ಅದು ಬ್ರಿಟಿಷ್ ಏರ್ ವೇಸ್. ಲಂಡನ್ನಿಂದ ಬೆಂಗಳೂರಿಗೆ ಹೊರಟ ವಿಮಾನ ಅದು. ವಿಮಾನದ ಬಹಳಷ್ಟು ಸೀಟುಗಳಲ್ಲಿ ಕನ್ನಡದವರೇ ಇದ್ದಾರೆ. ಅವರೆಲ್ಲರಿಗೂ ತವರಿಗೆ ಮರಳುವ ಸಂಭ್ರಮ..! ಎಲ್ಲರೂ ಅವರವರ ಸೀಟಲ್ಲಿ ಕೂತು ಇನ್ನೇನು ಆಕಾಶಕ್ಕೆ ಹಾರಬೆಕು ಅನ್ನೋ ಹೊತ್ತಿಗೆ ವಿಮಾನದ ಸ್ಪೀಕರ್ ಗಳು ಮಾತನಡಲು ಶುರುಮಾಡಿದ್ವು..! ನಮಸ್ಕಾರ, ತಮ್ಮೆಲ್ಲರಿಗೂ ಕನ್ನಡ ರಾಜ್ಯೋತ್ಸವದ ಶುಭಾಶಯಗಳು..! ನಿಮ್ಮೆಲ್ಲರಿಗೂ ಬ್ರಿಟಿಷ್ ಏರ್ ವೇಸ್ ಜೊತೆ ಪ್ರಯಾಣಕ್ಕೆ ಸ್ವಾಗತ, ಸುಸ್ವಾಗತ..! ವಿಮಾನದಲ್ಲಿ ಕೂತಿದ್ದ ಕನ್ನಡಿಗರ ಮೈ ಜುಂ ಅಂದುಬಿಡ್ತು..! ಅದು ನಿಜಕ್ಕೂ ಬ್ರಿಟಿಷ್ ಏರ್ ವೇಸ್ ವಿಮಾನವಾ ಅಂತ ಅನುಮಾನ ಶುರುವಾಗಿಬಿಡ್ತು..! ನಮ್ಮ ಬೆಂಗಳೂರಿಗೆ ಬರೋ ನಮ್ಮ ದೇಶದ ವಿಮಾನ ಸಂಸ್ಥೆಗಳೇ ಕನ್ನಡದಲ್ಲಿ ಕನ್ನಡ ಪದಗಳು ಕೆಳೋಕೇ ಸಾಧ್ಯವಿಲ್ಲ.. ಅಂತದ್ರಲ್ಲಿ ಬ್ರಿಟೀಷ್ ಏರ್ ವೇಸ್ ನಲ್ಲಿ ಕನ್ನಡ..! ವಿಮಾನ ಹತ್ತಿದ ಕನ್ನಡಿಗರೆಲ್ಲರಿಗೂ ಕನ್ನಡದ ನೆಲದಲ್ಲಿದ್ದಷ್ಟೇ ಸಂಭ್ರಮ..! ಕನ್ನಡ ಮುಂದುವರೀತು.. ಎಲ್ಲರೂ ಬೆಲ್ಟ್ ಹಾಕಿಕೊಳ್ಳಿ, ನಿಮ್ಮ ಕೈಬ್ಯಾಗನ್ನು ಕಾಲಿನ ಬಳಿ ಇಟ್ಟುಕೊಳ್ಳಿ ಅಂತ ಹೇಳೋದ್ರಿಂದ ಆರಂಭವಾಗಿ, ನಿಮಗೆ ವೆಜ್ ಬೇಕಾ..? ನಾನ್ ವೆಜ್ ಬೇಕಾ ಅಂತ ಕೇಳುತ್ತಾ ಕನ್ನಡಿಗರನ್ನು ಅದ್ಭುತವಾಗಿ ಉಪಚರಿಸಿದ್ರು..! ವಿಮಾನದಲ್ಲಿ `ಮೈತ್ರಿ’ ಕನ್ನಡ ಸಿನಿಮಾದ ಸಿಡಿಯೂ ಇತ್ತು..! ಒಟ್ಟಾರೆ ಕನ್ನಡಿಗರೆಲ್ಲಾ ಖುಷಿಯೋ ಖುಷಿ.. ಹೀಗೆ ತಮ್ಮ ಅನುಭವವನ್ನು ಫೇಸ್ ಬುಕ್ಕಲ್ಲಿ ಬರೆದುಕೊಂಡಿದ್ದಾರೆ ಲಂಡನ್ನಿನಿಂದ ಬಂದಿಳಿದ ರೇಣುಕಾ ಮಂಜುನಾಥ್..! ಅವರೇ ಹೇಳೋ ಹಾಗೆ ಅದು ಅವರ ಜೀವನದ ಅದ್ಭುತ ಅನುಭವವಂತೆ. ಅದೆಲ್ಲಾ ಹೇಗೆ ಸಾಧ್ಯವಾಯ್ತು ಅನ್ನೋ ಪ್ರಶ್ನೆಗೆ ಉತ್ತರ ದೀಪಕ್..!ಅದೇ ವಿಮಾನದಲ್ಲಿ ಅವರು ಕ್ಯಾಬಿನ್ ಕ್ರ್ಯೂ..! ಕನ್ನಡದ ಹುಡುಗ.. ಹಾಗಾಗಿ ತನ್ನ ಕನ್ನಡಾಭಿಮಾನವನ್ನು ಬ್ರಿಟಿಷ್ ಏರ್ ವೇಸಲ್ಲೂ ಮೆರೆದಿದ್ದಾರೆ ನಮ್ಮ ಕನ್ನಡದ ಹೆಮ್ಮೆಯ ಕೊಡಗಿನ ಹುಡುಗ ದೀಪಕ್ ದೇವಯ್ಯಾ..! ಅಂತಹ ಸಂಸ್ಥೆಯಲ್ಲಿ ಕೆಲಸ ಸಿಕ್ಕಿದ ಕೂಡ್ಲೆ ಬ್ರಿಟೀಷ್ ರಾಣಿಯ ವಂಶಸ್ಥರೇನೋ ಅನ್ನೊ ಹಾಗೆ ಆಡೋರ ನಡುವೆ ದಿಪಕ್ ನಿಜಕ್ಕೂ ಗ್ರೇಟ್ ಅನ್ನಿಸ್ತಾರೆ..! ಕನ್ನಡದ ಹಬ್ಬವನ್ನು ಅದೆಷ್ಟೋ ಸಾವಿರ ಕಿಲೋಮೀಟರ್ ದೂರದಾಚೆಯಲ್ಲಿ ಅದೂ ಕನ್ನಡಿಗರ ಜೊತೆಯಲ್ಲಿ, ಆಗಸದುದ್ದಕ್ಕೂ ಕನ್ನಡ ಮಾತಾಡಿಸಿ ಆಚರಿಸಿದ ದೀಪಕ್ ಗೆ ಕನ್ನಡಿಗರ ಸಲಾಂ..! ಈ ಅದ್ಭುತ ಅನುಭವದ ಜೊತೆಗೆ ಅವರ ಫೋಟೋ ಸಹ ಕನ್ನಡಿಗರಿಗೆ ತೋರಿಸಿದ ರೇಣುಕಾ ಮೇಡಂ, ನಿಮಗೂ ಧನ್ಯವಾದ..! ಕನ್ನಡ ಹಬ್ಬದ ನಿಜವಾದ ಆಚರಣೆಗೆ ಇದೇ ಅಲ್ಲವೇ..!
-ಕೀರ್ತಿ ಶಂಕರಘಟ್ಟ
If you Like this Story , Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
POPULAR STORIES :
ಕಿರಿಕ್ ಕೀರ್ತಿ ಸ್ಟೈಲಲ್ಲಿ ಹುಚ್ಚ ವೆಂಕಟ್ ವ್ರತ..! ನೋಡಿ, ಸಖತ್ ಎಂಜಯ್ ಮಾಡಿ..! ಇದು ತಮಾಷೆಗೆ..!
ನಮ್ಮ ಕನ್ನಡ ಹುಡುಗರ ಕನ್ನಡ ಹಾಡು..! ಕನ್ನಡ ಕನ್ನಡ ಕನ್ನಡ ಅಂತ ಹೆಮ್ಮೆಯಿಂದ ಹಾಡಿದ್ದಾರೆ ನಮ್ಮ ಹೊಸಪೇಟೆ ಹುಡುಗರು