ಬಾಲಿವುಡ್ ಮಂದಿಯ ತಲೆ ಖಾಲಿಯಾಗಿದೆ..! ಅದು ಬಾಲಿವುಡ್ ಅಲ್ಲ, `ಖಾಲಿವುಡ್'

1
65

raaa
ಹಿಂದಿ ಚಿತ್ರರಂಗವನ್ನು ಅದ್ಧೂರಿತನ, ಪ್ರಯೋಗಗಳ ತಾಣ ಎಂದು ಕರೆಯಲಾಗುತ್ತದೆ. ಬಾಲಿವುಡ್ ಚಿತ್ರಗಳ ಪೋಸ್ಟರ್ ಗಳಂತೂ ಭಿನ್ನ-ವಿಭಿನ್ನವಾಗಿರುತ್ತದೆ. ಆದರೆ ಆಲ್ ಮೋಸ್ಟ್ ಬಾಲಿವುಡ್ ನ ಹಿಟ್ ಚಿತ್ರಗಳ ಪೊಸ್ಟರ್ ಗಳನ್ನೆಲ್ಲ ಇಂಗ್ಲೀಷ್ ಚಿತ್ರಗಳಿಂದ ಕದಿಯಲಾಗಿದೆ. `ಇಲ್ಲಿ ಎಲ್ಲಾ ಇದೆ, ಆದರೆ ಏನೂ ಇಲ್ಲ..!’. ಬಿಟ್ಟ ಕಣ್ಣು ಮುಚ್ಚಲು ಮನಸ್ಸಾಗುವುದಿಲ್ಲ. ಈ ಪೋಸ್ಟರ್ ಗಳೇ ಹಿಂಗಿರ್ ಬೇಕಾದ್ರೇ ಇನ್ನು ಸಿನಿಮಾಗಳು ಹೇಗಿರ್ ಬೇಡ..? ಗೋಡೆಗಳಲ್ಲಿ, ಎಲ್ಲೆಂದರಲ್ಲಿ ಕಲರ್ ಫುಲ್ ಆಗಿ ಕಾಣಿಸುವ ಸಿನಿಮಾ ಪೋಸ್ಟರ್ ಗಳು ನಿಜಕ್ಕೂ ಹಲವಾರು ಕಥೆಗಳನ್ನು ಹೇಳುತ್ತವೆ. ಕುತೂಹಲಗಳನ್ನು ಹುಟ್ಟಿಸುತ್ತವೆ. ಅಂದಮೇಲೆ ಥಿಯೇಟರ್ ಗೆ ಹೋಗಿ ಸಿನಿಮಾ ನೋಡುವುದಕ್ಕೆ ಯಾರು ತಾನೇ ಮನಸು ಮಾಡುವುದಿಲ್ಲ.

