No menu items!
11.1 C
Munich
Wednesday, April 29, 2026

ಕಾರಿಗೆ ಬೆಂಕಿ ಹಚ್ಚಿ ತಾಂಜೇನಿಯಾದ ವಿದ್ಯಾರ್ಥಿನಿ ಮೇಲೆ ಹಲ್ಲೆ; 9 ಜನ ಅರೆಸ್ಟ್..!

Must read

ಬೆಂಗಳೂರು : ಇತ್ತೀಚೆಗೆ ಕೆಲವು ಕಿಡಿಗೇಡಿಗಳು ತಾಂಜೀನಿಯಾದ ವಿದ್ಯಾರ್ಥಿಯೊಬ್ಬಳಿಗೆ ಥಳಿಸಿ, ಅವಳ ಬಟ್ಟೆಯನ್ನು ಹರಿದು, ಕಾರಿಗೆ ಬೆಂಕಿ ಹಚ್ಚಿದ ಘಟನೆ ನಡೆದಿತ್ತು. ಈ ಬಗ್ಗೆ ದೂರು ನೀಡಲು ಹೋದರೆ, ಪೊಲೀಸರು ದೂರು ಸ್ವೀಕರಿಸದೆ ನಿರ್ಲಕ್ಷಿಸಿದ್ದಾರೆಂದು ಪೊಲೀಸ್ ಉನ್ನತಾಧಿಕಾರಿಗಳಿಗೆ ಮತ್ತು ತಾಂಜೇನಿಯಾ ರಾಯಭಾರಿಗಳಿಗೆ ವಿದ್ಯಾರ್ಥಿನಿ ದೂರು ನೀಡಿದ್ದಾಳೆ.
ಈ ಬಗ್ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಪ್ರತಿಕ್ರಿಯಿಸಿದ್ದು ಆರೋಪಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಹೇಸರುಘಟ್ಟ ಮುಖ್ಯ ರಸ್ತೆಯ ಗಣಪತಿ ನಗರದ ೯ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿಸಲಾಗಿಯೆಂದು ಡಿಸಿಪಿ ಸುರೇಶ್ ತಿಳಿಸಿದ್ದಾರೆ.

ಘಟನೆ ಏನು..? :
ಜನವರಿ 31ರಂದು ಕುಡಿತ ಮತ್ತಿನಲ್ಲಿ ಸೂಡನ್ ವಿದ್ಯಾರ್ಥಿ 21 ವರ್ಷದ ಅಹದ್ ತನ್ನಿಷ್ಟದಂತೆ ಕಾರು ಚಾಲನೆ ಮಾಡಿಕೊಂಡು ಬಂದಿದ್ದಾನೆ..! ಹೇಸರುಘಟ್ಟ ಮುಖ್ಯರಸ್ತೆಯ ಗಣಪತಿ ನಗರದಲ್ಲಿ ಬೈಕ್ಗೆ ಕಾರು ಗುದ್ದಿದ್ದ. ಈ ಘಟನೆಯಲ್ಲಿ ಗಣಪತಿ ನಗರದ ಶಬಾನಾ ತಾಜ್ ಸಾವನ್ನಪ್ಪಿದ್ದರು. ಅವರ ಗಂಡ ಸನಾವುಲ್ಲಾ ಗಾಯಗೊಂಡಿದ್ದರು.
ಇದರಿಂದ ಸಿಟ್ಟಿಗೆದ್ದ ಸ್ಥಳಿಯರು, ಆರೋಪಿಗೆ ಮನಬಂದಂತೆ ಹೊಡೆದು, ಆತನ ಕಾರಿಗೂ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು. ತಕ್ಷಣ ಅಲ್ಲಿಗೆ ಆಗಮಿಸಿದ ಪೊಲೀಸರು ಆರೋಪಿಯನ್ನು ವಶಕ್ಕೆ ಪಡಿಸಿಕೊಂಡು ಪರಿಸ್ಥಿತಿ ತಿಳಿಗೊಳಿಸಿದ್ದರು. ಅದಾದ ಕೆಲವು ಸಮಯದ ನಂತರ ದಾಂಧಲೆ ನಡೆಸಿದ ಸ್ಥಳೀಯರು ತಾಂಜೇನಿಯಾ ವಿದ್ಯಾರ್ಥಿನಿ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.
ನನಗೂ ಆರೋಪಿ ವಿದ್ಯಾರ್ಥಿಗೂ ಯಾವುದೇ ಸಂಬಂಧವಿಲ್ಲ. ಆದರೂ ಅಪಘಾತವಾದ ಅರ್ಧಗಂಟೆ ಬಳಿಕ ನನ್ನ ಕಾರನ್ನು ಅಡ್ಡಗಟ್ಟಿ ನನ್ನನ್ನು ಹೊರಗೆಳೆದು ಕಾರಿಗೆ ಬೆಂಕಿ ಹಚ್ಚಿದ್ದಲ್ಲದೇ, ನನ್ನ ಬಟ್ಟೆಯನ್ನು ಹರಿದು ದುರ್ವತನೆ ತೋರಿದ್ದಾರೆ. ಸ್ನೇಹಿತನೊಬ್ಬ ನನಗೆ ಟೀ ಶರ್ಟ್ ಕೊಡಲು ಬಂದಾಗ ಆತನ ಮೇಲೂ ಹಲ್ಲೆ ನಡೆಸಿದ್ದಾರೆಂದು ವಿದ್ಯಾರ್ಥಿನಿ ಆರೋಪಿಸಿದ್ದಾರೆ

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

POPULAR  STORIES :

ಹೈದರಾಬಾದ್ ನ ವೋಟರ್ ಐಡಿಯಲ್ಲಿ ಸಲ್ಮಾನ್ ಖಾನ್ ಫೋಟೋ

1 ಗಂಡು + 4 ಹೆಣ್ಣು = ಒಟ್ಟು ಐದು ಮಕ್ಕಳಿಗೆ ಒಮ್ಮೆಲೇ ಜನ್ಮ ನೀಡಿದ ಮಹಾತಾಯಿ..!

ಅಣ್ಣಂಗೇ ಲವ್ ಆಗಿದೆ ಅಲ್ಲಲ್ಲ, ಹೆಲ್ಮೆಟ್ ಗೆ ಡಿಮ್ಯಾಂಡ್ ಬಂದಿದೆ…! ಇದು ಹೊಸಪೇಟೆ ಹುಡುಗರ ಹೊಸ ಹಾಡು..!

ವಿದೇಶಿಯರ ಬಾಯಲ್ಲೂ ಕನ್ನಡ ಕನ್ನಡ ಕನ್ನಡ..! ವಿದೇಶಿ ಮಹಿಳೆಯೊಬ್ಬರು ಹಚ್ಚೇವು ಕನ್ನಡದ ದೀಪ.. ಅಂತ ಹಾಡ್ತಾ ಇದ್ದಾರೆ..!

ಕಟ್ಟಿಗೆಯಾಗಿ ಪರಿವರ್ತನೆ ಹೊಂದುತ್ತಿದ್ದಾನೆ ಈ ಮಾನವ..! ವೈದ್ಯಕೀಯ ಲೋಕಕ್ಕೇ ಸವಾಲಾದ ಬಾಂಗ್ಲಾ ನಾಗರಿಕ..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article