ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಟಿಪ್ಸ್

0
338

ಅಧಿಕ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಈ ಟಿಪ್ಸ್ ಫಾಲೋ ಮಾಡಿ

ಈಗಿನ ಐಟಿ/ಬಿಟಿ ಜಮಾನದಲ್ಲಿ ಕುಳಿತೇ ಮಾಡುವ ಕೆಲಸಗಳು, ವ್ಯಾಯಾಮದ ಕೊರತೆ ಮತ್ತು ಅತಿಹೆಚ್ಚು ಉಪ್ಪಿನ ಅಂಶವುಳ್ಳ ಆಹಾರ ಸೇವನೆಯಿಂದ ಯುವಕರಲ್ಲೂ ಈ ಸಮಸ್ಯೆ ಹೆಚ್ಚುತ್ತಿದೆ. ನಿಮ್ಮ ರಕ್ತದೊತ್ತಡದ ಮಟ್ಟ ನಿರಂತರವಾಗಿ ಹೆಚ್ಚುತ್ತಿದ್ದರೆ ಹುಷಾರ್.

ಬಿಪಿಯನ್ನು ನಿಯಂತ್ರಣದಲ್ಲಿಡಲು ಈ ಟಿಪ್ಸ್ ಫಾಲೋ ಮಾಡಿ :

ಮೊಸರು ಸೇವಿಸುವುದರಿಂದ ನೈಸರ್ಗಿಕವಾಗಿ ದೊರೆಯುವ ಕ್ಯಾಲ್ಶಿಯಂನಿಂದ ರಕ್ತನಾಳಗಳು ಹಿಗ್ಗಿ ರಕ್ತದೊತ್ತಡ ಕಡಿಮೆಯಾಗುತ್ತದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

ಜಾಗಿಂಗ್ ಮಾಡಿ, ಜಾಗಿಂಗ್‌ನಿಂದ ಆರೋಗ್ಯಕ್ಕೆ ಒಳ್ಳೆಯದು, ಆಮ್ಲಜನಕದ ಹೀರಿಕೊಳ್ಳುವಿಕೆ ಸುಧಾರಿಸುವುದಲ್ಲದೆ, ರಕ್ತದೊತ್ತಡ ಕಡಿಮೆಯಾಗುತ್ತದೆ. ಹಾಗೆಯೇ ಇನ್ನೂ ಹಲವು ಆರೋಗ್ಯ ಲಾಭಗಳು ಜಾಗಿಂಗ್‌ನಿಂದ ಸಿಗುತ್ತವೆ. ಯಾವುದೇ ದೈಹಿಕ ಚಟುವಟಿಕೆಗಳು ಹೃದಯವನ್ನು ಬಲಿಷ್ಠಗೊಳಿಸುತ್ತವೆ. ಇದರಿಂದ ಹೆಚ್ಚು ರಕ್ತವನ್ನು ಪಂಪ್‌ ಮಾಡಲು ಹೃದಯಕ್ಕೆ ಸಾಧ್ಯವಾಗಿ ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿಯಾಗುತ್ತದೆ.

ಉಪ್ಪಿನ ಸೇವನೆ ಕಡಿಮೆ ಮಾಡಿ , ಉಪ್ಪಿನಂಶವು ದೇಹದ ದ್ರವಗಳನ್ನು ಹೀರಿಕೊಳ್ಳುತ್ತದೆ. ಇದರಿಂದ ನಿಮ್ಮ ಅಪಧಮನಿಗಳಲ್ಲಿ ಹರಿಯುವ ರಕ್ತದ ಒತ್ತಡ ಮತ್ತು ಪ್ರಮಾಣ ಜಾಸ್ತಿಯಾಗುತ್ತದೆ. ಮನೆಯ ಅಡುಗೆಯಲ್ಲಿ ಬಳಸುವ ಉಪ್ಪಿನ ಪ್ರಮಾಣ ಆತಂಕಕಾರಿಯಲ್ಲ; ಬದಲಿಗೆ ಬಿಸ್ಕೆಟ್‌ಗಳು, ಬೇಕರಿ ತಿಂಡಿಗಳು, ಸಿದ್ಧ ಆಹಾರಗಳ ಸೇವನೆಯಿಂದಲೇ ಶೇ 80ರಷ್ಟು ಉಪ್ಪು ನಮ್ಮ ದೇಹಕ್ಕೆ ಸೇರುತ್ತದೆಯಂತೆ.

ಬೀಟ್‌ರೂಟ್‌ ಜ್ಯೂಸ್‌ ಸೇವನೆಯಿಂದ ರಕ್ತದ ಒತ್ತಡ ಕಡಿಮೆಯಾಗುತ್ತದೆ. ಅದರಲ್ಲಿರುವ ನೈಸರ್ಗಿಕವಾದ ನೈಟ್ರೇಟ್‌ ಪ್ರಮಾಣವು ರಕ್ತದೊತ್ತಡ ಕಡಿಮೆ ಮಾಡಲು ಸಹಕಾರಿ.

ಸಿಗರೇಟ್‌ಗಳಲ್ಲಿ ಇರುವ ನಿಕೊಟಿನ್ ನಿಮ್ಮ ದೇಹದಲ್ಲಿ ಅಡ್ರಿನಾಲಿನ್ ಸ್ರವಿಕೆಯನ್ನು ಹೆಚ್ಚಿಸುತ್ತದೆ. ಇದರಿಂದ ಹೃದಯ ಬಡಿತ, ರಕ್ತದ ಒತ್ತಡ ಜಾಸ್ತಿಯಾಗುತ್ತದೆ. ಇದರಿಂದಲೂ ಹೃದಯದ ಕೆಲಸ ಕಠಿಣವಾಗುತ್ತದೆ.

ಕಾಫಿ ಸೇವನೆ ಕಡಿಮೆ ಮಾಡಿ, ಕೆಫೀನ್‌ನಿಂದ ರಕ್ತನಾಳಗಳು ಬಿಗಿಯಾಗಿ ರಕ್ತದೊತ್ತಡ ಹೆಚ್ಚುತ್ತದೆ. ಅಲ್ಲದೆ ಮಾನಸಿಕ ಹಾಗೂ ಕೆಲಸದೊತ್ತಡದ ಪರಿಣಾಮವನ್ನು ಮತ್ತಷ್ಟು ಹೆಚ್ಚಿಸುತ್ತದೆ.

 

LEAVE A REPLY

Please enter your comment!
Please enter your name here