ಆದರೆ ಮೊದಲೆಲ್ಲಾ ಹೀಗಿರ್ಲಿಲ್ಲ. ಅವತ್ತಿನ ಸಿನಿಮಾಗಳಂತೆ ಪೋಸ್ಟರ್ ಗಳಲ್ಲೂ ಮರ್ಯಾದೆಯಿತ್ತು. ಸಭ್ಯತೆಯಿತ್ತು, ಸಂಪ್ರದಾಯವಿತ್ತು. ಆದರೆ ಕಾಲ ಕಾಲಕ್ಕೆ ಜನರ ಮನಃಸ್ಥಿತಿ, ಆಚಾರ-ವಿಚಾರಗಳು ಬದಲಾದಂತೆ ಅವರ ಅಭಿರುಚಿಗೆ ತಕ್ಕಂತೆ ಸಿನಿಮಾಗಳ ಕಥೆ, ದಿಕ್ಕು, ವ್ಯಾಪ್ತಿಗಳೇ ಬದಲಾಗಿತ್ತು. ಆ ಕಾಲದಲ್ಲಿ ತೀರಾ ಮೊದಲ ರಾತ್ರಿಯ ದೃಶ್ಯಗಳನ್ನು ತೋರಿಸುವಾಗ, ಲೈಟ್ ಆಫ್ ಮಾಡಿ ಕುತೂಹಲ ಕಾಯ್ದುಕೊಳ್ಳುತ್ತಿದ್ದ ಸಿನಿಮಾಗಳಿದ್ದವು. ಆದ್ರೆ ಈಗ ಬೆಡ್ ರೂಮ್ ದೃಶ್ಯಾವಳಿಗಳು ರಸ್ತೆಗಳಲ್ಲೇ ಖುಲ್ಲಾಂ ಖುಲ್ಲಾ ಆಗ್ ಹೋಗಿದೆ. ಥಿಯೇಟರ್ ಒಳಗಿನ ಸಮಾಚಾರ ಬಿಡಿ, ರಸ್ತೆಗಳಲ್ಲೇ ಹಾವಳಿಯಿಡುವ ಅಶ್ಲೀಲ ಪೋಸ್ಟರ್ ಗಳನ್ನೇ ನೋಡಿ. ಅಲ್ಲಿ ಕೆಲ ನಟಿಯರು ನಿಜಕ್ಕೂ ಡ್ರೆಸ್ ಹಾಕಿಕೊಂಡಿದ್ದಾರಾ..? ಎನ್ನುವುದನ್ನು ಎರಡೆರಡು ಸಾರಿ ನೋಡಿ ಗ್ಯಾರಂಟಿ ಮಾಡಿಕೊಳ್ಳಬೇಕು. ಯಾವುದೇ ಸಿನಿಮಾ ಸಹಜ ಕುತೂಹಲ ಮೂಡಿಸಲು ಆ ಸಿನಿಮಾಗಳ ಪೋಸ್ಟರ್ ಗಳು ಪ್ರಧಾನ ಪಾತ್ರವಹಿಸುತ್ತವೆ. ಎಷ್ಟೋ ಜನರು ಥಿಯೇಟರ್ ಒಳಗೆ ಹೆಜ್ಜೆ ಇಡಲು ಈ ಪೋಸ್ಟರ್ ಗಳೇ ಪ್ರಧಾನ ಭೂಮಿಕೆಯಾಗಿರುತ್ತವೆ. ಹಾಗೇ ನೋಡಿದರೇ ಭಾರತದ ಎಲ್ಲಾ ಚಿತ್ರರಂಗಕ್ಕಿಂತ ಇನ್ನಿಲ್ಲದ ಕುತೂಹಲಗಳನ್ನು ಸೃಷ್ಟಿಸಿ, ಪೋಸ್ಟರ್ ಗಳ ಮೂಲಕ ಗಿಮಿಕ್ ಮೂಡಿಸುವುದು ಬಾಲಿವುಡ್ ಚಿತ್ರರಂಗ. ಅಲ್ಲಿನ ಕಲರ್ ಫುಲ್ ಪೋಸ್ಟರ್ ಗಳು ಚಿತ್ರ ರಸಿಕರ ಅಂತರಂಗದಲ್ಲಿ ಕೋಲಾಹಲ ಸೃಷ್ಟಿಸಿಬಿಡುತ್ತವೆ.

