ಬುಲೆಟ್ ಪ್ರಕಾಶ್ – ದಿನಕರ್ ತೂಗದೀಪ ಸಂಧಾನ ಯಶಸ್ವಿ

Date:

ನಟ ಬುಲೆಟ್ ಪ್ರಕಾಶ್ ಮೇಲೆ ಚಾಲೆಂಜಿಗ್ ಸ್ಟಾರ್ ದರ್ಶನ್ ಸೋದರ ದಿನಕರ್ ತೂಗದೀಪ, ಮತ್ತವರ ಸಹಚರರು ನನಗೆ ಜೀವ ಬೆದರಿಕೆ ಹಾಕಿ, ಹಲ್ಲೆ ನಡೆಸಿದ್ದರೆನ್ನಲಾದ ಪ್ರಕರಣ ಸುಖಾಂತ್ಯ ಕಂಡಿದೆ. ಬುಲೆಟ್ ಮತ್ತು ತೂಗದೀಪರ ನಡುವೆ ಅಮೃತಹಳ್ಳಿ ಠಾಣೆಯಲ್ಲಿ ಯಶಸ್ವಿ ಸಂಧಾನ ನಡೆದಿದೆ.

`ಚಾಲೆಂಜಿಗ್ ಸ್ಟಾರ್ ದರ್ಶನ್ ಸಹೋದರ ದಿನಕರ್ ತೂಗದೀಪ, ಮತ್ತವರ ಸಹಚರರು ನನಗೆ ಜೀವ ಬೆದರಿಕೆ ಹಾಕಿದ್ದಾರೆ” ಎಂದು ಬುಲೆಟ್ ಪ್ರಕಾಶ್ ಆರೋಪ ಮಾಡಿದ್ದರು. ಕಳೆದ ರಾತ್ರಿ ದಿನಕರ್ ಹಾಗೂ ಅವರ ಸಹಚರರು ಕೆಂಪಾಪುರದಲ್ಲಿರುವ ತನ್ನ ಮನೆಯ ಬಳಿಯ ರಾಜನ್ ಸ್ಟುಡಿಯೋ ಬಳಿ ಬಂದು ಹಲ್ಲೆ ನಡೆಸಿರುವುದಾಗಿ ಹೇಳಿದ್ದ ಪ್ರಕಾಶ್ ಈ ಬಗ್ಗೆ ದೂರು ಸಲ್ಲಿಸಿದ್ದರು.
ಈ ಆರೋಪದ ಜೊತೆಗೆ, `ಜನವರಿ 29ರಂದು ಮಾಸ್ತಿಗುಡಿ ಸೆಟ್ನಲ್ಲಿ ದಿನಕರ್ ತೂಗದೀಪ ತನಗೆ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆ. ಹಲವಾರು ದಿನಗಳಿಂದ ದಿನಕರ್ ಜೊತೆ ಕುಡಿದ ಮತ್ತಲ್ಲಿ ದರ್ಶನ್ ಕೂಡ ರಾತ್ರಿ ಕರೆ ಮಾಡಿ ಅವಾಚ್ಯ ಶಬ್ಧಗಳಿಂದ ನಿಂಧಿಸಿದ್ದಾರೆಂತಲೂ ಬುಲೆಟ್ ಪ್ರಕಾಶ್ ಬಲವಾದ ಆರೋಪ ಮಾಡಿದ್ದಾರೆ.
ಬುಲೆಟ್ ಪ್ರಕಾಶ್ ದರ್ಶನ್ ರವರನ್ನಾಕಿಕೊಂಡು ಸಿನಿಮಾ ಮಾಡಬೇಕೆಂದಿದ್ದರು. ಅದಕ್ಕಾಗಿಯೇ ದಿನಕರ್ ಹೀಗೆ ಮಾಡಿದ್ದಾರೆಂದು ಹೇಳಲಾಗುತ್ತಿದೆ. ನಿರ್ಮಾಪಕನಾಗಬೇಕೆಂಬ ನನ್ನ ಕನಸಿಗೆ ತಣ್ಣೀರೆರಚಲು ದಿನಕರ್ ಗೆ ದರ್ಶನ್ ಸಾಥ್ ನೀಡಿದ್ದಾರೆಂಬುದು ಬುಲೆಟ್ರ ಆರೋಪವಾಗಿತ್ತು.
ಈ ಬಗ್ಗೆ ದಿನಕರ್ ತೂಗದೀಪರು ಪ್ರತಿಕ್ರಿಯಿಸಿದ್ದು ಎಲ್ಲಾ ಆರೋಪಗಳನ್ನು ತಳ್ಳಿಹಾಕಿದ್ದಾರೆ. ನಮ್ಮೊಡನೆ ಮಾತುಕತೆ ನಡೆದಿರೋದು ಸತ್ಯ. ಆದರೆ ನಾನು ಅವರಿಗೆ ಯಾವುದೇ ರೀತಿಯಲ್ಲಿ ಜೀವ ಬೆದರಿಕೆ ಹಾಕಿಲ್ಲ. ಅವರು ಮಾನಸಿಕ ಒತ್ತಡದಿಂದ ಹೀಗೆಳಿದ್ದಾರೆಂದು ಪ್ರತ್ಯಾರೋಪ ಮಾಡಿದ್ದರು.
ಈ ಬಗ್ಗೆ ಬುಲೆಟ್ ಪ್ರಕಾಶ್ ಅಮೃತಹಳ್ಳಿ ಪೊಲೀಸ್ ಸ್ಟೇಷನ್ನಲ್ಲಿ ದಿನಕರ್ ಬಗ್ಗೆ ದೂರು ದಾಖಲಿಸಿದ್ದರು. ಈಗ ಇಬ್ಬರ ನಡುವೆ ಸಂಧಾನ ನಡೆದಿದ್ದು ಬುಲೆಟ್ ದೂರನ್ನು ಹಿಂಪಡೆದಿದ್ದಾರೆ.

 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

Share post:

Subscribe

spot_imgspot_img

Popular

More like this
Related

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ

ಹಾಸನ ದುರಂತ: ಮೃತರ, ಗಾಯಾಳುಗಳ ಕುಟುಂಬಕ್ಕೆ ತೀವ್ರ ಸ್ಪಂದನೆಗೆ ಸಿಎಂ ಸೂಚನೆ ಬೆಂಗಳೂರು:...

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ?

ಆರೋಗ್ಯ ಕಾಪಾಡುವ ತಾಮ್ರದ ಪಾತ್ರೆಗಳನ್ನು ಸ್ವಚ್ಛಗೊಳಿಸುವುದು ಹೇಗೆ? ಮನೆಗಳಲ್ಲಿ ಸ್ಟೀಲ್ ಪಾತ್ರೆಗಳ ಜೊತೆಗೆ...

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ !

TNIT ಮೀಡಿಯಾ ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮಕ್ಕೆ ಅದ್ಭುತ ರೆಸ್ಪಾನ್ಸ್ ! TNIT ಮೀಡಿಯಾದಿಂದ...