ಅವನು ವಿಕ್ಕಿ ಗೋಸ್ವಾಮಿ. ಅಂದಗಾಲತ್ತಿಲ್ ಖ್ಯಾತ ನಟಿ ಮಮತಾ ಕುಲಕರ್ಣಿ ಪತಿ. ಈತನಿಗೂ ಭೂಗತ ಪಾತಕಿ ಚೋಟಾರಾಜನ್ಗೂ ಸಖ್ಯವಿದೆ. ಚೋಟಾರಾಜನ್ ಜೊತೆ ಸಂಬಂಧ ಇಟ್ಟುಕೊಳ್ಳುವ ಮುನ್ನ ದಾವೂದ್ ಇಬ್ರಾಹೀಂಗಾಗಿ ಕೆಲಸ ಮಾಡುತ್ತಿದ್ದ. ವಿಕ್ಕಿ ಗೋಸ್ವಾಮಿ ಎಂದರೇ ದೊಡ್ಡ ಮಟ್ಟದ ಡ್ರಗ್ ಪೆಡ್ಲರ್. ಇಂಡಿಯನ್ ಡ್ರಗ್ಸ್ ಮಾಫಿಯಾದಲ್ಲಿ ಬಹುದೊಡ್ಡ ಹೆಸರು. ಆ ಕಾಲದ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಯನ್ನು ಮೋಹಿಸಿ ಮದುವೆಯಾಗಿದ್ದ. ಬಾಲಿವುಡ್ಗೂ ಅಂಡರ್ ವರ್ಲ್ಡ್ ಗೂ ಅಕ್ಷರಶಃ ಗಂಡಹೆಂಡತಿ ಸಂಬಂಧ. ನಟ, ನಟಿಯರು ಅಂಡರ್ ವರ್ಲ್ಡ್ ಜೊತೆ ನೈತಿಕ, ಅನೈತಿಕ ಎರಡೂ ರೀತಿಯಲ್ಲೂ ಸಂಬಂಧವಿಟ್ಟುಕೊಂಡಿದ್ದಾರೆ. ಬಹುಶಃ ಮಮತಾ ಕುಲಕಣರ್ಿಗೆ ಅಂಡರ್ವಲ್ಡರ್್ ಜೊತೆ ಇದ್ದ ನಂಟು ವಿಕ್ಕಿ ಗೋಸ್ವಾಮಿಯನ್ನು ಮದುವೆ ಆಗುವವರೆಗೂ ಮುಂದುವರಿದಿತ್ತು.
ಮದ್ವೆಗೂ ಮೊದಲೇ ವಿಕ್ಕಿ ಗೋಸ್ವಾಮಿ ದಾವೂದ್ ಹೇಳಿದಂತೆ ಡ್ರಗ್ಸ್ ಸರಬರಾಜು ಮಾಡಲು ಹೋಗಿ ದುಬೈ ಪೊಲೀಸರಿಗೆ ತಗಲಾಕ್ಕೊಂಡಿದ್ದ. ಹದಿನೈದು ವರ್ಷ ದುಬೈ ಜೈಲಿನಲ್ಲಿದ್ದು ಬಂದ. ಅಷ್ಟರಲ್ಲಿ ಮಮತಾ ಇಮೇಜ್ ಕೂಡ ಡ್ಯಾಮೇಜ್ ಆಗಿತ್ತು. ಇಬ್ಬರೂ ಮದ್ವೆಯಾಗಿ ಕೀನ್ಯಾದ ನೈರೋಬಿಗೆ ಹೋಗಿ ಸೆಟಲ್ ಆದರು. ಸಾಮಾನ್ಯವಾಗಿ ಇಂಡಿಯಾ ಬಿಟ್ಟು ವಿದೇಶದಲ್ಲಿ ನೆಲೆಸುವ ಆಲ್ ಮೋಸ್ಟ್ ಸೆಲೆಬ್ರಿಟಿಗಳು ಲಂಡನ್, ದುಬೈ, ಅಮೇರಿಕಾ ಇತರೆ ಕಡೆ ನೆಲೆಸುತ್ತಾರೆ. ಇವರೇಕೆ ಬಡ ರಾಷ್ಟ್ರ ಕೀನ್ಯಾದಲ್ಲಿ ಹೋಗಿ ನೆಲೆಸಿದ್ದಾರೆ ಎಂಬ ಅನುಮಾನವಿತ್ತು. ಅದಕ್ಕೆ ಉತ್ತರ, `ಡ್ರಗ್ಸ್ ಮಾಫಿಯಾ’