ಆದರೆ ಬಾಲಿವುಡ್ ಚಿತ್ರರಂಗದ ಮಂದಿ ಸದ್ದಿಲ್ಲದೇ ಹಾಲಿವುಡ್ ಸರಕುಗಳನ್ನು ಕದ್ದು ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ ಎಂಬ ಸತ್ಯ ಹೆಚ್ಚಿನ ಮಂದಿಗೆ ಗೊತ್ತಿಲ್ಲ. ಅಸಲಿಗೆ ಬಾಲಿವುಡ್ ಜನರ ಕಳ್ಳತನದ ವಿಚಾರ ಬಹಿರಂಗವಾಗಲು ಕಾರಣ; ಇತ್ತೀಚೆಗೆ ಭರ್ಜರಿ ಸದ್ದುಮಾಡಿದ್ದ ಅಮೀರ್ಖಾನ್ ಅಭಿನಯದ `ಪಿಕೆ’ ಚಿತ್ರ. ಚಿತ್ರದ ಪೋಸ್ಟರ್ ನಲ್ಲಿ ಸಂಪೂರ್ಣ ನಗ್ನರಾಗಿದ್ದ ಅಮೀರ್ ಖಾನ್ ಪ್ರಮುಖ ಜಾಗಕ್ಕೆ ರೇಡಿಯೋ ಅಡ್ಡವಿಟ್ಟುಕೊಂಡಿದ್ದರು. ಎಷ್ಟೋ ಜನರಿಗೆ, `ಓಹ್.. ಎಂಥಾ ಪರಿಕಲ್ಪನೆ, ಅದೆಂಥಾ ಪ್ರಯೋಗ’ ಅಂತನಿಸಿದ್ದು ನಿಜ. ಆದರೆ ಅದು ಪೋರ್ಚುಗಿಸ್ ಸಂಗೀತಗಾರ 1973ರಲ್ಲಿ ಮಾಡಿದ್ದ ಪ್ರಯೋಗದ ಶುದ್ಧ ನಕಲು ಎನ್ನುವುದು ಜಗಜ್ಜಾಹೀರಾಗಿತ್ತು. ಪೋರ್ಚುಗಿಸ್ ಸಂಗೀತಗಾರನೊಬ್ಬ 1973ರಲ್ಲಿ ಇದೇ ತೆರನಾದ ಫೋಸ್ ಕೊಟ್ಟು ಸಖತ್ ಫೇಮಸ್ ಆಗಿದ್ದ. ಅದನ್ನೇ ಮಕ್ಕಿಕಾಮಕ್ಕಿ ಭಟ್ಟಿ ಇಳಿಸಿದ್ದ ಪೀಕೆ ಚಿತ್ರತಂಡ ಹೊಸ ಸನ್ಸೇಷನಲ್ ಸೃಷ್ಟಿ ಮಾಡಿದ್ದೇವೆ ಅಂತ ಬೀಗಿತ್ತು. ಈ ಚಿತ್ರದ ಪೋಸ್ಟರ್ ನಿಂದ ಇಲ್ಲಿವರೆಗೆ ತೆರೆಕಂಡ ಬಾಲಿವುಡ್ಡಿನ ಹಲವಾರು ಚಿತ್ರಗಳ ಹಣಬರಹ ಹೊರಬಿದ್ದಿತ್ತು..

ಖ್ಯಾತ ನಿರ್ದೇಶಕ ಮಹೇಶ್ ಭಟ್ ಅವರ ಮಗಳು ಪೂಜಾ ಭಟ್ ನಿರ್ದೇಶನದ ಜಿಸ್ಮ್ ಚಿತ್ರ 2012ರಲ್ಲಿ ತೆರೆಕಂಡಿತ್ತು. ಈ ಚಿತ್ರದಲ್ಲಿ ಅದೆಷ್ಟು ಹಾಟ್ ಹಾವಳಿಯಿಟ್ಟಿತ್ತೋ ಅಷ್ಟೇ ಹಾಟ್ ಪೋಸ್ಟರ್ ಗಳಲ್ಲೂ ಕಿಚ್ಚು ಹಬ್ಬಿಸಿತ್ತು. ರಣ್ದೀಪ್ ಹೂಡಾ ಹಾಗೂ ನಟಿ ಸನ್ನಿಲಿಯೋನ್ ಳ ಸೆಕ್ಸಿ ಕಾಂಬಿನೇಷನ್ನಿನ ಈ ಚಿತ್ರದಲ್ಲಿ, ಸನ್ನಿಲಿಯೋನ್ ಹಾವಿನಂತೆ ಪೋಸ್ ಕೊಟ್ಟಿದ್ದ ಪೋಸ್ಟರ್ ಪಡ್ಡೆಗಳ ಎದೆಯಲ್ಲಿ ಅವಲಕ್ಕಿ ಕುಟ್ಟಿತ್ತು.
ಆದರೆ ಇದು 2010ರಲ್ಲಿ ಹಾಲಿವುಡ್ನಲ್ಲಿ ತೆರೆಕಂಡ `ಸ್ಕಿನ್’ ಚಿತ್ರದ ಪೊಸ್ಟರ್ನ ಯಥಾವತ್ ನಕಲಾಗಿತ್ತು.

