No menu items!
12.4 C
Munich
Wednesday, April 29, 2026

ಡ್ರಗ್ಸ್ ಧಣಿಯ ಮನೆ ಮೇಲೆ ರೈಡ್ ಮಾಡಿದಾಗ ಕಂಡಿದ್ದೇನು..?

Must read

ಅವನ ಹೆಸರು ಚಾಪೋ ಗುಜ್ಮನ್. ಡ್ರಗ್ಸ್ ಸಪ್ಲೇ ಮಾಡುವುದು, ಅದನ್ನು ಮಾರಾಟ ಮಾಡುವುದೇ ಆತನ ಕೆಲಸ..! ಅದರ ಮೂಲಕವೇ ಅಪಾರ ಸಂಪತ್ತನ್ನು ಗಳಿಸಿದ್ದ. ಆತನ ಡ್ರಗ್ಸ್ ಡೀಲ್ ಗೆ ಅಂತ್ಯ ಹಾಡಲು ಮೆಕ್ಸಿಕನ್ ಪೊಲೀಸರು ಹರಸಾಹಸಪಟ್ಟಿದ್ದಾರೆ. ಆತನನ್ನು ಎರಡು ಬಾರಿ ಬಂಧಿಸಿದ್ದಾರೆ. ಆದರೆ ಆತ ಎರಡೂ ಬಾರಿ ತಪ್ಪಿಸಿಕೊಂಡಿದ್ದ. ಆದರೆ ಈಗ ಮತ್ತೊಮ್ಮೆ ಸಿಕ್ಕಿಬಿದ್ದಿದ್ದಾನೆ. ಆದ್ದರಿಂದ ಆತನ ಮನೆ ಮೇಲೆ ಮೆಕ್ಸಿಕನ್ ಅಧಿಕಾರಿಗಳು ರೈಡ್ ಮಾಡಿದ್ದಾರೆ..! ಆಗ ಚಾಪೋನ ಸಂಪತ್ತು, ಶ್ರೀಮಂತಿಕೆ ಕಂಡು ಅಧಿಕಾರಿಗಳು ಬೆಚ್ಚಿ ಬಿದ್ದಿದ್ದಾರೆ..!
ಯೆಸ್.. ಚಾಪೋ ಗುಜ್ಮನ್ ನನ್ನು ಡ್ರಗ್ಸ್ ಲೋಕದ ರಾಜ ಎಂದೇ ಕರೆಯಲಾಗುತ್ತದೆ. ಅದರ ಮೂಲಕ ಅಪಾರ ಸಂಪತ್ತನ್ನು ಗಳಿಸಿದ್ದ. ಆದರೆ ಅದನ್ನು ಆತ ಏನು ಮಾಡಿದ ಎಂಬುದು ಯಾರಿಗೂ ಗೊತ್ತಿರಲಿಲ್ಲ. ಆದರೆ ಆ ಕುತೂಹಲಕ್ಕೆ ಈಗ ತೆರೆಬಿದ್ದಿದೆ.
ಆತನ ಅದ್ಭುತ ಮನೆಯಲ್ಲಿ ಸುಂದರವಾದ ಸ್ವಿಮ್ಮಿಂಗ್ ಪೂಲ್, ಮಾನವ ನಿರ್ಮಿತ ಕೊಳ, ಅತ್ಯದ್ಭುತ ಕಲಾಕೃತಿಗಳು(ಕೆಲವು ಕಳ್ಳತನದಿಂದ ತಂದಿದ್ದವಾಗಿದ್ದವು), ಒಂದು ಝೂ(ಅದರಲ್ಲಿ ಕರಿಚಿರತೆ, ಸಿಂಹ ಸೇರಿದಂತೆ ಇನ್ನಿತರ ಪ್ರಾಣಿಗಳಿದ್ದವು), ಚಿನ್ನ ಲೇಪಿತ ಗನ್ ಗಳು ಮತ್ತು ಇನ್ನಿತರ ಶಸ್ತ್ರಾಸ್ತ್ರಗಳು ದೊರೆತಿದ್ದವು. ಇದರ ಜೊತೆಗೆ ಸುಮಾರು 200 ಮಿಲಿಯನ್ ಮೊತ್ತದ ಹಣವನ್ನು ಒಂದು ರೂಮಿನಲ್ಲಿ ಶೇಖರಿಸಿಡಲಾಗಿತ್ತು..! ಸೂಟ್ ಕೇಸ್ ಗಳು, ಚಿಕ್ಕ ಚಿಕ್ಕ ಕಪಾಟುಗಳಲ್ಲೂ ಹಣವನ್ನು ಇಡಲಾಗಿತ್ತು.
ಡ್ರಗ್ಸ್ ಮಾರುವ ಮೂಲಕ ಅಪಾರ ಸಂಪತ್ತು ಗಳಿಸಿದ್ದ ಚಾಪೋ ಗುಜ್ಮನ್ ಇಂದು ಜೈಲು ಸೇರಿದ್ದಾನೆ..! ಚಿನ್ನದ ಚಮಚದಲ್ಲಿ ಮೃಷ್ಠಾನ್ನ ಭೋಜನ ಸವಿಯುತ್ತಿದ್ದವ ಇಂದು ಜೈಲೂಟ ತಿನ್ನುತ್ತಿದ್ದಾನೆ. ಅದಕ್ಕೆ ಹೇಳಿದ್ದು, ಎಲ್ರ ಕಾಲೆಳೀತದೆ ಕಾಲ ಅಂತ..!

  • ರಾಜಶೇಖರ ಜೆ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಇಬ್ಬರ ಜೇಬಲ್ಲೂ ಉಳಿದಿದ್ದು ಮುನ್ನೂರು ರೂಪಾಯಿ ಮಾತ್ರ..! ಆದ್ರೆ…..

ಸಿಸಿಟಿವಿಯಲ್ಲಿ ಸೆರೆಯಾಯ್ತು ಸೊಸೆಯ ಕ್ರೌರ್ಯ..! ಸೊಸೆಯಿಂದಲೇ ಅತ್ತೆ ಮೇಲೆ ಮಾರಣಾಂತಿಕ ಹಲ್ಲೆ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article