ಜಿಯೋಗೆ ಪೈಪೋಟಿ ನೀಡಲು ಬಿಎಸ್‍ಎನ್‍ಎಲ್ ಭರ್ಜರಿ ಆಫರ್.!

Date:

ಪ್ರಸಕ್ತ ವರ್ಷದಲ್ಲಿ ಭಾರತೀಯ ಗ್ರಾಹಕರಿಗೆ ಬಂಪರ್ ಆಫರ್‍ಗಳ ಸುರಿಮಳೆಯನ್ನೇ ಟೆಲಿಕಾಂ ಸಂಸ್ಥೆಗಳು ನೀಡುತ್ತಾ ಬಂದಿದೆ. ಇದೀಗ ಮಾರುಕಟ್ಟೆಯಲ್ಲಿ ರಿಲಯಾನ್ಸ್ ಜಿಯೋ 4ಜಿ ಪೈಪೋಟಿಯನ್ನು ಎದುರಿಸಲು ಇತರೆ ಟೆಲಿಕಾಂ ಸಂಸ್ಥೆಗಳು ತಮ್ಮ ಗ್ರಾಹಕರನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ.ಅದರಲ್ಲೂ ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಿಎಸ್‌ಎನ್‌ಎಲ್ ಇತರ ಟೆಲಿಕಾಂ ಸಂಸ್ಥೆಗಳಿಗಿಂತ ಮೊದಲು ತನ್ನ ಗ್ರಾಹಕರಿಗೆ ಬಂಪರ್ ಆಫರ್ ನೀಡಿದೆ. ರಿಲಾಯನ್ಸ್ ಜಿಯೋ ಭಾರೀ ಆಫರ್ ನೀಡುವ ಮೂಲಕ ಮೊಬೈಲ್ ಗ್ರಾಹಕರನ್ನು ಸೆಳೆಯುತ್ತಿರುವುದರಿಂದ ಇತರೆ ಟೆಲಿಕಾಂ ಕಂಪನಿಗಳು ಅದಕ್ಕೆ ಸ್ಪರ್ಧೆಯೊಡ್ಡಲು ತಯಾರಿ ನಡೆಸುತ್ತಿವೆ.
ಗ್ರಾಹಕರು ಪೋರ್ಟಿಂಗ್ ಮೂಲಕ ರಿಲಾಯನ್ಸ್ ಜಿಯೋ ಗೆ ತೆರಳದಂತೆ ಮಾಡಲು ಕಸರತ್ತು ಮಾಡುತ್ತಿರುವ ಕಂಪನಿಗಳು, ಅಂತಹ ಗ್ರಾಹಕರಿಗೆ ರಿಯಾಯಿತಿ ದರ ನೀಡುವ ಮೂಲಕ ಮನವೊಲಿಸಲು ಯತ್ನಿಸುತ್ತಿವೆ.

ಇದೀಗ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್ ತನ್ನ ಬ್ರಾಡ್ ಬ್ಯಾಂಡ್ ಗ್ರಾಹಕರಿಗೆ ಭಾರೀ ಆಫರ್ ಘೋಷಿಸಿದ್ದು, ಕೇವಲ 249 ರೂಪಾಯಿಗಳಿಗೆ ಅನಿಯಮಿತ ಡೇಟಾ ಸೌಲಭ್ಯ ನೀಡುವುದಾಗಿ ಹೇಳಿದೆ. ‘Experience Unlimited BB 249’ ಹೆಸರಿನ ಈ ಪ್ಲಾನ್ ಸೆಪ್ಟೆಂಬರ್ 9 ರಿಂದ ಜಾರಿಗೆ ಬರಲಿದೆ ಎಂದು ಹೇಳಲಾಗಿದೆ. ಮಾಸಿಕ 300 ಜಿಬಿ ವರೆಗೆ ಡೇಟಾ ಬಳಸುವ ಗ್ರಾಹಕರಿಗೆ ಈ ಕೊಡುಗೆಯಿಂದಾಗಿ ಪ್ರತಿ ಜಿಬಿ ಗೆ 1 ರೂ.ಗಳಿಗಿಂತಲೂ ಕಡಿಮೆ ವೆಚ್ಚ ತಗುಲಲಿದೆ. 2 ಎಂಬಿಪಿಎಸ್ ವೇಗದಲ್ಲಿ ಡೇಟಾ ದೊರೆಯಲಿದೆ ಎನ್ನಲಾಗಿದ್ದು, ಮೊಬೈಲ್ ಬಳಕೆದಾರರ ಕರೆ ದರಗಳಲ್ಲೂ ಬಿಎಸ್‌ಎನ್‌ಎಲ್ ಕಡಿತಗೊಳಿಸುವ ನಿರೀಕ್ಷೆಯಿದೆ.

POPULAR  STORIES :

ಬಂಪರ್ ಆಫರ್…! 500ರೂ. ಕೊಟ್ಟು ಒಂದು ದಿನ ಜೈಲುವಾಸ ಅನುಭವಿಸಿ..!

ಒಲಿಂಪಿಕ್ಸ್ ನಲ್ಲಿ ಚಿನ್ನ ಗೆದ್ದ ಆಕೆಗೆ ಅಲ್ಲಿನ ಸರ್ಕಾರ ಕೊಟ್ಟ ಉಡುಗೊರೆ ಏನು ಗೊತ್ತಾ…?

ಶುಕ್ರವಾರ ತೆರೆ ಕಾಣಲಿವೆ ಎಂಟು ಸಿನಿಮಾ..! ದಾಖಲೆಯ ಸಿನಿಮಾ ರಿಲೀಸ್‍ಗೆ ಇನ್ನೊಂದೇ ದಿನ ಬಾಕಿ..!

ಶತಾಯುಷಿ ಅಜ್ಜಿ ಓಟದಲ್ಲಿ ಗೆದ್ದಿತು ಮೂರು ಚಿನ್ನದ ಪದಕ..!

ಕಾರ್ಮಿಕರ ಬೇಡಿಕೆ ಈಡೆರಿಸುವಲ್ಲಿ ಕೇಂದ್ರ ವಿಫಲ: ಶುಕ್ರವಾರ ಭಾರತ್ ಬಂದ್ ಖಚಿತ..!

ಜಿಯೋ ಎಫೆಕ್ಟ್: ಏರ್‍ಟೆಲ್ 4ಜಿ ಸೇವೆಗಳ ಮೇಲೆ ಶೇ.80ರಷ್ಟು ರಿಯಾಯಿತಿ.

18 ವರ್ಷ ತುಂಬುದ್ರೆ 37 ಸಾವಿರ ಆಫರ್…!

Share post:

Subscribe

spot_imgspot_img

Popular

More like this
Related

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ!

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ಇಳಿಕೆ: ಯಥಾಸ್ಥಿತಿಯಲ್ಲಿ ಗೃಹಬಳಕೆ! ನವದೆಹಲಿ:- ದೇಶದಲ್ಲಿ ಪ್ರತಿ...

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್

ಇಂಗ್ಲೀಷ್, ಹಿಂದಿ ಭಾಷೆಗಳ ದಾಳಿಯಿಂದ ಕನ್ನಡ‌‌ ಕಾಪಾಡಬೇಕು: ಡಿಸಿಎಂ ಡಿ.ಕೆ.ಶಿವಕುಮಾರ್ ಬೆಂಗಳೂರು: ಇಡೀ...

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು

ಆಂಧ್ರದ ಶ್ರೀಕಾಕುಳಂನಲ್ಲಿ ಕಾಲ್ತುಳಿತ: ದೇವರ ದರ್ಶನಕ್ಕೆ ಬಂದ 9 ಭಕ್ತಾದಿಗಳ ಸಾವು ಆಂಧ್ರಪ್ರದೇಶದ...

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ

ರಾಜ್ಯದ ಎಲ್ಲಾ ಪ್ರದೇಶಗಳಲ್ಲಿ ಒಣ ಹವೆ! ಆದ್ರೆ ಬೆಂಗಳೂರಿನಲ್ಲಿ ಮೋಡ ಕವಿದ...