ಡ್ರಗ್ಸ್ ಮಾಫಿಯಾದಲ್ಲಿ ಕೀನ್ಯಾಕ್ಕೆ ಕುಖ್ಯಾತಿಯಿದೆ. ಇಡೀ ಪ್ರಪಂಚಕ್ಕೆ ಇಲ್ಲಿಂದ ಡ್ರಗ್ಸ್ ಸರಬರಾಜಾಗುತ್ತದೆ. ಕೀನ್ಯಾ ದೇಶದಲ್ಲಿ ದೊಡ್ಡ ಮಟ್ಟದ ಡ್ರಗ್ ಪೆಡ್ಲರ್ ಒಬ್ಬನಿದ್ದ. ಅವನ ಹೆಸರು ಬರಾಕತ್ ಅಕ್ಷಾ. ಅವನ ಜೊತೆ ಡಿ ಕಂಪನಿ ನಿರಂತರವಾಗಿ ವ್ಯವಹಾರ ನಡೆಸುತ್ತಿತ್ತು. ದಾವೂದ್- ಛೋಟಾ ರಾಜನ್ ಬೇರ್ಪಟ್ಟ ನಂತರ ರಾಜನ್ ಡ್ರಗ್ಸ್ ಡೀಲಿಂಗ್ ನಡೆಸುತ್ತಿದ್ದ. ಡಿ ಕಂಪನಿಗೆ ಕಿಮ್ಮತ್ತು ಕೊಡದೇ ನಿರಾತಂಕವಾಗಿ ಡ್ರಗ್ಸ್ ಪೂರೈಸುತ್ತಿದ್ದ. ಬರಾಕತ್ ಅಕ್ಷಾನಿಗೆ ಸಾಥ್ ಕೊಡುತ್ತಿದ್ದವನು ಪಾಕಿಸ್ತಾನದ ಡ್ರಗ್ಸ್ ಬಾದ್ಷಾ ಗುಲಾಂ ಹುಸೈನ್. ಗುಲಾಂ ಹುಸೈನ್ ಹಾಗೂ ಡಿ ಕಂಪನಿಗೂ ನಿಕಟ ಸಂಬಂಧವಿದೆ. ಆದರೆ ಅದ್ಯಾವುದೋ ಒಪ್ಪಂದಕ್ಕೆ ಕಟ್ಟುಬಿದ್ದವನೇ, ಛೋಟಾ ರಾಜನ್ ಮಾತಿಗೆ ವಿಕ್ಕಿ ಗೋಸ್ವಾಮಿ ಜೊತೆ ದೊಡ್ಡಮಟ್ಟದಲ್ಲಿ ಡ್ರಗ್ಸ್ ಡೀಲಿಂಗ್ಸ್ ನಡೆಸುವ ತಯಾರಿ ನಡೆಸಿದ್ದ. ಯಾವುದೇ ಇಂಟರ್ನ್ಯಾಶನಲ್ ಡೀಲಿಂಗ್ಸ್ ನಡೆಯಬೇಕಾದರೇ, ಅದು ಹೇಗಾದ್ರೂ ವಿವಿಧ ಮಗ್ಗಲಿನ ಅಂಡರ್ ವಲ್ಡರ್್ ಗೆ ತಿಳಿದು ಬಿಡುತ್ತದೆ. ಹಾಗೆಯೇ ಕೀನ್ಯಾದಲ್ಲಿ ನಡೆಯುತ್ತಿದ್ದ ವಿಕ್ಕಿ ಗೋಸ್ವಾಮಿ, ಛೋಟಾ ರಾಜನ್ನ ಡ್ರಗ್ಸ್ ಡೀಲಿಂಗ್ ರಹಸ್ಯ ಡಿ ಕಂಪನಿಗೆ ಗೊತ್ತಾಗಿತ್ತು.