ಬಾಲಿವುಡ್ ನಲ್ಲಿ ಚಾಣಾಕ್ಷ ಪೋಸ್ಟರ್ಸ್ ಕಳ್ಳರಿದ್ದಾರೆ ಎನ್ನುವುದಕ್ಕೆ ಕರೀನಾ ಕಪೂರ್ ಅಭಿನಯದ ಹಿರೋಯಿನ್ ಚಿತ್ರದ ಪೋಸ್ಟರ್ ಸಹ ತಾಜಾ ನಿದರ್ಶನವಾಗಿದೆ. ಅದು `ದಿ ಲಾಸ್ಟ್ ಫ್ಲೆಮಿಂಗೋಸ್ ಆಫ್ ಬಾಂಬೆ’ ಚಿತ್ರದ ಪೋಸ್ಟರ್ ನ ಕಾಪಿಚೀಟಾಗಿತ್ತು. ನಟಿಯೊಬ್ಬಳು ಚಿತ್ರರಂಗದಲ್ಲಿ ಏನೆಲ್ಲಾ ಸಂಕಷ್ಟ ಅನುಭವಿಸುತ್ತಾಳೆ ಅಂತ ನೈಜ ಕಹಾನಿಯನ್ನು ಹೇಳಲು ಹೊರಟ ರಿಯಲ್ ಡೈರೆಕ್ಟರ್ ಮಧುರ್ ಭಂಡಾರ್ಕರ್ ಪೋಸ್ಟರ್ ಅನ್ನು ಭಟ್ಟಿ ಇಳಿಸಿದ್ದು, ಸಮುದ್ರ ಹೊತ್ತವನಿಗೆ ಕೆರೆ ಭಾರ ಎಂದಂತಾಗಿದೆ. ಇದೇ ಸಾಲಿಗೆ ಸೇರುವ ಮತ್ತೊಂದು ಚಿತ್ರದ ಹೆಸರು ರೌಡಿ ರಾಥೋರ್. ಹೀರೋಯಿನ್ ಳನ್ನ ಆಲಂಗಿಸಿಕೊಂಡು ಒಂದು ಬದಿಯಲ್ಲಿ ರಿವಾಲ್ವರ್ ಮೊಳಗಿಸುವಂತಿರೋ ಇದೇ ಭಂಗಿಯ ಪೋಸ್ಟರ್ ಇಂಗ್ಲೀಷಿನ, `ದಿ ರೀಪ್ಲೆಸ್ಮೆಂಟ್ ಕಿಲ್ಲರ್ಸ್’ ಚಿತ್ರದಲ್ಲಿ ಮೂಡಿಬಂದಿತ್ತು. ರಿಮೇಕ್ ಚಿತ್ರಗಳನ್ನು ಮಾಡುವುದೇ ತನ್ನ ಆಜನ್ಮಸಿದ್ಧ ಹಕ್ಕು ಅಂದುಕೊಂಡಿರುವ ಪ್ರಭುದೇವ, ಮೂಲ ಚಿತ್ರಗಳನ್ನು ಮಾತ್ರವಲ್ಲ, ಯಾವ್ಯಾವುದೋ ಚಿತ್ರಗಳ ಪೋಸ್ಟರ್ಗಳ ವಿನ್ಯಾಸಗಳನ್ನು ಕದಿಯುತ್ತಾರೆ ಎನ್ನುವುದು ಈ ಮೂಲಕ ದೃಢವಾಗಿದೆ.

