂದು ಕನ್ನಡದ ಕಿರುತೆರೆಗೆ ಅಪ್ಪಳಿಸಿದೆ. ಇದು ಬಿಎನ್ ಟಿವಿ..!
ಕನ್ನಡ ಭಾವುಟದ ಹಳದಿ ಮತ್ತು ಕೆಂಪು ಬಣ್ಣ, ಬಿಎನ್ ಟಿವಿ ಎಂಬ ಲಾಂಚನದೊಂದಿಗೆ ಈಗಾಗಲೇ ಪರೀಕ್ಷಾರ್ಥ ಪ್ರಸಾರವನ್ನು ಮುಗಿಸಿ ಕನ್ನಡಿಗರ ಮನಗೆಲ್ಲಲು ಸಿದ್ಧವಾಗಿದೆ ಈ ಬಿಎನ್ ಟಿವಿಯ ಯುವ ತಂಡ. ಈ ಹಿಂದೆ ಪಬ್ಲಿಕ್ ಟಿವಿ ಬಳಿಸಿದ್ದ ಹೊಸ ಯುವಕ ಯುವತಿಯರ ತಂಡದ ಸೂತ್ರವನ್ನೇ ಬಿಎನ್ ಟಿವಿಯೂ ಅಳವಡಿಸಿಕೊಂಡು ಹೊಸ ಮುಖಗಳಿಗೆ ವಾಹಿನಿಯಲ್ಲಿ ಅವಕಾಶ ಕೊಟ್ಟಿದೆ. ಹೊಸ ಮುಖಗಳು ನಮ್ಮ ಚಾನಲ್ಲಿಗೆ ಹೊಸತನ ತುಂಬಿಸ್ತಾರೆ ಅಂತ ನಂಬಿಕೆ ವಾಹಿನಿಯ ಮ್ಯಾನೇಜಿಂಗ್ ಡೈರೆಕ್ಟರ್ ಗಿರೀಶ್ ಅವರದು. ಹಾಗೇಯೇ ಯುವ ಪ್ರತಿಭೆಗಳು ಹೊಸ ಕೆಲಸದಲ್ಲಿ ಹೊಸ ವಾಹಿನಿಗೆ ಮನಸಾರೆ ಕೆಲಸ ಮಾಡ್ತಿದ್ದಾರೆ..!
ಬಿಎನ್ ಟಿವಿ ಕನ್ನಡಿಗ ವೀಕ್ಷಕನನ್ನು ತನ್ನತ್ತ ಸೆಳೆಯಲು ಹೊಸಹೊಸ ಕಸರತ್ತು ಆರಂಭಿಸಿದೆ. ಸುದ್ದಿ ವಾಹಿನಿಗಳು ಕೇವಲ ಸುದ್ದಿಗೆ ಸೀಮಿತ, ಮನರಂಜನಾ ವಾಹಿನಿಗಳು ಧಾರಾವಾಹಿ ಹಾಗೂ ಸಿನಿಮಾಗಳಿಗೆ. ಆದ್ರೆ ಬಿಎನ್ ಟಿವಿ ಸುದ್ದಿಯ ಜೊತೆಜೊತೆಗೆ ಹೊಸ ಹೊಸ ಮನರಂಜನಾ ಕಾರ್ಯಕ್ರಮಗಳ ಜೊತೆ ತನ್ನ ತಂತ್ರ ರೂಪಿಸಿದೆ. ಸುದ್ದಿ ಅಂದ ಮಾತ್ರಕ್ಕೆ ದಿನನಿತ್ಯದ ಸಾಮಾನ್ಯ ಸುದ್ದಿಗಳೆಲ್ಲಾ ಇಲ್ಲಿ ಬರೋದಿಲ್ಲ. ಎಲ್ಲೂ ಬಾರದ ಸುದ್ದಿಗಳು ಬಿಎನ್ ಟಿವಿಯಲ್ಲಿ ಬರುತ್ತೆ ಅಂತಾರೆ ಗಿರೀಶ್. ಹಾಗೆಯೇ ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಎಲ್ಲರಿಗೂ ಇಷ್ಟವಾಗುವ ಕಾರ್ಯಕ್ರಮಗಳು ಬಿಎನ್ ಟಿವಿಯಲ್ಲಿ ಬಿತ್ತರವಾಗಲಿದೆಯಂತೆ. ಒಂದರ್ಥದಲ್ಲಿ ಬಿಎನ್ ಟಿವಿ ಅಂದ್ರೆ ಒಂದು ಕಂಪ್ಲೀಟ್ ಪ್ಯಾಕೇಜ್ ಆಗಿರುತ್ತೆ ಅನ್ನೋದು ತಂಡದ ವಿಶ್ವಾಸ.
ಈಗಾಗಲೇ ಇರುವ ಹತ್ತಿಪ್ಪತ್ತು ವಾಹಿನಿಗಳ ಮದ್ಯೆ ಇದೂ ಒಂದು ಅಂತ ಆಗದೆ, ತನ್ನದೇ ವಿಭಿನ್ನ ಸ್ಟೈಲ್ ಜೊತೆ ಕ್ರಿಯಾಶೀಲ ಕಾರ್ಯಕ್ರಮಗಳನ್ನು ಹೊತ್ತು ತರಲು `ಇದು ನಿಮ್ಮ ಧ್ವನಿ’ ಅನ್ನೋ ಘೋಷವಕ್ಯದೊಂದಿಗೆ ಸಿದ್ಧವಾಗಿರೋ ಬಿಎನ್ ಟಿವಿಗೆ ಶುಭಾಶಯ.

 

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

Share post:

Subscribe

spot_imgspot_img

Popular

More like this
Related

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...