ಯಾವುದೇ ಸಾಮ್ರಾಜ್ಯವಿರಲಿ. ಅಲ್ಲಿ ಎರಡು ಗುಂಪುಗಳಿರುವುದು ಸಹಜ. ಕೀನ್ಯಾ ಡ್ರಗ್ಸ್ ಮಾಫಿಯಾದಲ್ಲೂ ಬರಾಕತ್ ಅಕ್ಷಾನಿಗೆ ಎದುರಾಳಿಯಾಗಿ ಮಹಮ್ಮದ್ ಬಷೀರ್ ಸುಲೈಮಾನ್ ಅಲಿಯಾಸ್ ಎಂಬಿಎಸ್ ಎಂಬಾತನಿದ್ದ. ಡ್ರಗ್ಸ್ ಡೀಲಿಂಗ್ಸ್ ಬಗ್ಗೆ ಡಿ ಕಂಪನಿಗೆ ಎಂಬಿಎಸ್ ಮಾಹಿತಿ ಕೊಟ್ಟಿದ್ದ. ಅವತ್ತಿಗೆ ದಾವೂದ್ ಪರಿಸ್ಥಿತಿ ಸರಿಯಿಲ್ಲವಾದ್ದರಿಂದ ಡಿ ಕಂಪನಿ ರಾಜನ್ ಗ್ಯಾಂಗ್ ಜೊತೆ ಕದನಕ್ಕಿಳಿಯುವಂತಿರಲಿಲ್ಲ. ರಿಸ್ಕ್ ತೆಗೆದುಕೊಳ್ಳಲು ಅವರು ತಯಾರಿರಲಿಲ್ಲ. ಹಾಗಾಗಿ ಡಿ ಕಂಪನಿ ಅನಾಮತ್ತಾಗಿ ಡ್ರಗ್ಸ್ ಡೀಲಿಂಗ್ಸ್ ಬಗ್ಗೆ ಕೀನ್ಯಾ ಪೊಲೀಸ್ರಿಗೆ ಮಾಹಿತಿ ಕೊಟ್ಟಿತ್ತು. ಇದರ ಸುಳಿವೇ ಇಲ್ಲದೇ ವಿಕ್ಕಿ ಗೋಸ್ವಾಮಿ, ಬರಾಕತ್ ಅಕ್ಷಾನ ಜೊತೆ ಡ್ರಗ್ಸ್ ಡೀಲಿಂಗ್ಗೆ ಕೈ ಹಾಕಿದ್ದ. ಈ ಬಗ್ಗೆ ನಿಖರ ಮಾಹಿತಿ ಪಡೆದ ಕೀನ್ಯಾ ಪೊಲೀಸರು ಯುಎಸ್ ಡ್ರಗ್ಸ್ ನಿಗ್ರಹ ಪಡೆಗೆ ಮಾಹಿತಿ ಕೊಟ್ಟರು. ಡೀಲಿಂಗ್ ನಡೆಯುತ್ತಿದ್ದ ಕೀನ್ಯಾದ ನೈರೋಬಿಯ ಆಯಕಟ್ಟಿನ ಜಾಗಕ್ಕೆ ರೇಡ್ ಬಿದ್ದ ಯುಎಸ್ ನಿಗ್ರಹ ಪಡೆ ವಿಕ್ಕಿ ಗೋಸ್ವಾಮಿ ಸೇರಿದಂತೆ ಕೆಲವರನ್ನು ಬಂಧಿಸಿದ್ದರು. ಹಾಗೇ ಸಿಕ್ಕಿಬಿದ್ದವರಲ್ಲಿ ಬಾಲಿವುಡ್ ನಟಿ ಮಮತಾ ಕುಲಕರ್ಣಿ ಇದ್ದಳು. ದೊಡ್ಡ ಮಟ್ಟದಲ್ಲಿ ನಡೆಯುತ್ತಿದ್ದ ಡ್ರಗ್ಸ್ ಡೀಲಿಂಗ್ಸ್ ಅಡ್ಡೆಯ ಮೇಲೆ ದಾಳಿ ಮಾಡಿದ್ದು ಯುಎಸ್ ನಿಗ್ರಹ ಪಡೆ. ಆವತ್ತು ತಗಲಾಕ್ಕೊಂಡವರಲ್ಲಿ ಮಮತಾ ಕುಲಕರ್ಣಿ ಇದ್ದಿದ್ದೇ ದೊಡ್ಡ ಚರ್ಚೆಯಾಗಿತ್ತು. ಅಸಲಿಗೆ ಮಮತಾಗೂ, ಅಂಡರ್ವಲ್ಡ್ ಗೂ ಇರುವ ನಂಟಿನ ಬಗ್ಗೆ ತಿಳಿದವರು ಕೂಡ, ಮಾದಕ ನಟಿ ಇನ್ನು ಬದಲಾಗಿಲ್ಲವಾ..? ಅಂತ ಹುಬ್ಬೇರಿಸಿದ್ದರು.
ಮಮತಾ ಕುಲಕರ್ಣಿ ಬಾಲಿವುಡ್ ಪರದೆ ಹಾಗೂ ಪಡ್ಡೆ ಹುಡುಗರ ಮನಸಿನಿಂದ ಜಾರಿ ಅದಾಗಲೇ ಎರಡು ದಶಕಗಳು ಕಳೆದಿವೆ. ಹತ್ತಾರು ವಿವಾದ, ಭೂಗತಲೋಕದ ನಂಟಿನ ಮೂಲಕ ಮನೆ ಮಾತಾಗಿದ್ದ ಈ ಹಾಟ್ ನಟಿ ಡ್ರಗ್ಸ್ ಮಾಫಿಯಾದಲ್ಲೂ ತಗಲಾಕ್ಕೊಂಡಿದ್ದಳು. ತಾನು ಸನ್ಯಾಸಿನಿ ಅಂತ ಮೇಲ್ನೋಟಕ್ಕೆ ತೋರಿಸಿಕೊಂಡಿದ್ದ ಈ ಚೆಲುವೆಯ ಆಂತರ್ಯದಲ್ಲಿ ಒಬ್ಬ ಮಾಸ್ಟರ್ ಮೈಂಡ್ ಸ್ಥಾಪಿತನಾಗಿದ್ದ. ತೊಂಬತ್ತರ ದಶಕದಲ್ಲಿ ತನ್ನ ಸೆಕ್ಸಿ ಮೈಮಾಟದಿಂದ ಚಿತ್ರರಸಿಕರ ಎದೆಗೆ ಹಾವಳಿಯಿಟ್ಟ ಬೆಡಗಿ ಸತತ ಹನ್ನೊಂದು ವರ್ಷಗಳ ಕಾಲ ಬಾಲಿವುಡ್ ನಲ್ಲಿ ತನ್ನ ಹವಾ ಚಲಾಯಿಸಿದ್ದಳು. ಆನಂತರ ಹೋಟೆಲ್ ಬಿಜಿನೆಸ್ಗೆ ಇಳಿದ ಮಮತಾ ಬೆಳ್ಳಿ ಪರದೆಯಿಂದ ದೂರ ಸರಿದಳು. ಇವತ್ತಿಗೆ ಪಡ್ಡೆ ಹುಡುಗರ ನಿದ್ದೆಗೆಡಿಸುತ್ತಿರುವ ಪೂನಂ ಪಾಂಡೆ, ಶೆರ್ಲಿನ್ ಚೋಪ್ರಾರಂತೆ ಮಮತಾ ಕುಲಕರ್ಣಿ ಗ್ಲಾಮರ್ ಕ್ವೀನ್ ಆಗಿ ಬಾಲಿವುಡ್ ಲೋಕವನ್ನು ಆಳುತ್ತಿದ್ದಳು. 