ಅದು ಹಿಂದಿಯ ಹಾವುಗಳ ಚಿತ್ರ, ಹೆಸರು ಹಿಸ್ಸ್. ಮಲ್ಲಿಕಾ ಶೆರಾವತ್ ಸಖತ್ ಹಾಟಾಗಿ, ಹಾಟ್ ಹಾಟ್ ಹಾವಾಗಿ ನಟಿಸಿರುವ ಹಿಸ್ಸ್ ಚಿತ್ರದ ಪೋಸ್ಟರ್ ನಲ್ಲಿ, ಇಂಗ್ಲೀಷಿನ `ಕಿಂಗ್ ಅರ್ಥರ್’ ಚಿತ್ರದ ತರ್ಜುಮೆ ಇದೆ. ಇಂಗ್ಲೀಷ್ನಲ್ಲಿ ದೊಡ್ಡಮಟ್ಟದಲ್ಲಿ ಸದ್ದು ಮಾಡಿದ್ದ `ಕಿಂಗ್ ಅರ್ಥರ್’ ಚಿತ್ರದಲ್ಲಿ ಖಡ್ಗವನ್ನು ದೊಡ್ಡ ದುಪ್ಪಟ್ಟದಿಂದ ಸುತ್ತಿದಂತೆ ಗ್ರಾಫಿಕ್ಸ್ ಮಾಡಲಾಗಿತ್ತು, ಆದರೆ `ಹಿಸ್’ನಲ್ಲಿ ಖಡ್ಗದ ಬದಲಿಗೆ ಮಲ್ಲಿಕಾ ಶೆರಾವತ್ ಳನ್ನ ನಿಲ್ಲಿಸಿ, ದುಪ್ಪಟ್ಟದಿಂದ ಸುತ್ತಲಾಗಿದೆ. ಹಾಗೆಯೇ ಬಾಲಿವುಡ್ಡಿನಲ್ಲಿ ಮರ್ಡರ್ ಸಿರೀಸ್ನಲ್ಲಿ ಮೂಡಿಬಂದ ಮತ್ತೊಂದು ಸಸ್ಪೆನ್ಸ್, ಥ್ರಿಲ್ಲರ್ ಚಿತ್ರ `ಮರ್ಡರ್ 3..’. `ಮರ್ಡರ್ 3′ ಚಿತ್ರದ ಪೋಸ್ಟರ್ ಇಂಗ್ಲೀಷ್ನ ಸೂಪರ್ ಹಿಟ್ ಚಿತ್ರ `ಜೆನ್ನಿಫರ್ ಬಾಡಿ’ಯಿಂದ ಅನಾಮತ್ತಾಗಿ ಭಟ್ಟಿ ಇಳಿಸಲಾಗಿದೆ. ಹಾಗೆಯೇ ರಣ್ಬೀರ್ ಕಪೂರ್ ಅಭಿನಯದ `ಅಂಜಾನಾ ಅಂಜಾನಿ’ ಚಿತ್ರದ ಪೋಸ್ಟರ್ `ಆನ್ ಎಜುಕೇಷನ್’ ಚಿತ್ರದ ಕಾಪಿಯಾದರೇ, ಬಹು ತಾರಾಗಣದ `ಹಲ್ಚಲ್’ ಚಿತ್ರ, `ಮೈ ಬಿಗ್ ಫ್ಯಾಟ್ ಗ್ರೀಕ್ ವೆಡ್ಡಿಂಗ್’ ಚಿತ್ರದ ಪೋಸ್ಟರ್ ಕಾಪಿಯಾಗಿತ್ತು.

`ಜಿಂದಗೀ ನಾ ಮಿಲೇಗಿ ದುಬಾರ’, ಹಲವಾರು ಅವಾರ್ಡ್ ಗಳನ್ನು ಪಡೆದ ಅತ್ಯುತ್ತಮ ಚಿತ್ರವಿದು. ಜೋಯಾ ಅಕ್ತರ್ ನಿರ್ದೇಶನದ ಈ ಚಿತ್ರದಲ್ಲಿ ಹೃತಿಕ್ ರೋಷನ್, ಕತ್ರಿನಾ ಕೈಫ್, ಅಭಯ್ ಡಿಯೋಲ್, ಫರ್ಹಾನ್ ಅಖ್ತರ್ ಸೇರಿದಂತೆ ಬಹುದೊಡ್ಡ ಸ್ಟಾರ್ಗಳು ನಟಿಸಿದ್ದರು. ಈ ಸೂಪರ್ಹಿಟ್ ಚಿತ್ರದ ಪೋಸ್ಟರ್ `ಲಾರ್ಡ್ಸ್ ಆಫ್ ಡಾಗ್ಸ್ ಟೌನ್’ ಚಿತ್ರದ ಮಕ್ಕಿಕಾಮಕ್ಕಿಯಾಗಿದೆ. ಇನ್ನು `ರಾ ಒನ್’ ರೂಪದಲ್ಲಿ ಬೇಕಾಬಿಟ್ಟಿ ಹಾವಳಿಯಿಟ್ಟ ಶಾರೂಕ್ಖಾನ್, `ಬ್ಯಾಟ್ ಮನ್’ ಆಗಿ ಅಬ್ಬರಿಸಿದ್ದು ಈಗ ಹಳೆ ಕಥೆ. ಆದರೆ `ಬ್ಯಾಟ್ಮನ್’ ಚಿತ್ರವನ್ನೇ ಅನಾಮತ್ತಾಗಿ ಭಟ್ಟಿ ಇಳಿಸಿದ್ದ ನಿರ್ದೇಶಕ ಅನುಭವ್ ಸಿನ್ಹಾ, ಚಿತ್ರದ ಪೋಸ್ಟರ್ ಅನ್ನು ಬ್ಯಾಟ್ ಮನ್ ಮಾದರಿಯಲ್ಲೇ ಪ್ರಿಂಟ್ ಹಾಕಿಸಿದ್ದ. ಬ್ಯಾಟ್ ಮನ್ ಸರಣಿಗಳ ಅಮೋಘ ಯಶಸ್ಸನ್ನು ಎನ್ ಕ್ಯಾಶ್ ಮಾಡಿಕೊಳ್ಳಲು ಹೋದ ಚಿತ್ರತಂಡದ ತಂತ್ರಗಳೇನು ವರ್ಕೌಟ್ ಆಗಲಿಲ್ಲ. `ರಾ ಒನ್’ ಇನ್ನಿಲ್ಲದಂತೆ ಮಕಾಡೆ ಮಲಗಿದ್ದ. ಹಾಗೆಯೇ ಹಿಂದಿಯ ಕಾಮಿಡಿ ಚಿತ್ರ `ಅತಿಥಿ ತುಮ್ ಕಬ್ ಜಾವೋಗಿ’ ಚಿತ್ರದ ಪೋಸ್ಟರ್ `ಲೈಸೆನ್ಸ್ ಟು ವೆಡ್’ ಚಿತ್ರದ ಕಾಪಿಯಾಗಿದೆ. ಇದರ ಜೊತೆಗೆ ಇಂಗ್ಲೀಷ್ ನ ಕಾಮಿಡಿ ಚಿತ್ರ `ಟಿಲ್ ಡೆತ್’ ಪೋಸ್ಟರ್ ಅನ್ನು ಹಿಂದಿಯ `ಅಗ್ಲಿ ಔರ್ ಪಗ್ಲಿ’ ಚಿತ್ರತಂಡ ಯಥಾವತ್ ನಕಲು ಮಾಡಿದೆ.