1993ರಲ್ಲಿ ಸ್ಟಾರ್ ಡಸ್ಟ್ ಪತ್ರಿಕೆಗೆ ಬೆತ್ತಲೆ ಪೋಸ್ ನೀಡಿ ಜಗತ್ತನ್ನೇ ನಿಬ್ಬೆರಗುಗೊಳಿಸಿದ್ದಳು. ಅವತ್ತಿನ ಕಾಲಘಟ್ಟಕ್ಕೆ ಇವೆಲ್ಲಾ ಹೊಸತು. ಪ್ರಚೋಧನೆಗೆ ಸಂಬಂಧಿಸಿದ ಕೇಸೂ ಹಾಕಿಸಿಕೊಂಡಳು. ಇದರಿಂದ ತೀವ್ರ ಮುಜುಗರಕ್ಕೊಳಗಾದ ಮಮತಾ ಕೋರ್ಟ್ ಹೋಗುವಾಗ ಯಾರಿಗೂ ತಿಳಿಯಬಾರದೆಂದು ಬುರ್ಖಾ ಧರಿಸಿ ವಿವಾದವನ್ನು ಮೈಮೇಲೆಳೆದುಕೊಂಡಳು.
ಮಮತಾ ಕುಲಕರ್ಣಿ ಹುಟ್ಟಿದ್ದು ಮುಂಬೈನಲ್ಲಿ. ನೋಡುವುದಕ್ಕೆ ಸುಂದರಿಯಾಗಿದ್ದರಿಂದ ಮಾಡೆಲಿಂಗ್ ಹಾಗೂ ಸಿನಿಮಾ ಜಗತ್ತು ಕೈ ಬೀಸಿ ಕರೆಯಿತು. 20ನೇ ವಯಸ್ಸಿಗೆ ತಿರಂಗ ಸಿನಿಮಾದಲ್ಲಿ ಬಣ್ಣ ಹಚ್ಚಿದಳು. ಮಮತಾ ಕುಲಕಣರ್ಿ ಎಂದರೇ ರೋಮಾಂಚನ, ನಟನೆಯಲ್ಲಿ ಕಂಪನವಿರುತ್ತಿತ್ತು. ಗ್ಲಾಮರ್ ಪ್ರಪಂಚದ ಪಕ್ಕಾ ಐಟಂ ಗರ್ಲ್ ಆಗಿ ಮಿಂಚಿದ್ದಳು. ಗ್ಲಾಮರ್ ಹೊರತಾಗಿ ಆಕೆಯನ್ನು ಸೀರೆಯಲ್ಲಿ, ಪೂರ್ಣ ಉಡುಗೆಯಲ್ಲಿ ಕಲ್ಲಿಸಿಕೊಳ್ಳಲಾಗುತ್ತಿರಲಿಲ್ಲ. ಮಮತಾ ಕುಲಕರ್ಣಿ ಆಶಿಕ್ ಆವಾರಾ, ವಕ್ತ್ ಹಮಾರ ಹೈ, ಕ್ರಾಂತಿವೀರ್, ಕರಣ್ ಅಜರ್ುನ್, ಸಬ್ಸೇ ಬಡಾ ಖಿಲಾಡಿ, ಬಾಝಿ, ಚೈನಾಗೇಟ್ ಸೇರಿದಂತೆ ಹಲವು ಕಮಷರ್ಿಯಲ್ ಚಿತ್ರಗಳಲ್ಲಿ ನಟಸಿದ್ದಾಳೆ. ತಮಿಳು, ಕನ್ನಡ, ಬಂಗಾಳಿ, ಮಲಯಾಳಂ, ತೆಲುಗಿನಲ್ಲಿ 30ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾಳೆ. ಈ ಹಂತದಲ್ಲಿ ಈಕೆಗೆ ಅಂಡರ್ ವರ್ಲ್ಡ್ ಜೊತೆ ಸಂಪರ್ಕವಿರುವ ಮಾಹಿತಿ ಬಹಿರಂಗವಾಗಿತ್ತು. ಆ ಹಂತದಲ್ಲೇ ಅವಳಿಗೆ ಡ್ರಗ್ ಪೆಡ್ಲರ್ ವಿಕ್ಕಿ ಗೋಸ್ವಾಮಿ ಜೊತೆ ಅಫೇರ್ ಇತ್ತು. ಸಿನಿಮಾ ರಂಗದಲ್ಲಿ ಹನ್ನೊಂದು ವರ್ಷಗಳ ಕಾಲ ಛಾಪನ್ನು ಮೂಡಿಸಿದ್ದ ಮಮತಾ, ಬೆಳ್ಳಿ ಪರದೆಯಿಂದ ದೂರ ಸರಿದ ಮೇಲೆ ಹೋಟೆಲ್ ಬಿಸಿನೆಸ್ ಮಾಡಿಕೊಂಡಿದ್ದಳು. ಕಳೆದ ವರ್ಷ ಇಸ್ಲಾಂ ಧರ್ಮಕ್ಕೂ ಮತಾಂತರಗೊಂಡಿದ್ದಳು. ಮಮತಾ ಜೊತೆಗೆ ಪತಿ ವಿಕ್ಕಿ ಗೋಸ್ವಾಮಿ ಸಹ ಇಸ್ಲಾಂ ಧರ್ಮ ಸ್ವೀಕಾರ ಮಾಡಿದ್ದ.
ವಿಕ್ಕಿ ಗೋಸ್ವಾಮಿ ಹಾಗೂ ಮಮತಾ ನಡುವೆ ಬಹಳ ವರ್ಷದಿಂದ ಪ್ರೇಮವಿತ್ತು. ವಿಕಿ ಗೋಸ್ವಾಮಿಯನ್ನು 1997ರಲ್ಲಿ ಯುನೈಟೆಡ್ ಅರಬ್ ಎಮಿರೇಟ್ಸ್ ಪೊಲೀಸರು ಮಾದಕದ್ರವ್ಯ ಕಳ್ಳಸಾಗಾಣಿಕೆ ಪ್ರಕರಣದಲ್ಲಿ ಬಂಧಿಸಿ 15 ವರ್ಷ ಜೈಲಿನಲ್ಲಿಟ್ಟಿದ್ದರು. ವಿಕ್ಕಿ ಜೈಲು ಪಾಲಾದ ನಂತರ ಹೋಟೇಲನ್ನು ಮಮತಾ ಕುಲಕರ್ಣಿ ನಿಭಾಯಿಸುತ್ತಿದ್ದಳು. ಆತ ಜೈಲಿನಿಂದ ಬಿಡುಗಡೆಯಾಗಿ ಬಂದ ನಂತರ 2013ರಲ್ಲಿ ಮದುವೆಯಾದರು. ಕೀನ್ಯಾದ ನೈರೋಬಿಗೆ ವಾಸ್ತವ್ಯ ಬದಲಾಯಿಸಿದರು. ಕೀನ್ಯಾಕ್ಕೆ ಹೋದನಂತರ ಮಮತಾ ಕುಲಕರ್ಣಿ ಯಾರ ಕಣ್ಣಿಗೂ ಕಾಣಿಸಿಕೊಳ್ಳಲಿಲ್ಲ. ಕೇವಲ ವಿವಾದ, ಅಶ್ಲೀಲತೆಯಿಂದ ಸುದ್ದಿಯಾಗಿದ್ದ ಈಕೆ ಈಗ ಪಕ್ಕಾ ಧಾರ್ಮಿಕ ಮಹಿಳೆಯಾಗಿದ್ದಾಳೆ ಎಂಬ ಮಾಹಿತಿಯಿತ್ತು. ಅಲ್ಲದೇ `ಅಟೋಬಯಾಗ್ರಫಿ ಆನ್ ಯೋಗಿನ್’ ಎಂಬ ಆತ್ಮಕತೆಯನ್ನೂ ಬರೆದಳು. ವಿಕ್ಕಿ ಗೋಸ್ವಾಮಿಯಷ್ಟೇ ಅಲ್ಲ, ಯಾರನ್ನೂ ಮದುವೆ ಆಗಿಲ್ಲ ಅಂತ ಹೇಳಿಕೆ ನೀಡಿದ್ದಳು. ಆದರೆ ಮಾದಕ ದ್ರವ್ಯ ಕೇಸಿನಲ್ಲಿ ವಿಕ್ಕಿ ಗೋಸ್ವಾಮಿ ಜೊತೆ ಮಮತಾ ಹೆಸರು ತಳುಕು ಹಾಕಿಕೊಂಡಿತ್ತು. ಮೊದಲೇ ಹೇಳಿದಂತೆ ಬಾಲಿವುಡ್ಗೂ ಅಂಡರ್ ವರ್ಲ್ಡ್ ಗೂ ಒಂದಲ್ಲ ಒಂದು ರೀತಿಯಿಂದ ನಿಕಟ ಸಂಬಂಧವಿದೆ. ಅದೆಷ್ಟೋ ಸೆಲೆಬ್ರಿಟಿಗಳು ಕುಖ್ಯಾತ ಭೂಗತ ಮಂದಿಯ ಜೊತೆ ಲಿಂಕಿಟ್ಟುಕೊಂಡಿರುತ್ತಾರೆ. ಒಂದೊಮ್ಮೆ ಅದು ಅಳತೆ ಮೀರಿಯೂ ಹೋಗಿದೆ. ಇಷ್ಟೆಲ್ಲಾ ಯಾಕೆ..? ಬಾಲಿವುಡ್ಡನ್ನು ನಿಯಂತ್ರಿಸುತ್ತಿರುವುದೇ ಅಂಡರ್ ವರ್ಲ್ಡ್.
POPULAR STORIES :
ಐನೂರು ಮಹಿಳೆಯರ ಜೊತೆ ಮಲಗಿದ್ದಾನಂತೆ ಈ ವೆಸ್ಟ್ ಇಂಡೀಸ್ ಕ್ರಿಕೆಟರ್..!
`ಫೋರ್ಜರಿ ಕೇಸ್’, ನಟಿಗೆ ಮೂರು ವರ್ಷ ಜೈಲು..!
ಅಲ್ಟ್ರಾ ಮಾಡರ್ನ್ ಡ್ರೆಸ್ ಗೆ ನೋ ಎಂಟ್ರಿ, ತುಂಡುಡುಗೆ ಹಾಕಿಕೊಳ್ಳುವುದನ್ನ ಅಪರಾಧ ಎಂದು ಪರಿಗಣಿಸಲಾಗುತ್ತಂತೆ
ಬುಕ್ಕಿಗಳ ಫೇವರೆಟ್ ಟೀಮ್ ಯಾವುದು ಗೊತ್ತಾ..? ಈ ಬಾರಿಯ ಐಪಿಎಲ್ ಕಪ್ ಗೆಲ್ಲೋದು ಇದೇ ಟೀಮ್ ಅಂತೆ..!
`ಫಿಫ್ಟಿ ಶೇಡ್ಸ್ ಆಫ್ ಗ್ರೇ’ ಓದಲು ಇಷ್ಟ, ನೋಡಲು ಕಷ್ಟ ಕಷ್ಟ..!!
ಯೇ ದೋಸ್ತಿ ಹಮ್ ನಹೀ ಚೋಡೆಂಗೆ – ಕಿಚ್ಚ ದಚ್ಚು ಬೆಸ್ಟ್ ಫ್ರೆಂಡ್ಸ್ ಫಾರ್ ಎವರ್