ಮೊದಲೆಲ್ಲಾ ಹಿಂದಿ ಚಿತ್ರರಂಗದಲ್ಲಿ ಎಂತೆಂಥಾ ಚಿತ್ರಗಳು ಬರುತಿತ್ತು. ಪೋಸ್ಟರ್ ಗಳಿರಲಿ- ಫಾಂಟ್ ಗಳು ಸಹಿತ ಇನ್ನೊಂದು ಚಿತ್ರವನ್ನು ಹೋಲುತ್ತಿರಲಿಲ್ಲ. ಆಗಿನ್ನು ತಂತ್ರಜ್ಞಾನದ ಆವಿಷ್ಕಾರ ಆಗುತ್ತಿತ್ತು. ಸರಿಯಾದ ಗ್ರಾಫಿಕ್ಸ್ ಬಳಕೆಗಳಿರಲಿಲ್ಲ. ಇರುವ ಸರಂಜಾಮುಗಳನ್ನು ಉಪಯೋಗಿಸಿಕೊಂಡು ಸ್ವಂತಿಕೆಯ ಷೇಡ್ ಕೊಡುತ್ತಿದ್ದರು. ಆದರೆ ಈಗ ಎಲ್ಲವೂ ಇದ್ದು, ಏನೂ ಇಲ್ಲದಂತ ಪರಿಸ್ಥಿತಿಯಿದೆ. ಯಾರದ್ದೋ ಶ್ರಮ, ಅದ್ಯಾರದ್ದೋ ಬುದ್ಧಿವಂತಿಕೆಯನ್ನು ಅನಾಮತ್ತಾಗಿ ಕಾಪಿ ಮಾಡಿ, ಅದರ ಕ್ರೆಡಿಟ್ ತೆಗೆದುಕೊಳ್ಳುವ ಚಾಳಿ ಶುರುವಾಗಿದೆ. ಬಾಲಿವುಡ್ ಚಿತ್ರರಂಗದಲ್ಲಿ ಹೊಸತನದ ಕ್ರಾಂತಿ ಶುರುವಾಗಿ ಹತ್ತಿರತ್ತಿರ ಹತ್ತು ವರ್ಷ ಆಗುತ್ತಾ ಬಂದಿದೆ. ಅಲ್ಲಿ ಮೂಡಿ ಬರುತ್ತಿರುವ ಚಿತ್ರಗಳಾದರೂ ಅಂಥದ್ದೇ..! ತೂಕಬದ್ಧ, ನೈಜ ಘಟನೆ ಆಧಾರಿತ ಚಿತ್ರಗಳ ಸಂಖ್ಯೆಯೇ ಅಧಿಕವಾಗಿದೆ. ಮರ ಸುತ್ತುವ ಪ್ರೇಂ ಕಹಾನಿ, ಐದು ಫೈಟು, ಆರು ಹಾಡು, ಹದಿನೈದು ನಿಮಿಷದ ಕಥೆಯಿರುವ ಚಿತ್ರಗಳ ಸಂಖೈ ಅಲ್ಲಿ ಗಣನೀಯವಾಗಿ ಇಳಿಕೆಯಾಗಿದೆ.

ಒಟ್ಟಿನಲ್ಲಿ ಪ್ರಯೋಗ, ಹೊಸತನ, ನೈಜತೆಯ ಆಧಾರದಲ್ಲಿ ಸಿನಿಮಾ ಮಾಡುತ್ತಿದ್ದ ಬಾಲಿವುಡ್ ಚಿತ್ರರಂಗಕ್ಕೆ ಮಾಹಿತಿ ಸೋರಿಕೆ ಅಥವಾ ಜನರ ಚಾಣಾಕ್ಷತನ ಇರುಸುಮುರುಸುಂಟು ಮಾಡಿರುವುದಂತೂ ದಿಟ. ಇನ್ನಾದರೂ ಇಲ್ಲಿರುವ ಬುದ್ಧಿವಂತರನ್ನು ಸರಿಯಾಗಿ ಬಳಸಿಕೊಂಡು ಹೊಸತನಕ್ಕೆ ಬಾಲಿವುಡ್ ತೆರೆದುಕೊಂಡರೇ ಚಂದ. ಯಾಕಂದ್ರೇ ಚಿತ್ರರಸಿಕರು ಇಂಥ ಅಭಾಸಗಳಿಗೆ ಸೀರಿಯಸ್ಸಾಗಿ ತಲೆ ಕೆಡಿಸಿಕೊಂಡರೇ ಅದು ಚಿತ್ರರಂಗಕ್ಕೆ ಲುಕ್ಸಾನೆನ್ನುವುದು ಸುಳ್ಳಲ್ಲ.

POPULAR  STORIES :

ನಾಗರಹಾವಿಗೆ ಎರಡು ಕಾಲು..! ಜನರು ದಂಗುಬಡಿದು ಹೋದರು..!

`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!

ಬ್ಲೂಫಿಲಂ ವೀಕ್ಷಿಸುವಾಗ ಅವಳ ವಯಸ್ಸು ಕೇವಲ ಒಂಬತ್ತು..! ಇದು ಹದಿನಾರರಲ್ಲಿ ಕನ್ಯತ್ವ ಕಳೆದುಕೊಂಡ ಸನ್ನಿಯ ಜೀವನಗಾಥೆ

ಅಫ್ರಿದಿ ಮಗಳಿಗೆ ಕ್ಯಾನ್ಸರ್..! ಸೋಶಿಯಲ್ ಮೀಡಿಯಾದಲ್ಲಿ ಹರಿದಾಡ್ತಿದೆ ಸಾವಿನ ಸುದ್ದಿ..!

ಈ ವ್ಯಕ್ತಿಯನ್ನ ಗರ್ಭಿಣಿ ಅನ್ನೋಕೆ ಕಾರಣವೇನು ಗೊತ್ತಾ..? ಹೊಟ್ಟೆಯಲ್ಲಿದ್ದದ್ದು ಮಗುವಲ್ಲದೆ ಮತ್ತೇನು..?

ಒಂದು ವಾರ ಉಚಿತ ಯೋಗ ವಿತ್ ಹಿರೋಯಿನ್ ಸಂಜನಾ..!!

ಸತ್ತಮೇಲೂ ಇವರು ಗ್ರೇಟ್..!! ಸೆಲೆಬ್ರಿಟಿಗಳೆಂದರೇ ಹೀಗಿರಬೇಕು..?

ಬ್ಲೂ ಫಿಲಂ ನಟಿ ಶಕೀಲಾಳನ್ನು ಅವಳಪ್ಪ ಹೊಡೆದು ಸಾಯಿಸಿಬಿಡುತ್ತಿದ್ದ..! ಶಕೀಲಾ ಲೈಫ್ ಸ್ಟೋರಿ.

1 COMMENT

LEAVE A REPLY

Please enter your comment!
Please enter your name here