ಸಾರಿಗೆ ಮುಷ್ಕರ..!! 8-9 ರಂದು ಒಂದೇ ಒಂದು ಬಸ್ ಕೂಡ ರಸ್ತೆಗಿಳಿಯಲ್ಲ…!!

1
655

ಸಾರಿಗೆ ಮುಷ್ಕರ..!! 8-9 ರಂದು ಒಂದೇ ಒಂದು ಬಸ್ ಕೂಡ ರಸ್ತೆಗಿಳಿಯಲ್ಲ…!!

ಹೌದು, ಇದೇ ಜನವರಿ 8-9 ರಂದು ರಾಷ್ಟ್ರ ವ್ಯಾಪಿ ಸಾರಿಗೆ ಮುಷ್ಕರ ನಡೆಸಲು ವಿವಿಧ ಸಾರಿಗೆ ನಿಗಮಗಳು ಹಾಗು ನೌಕರರ ಸಂಘಗಳು ಒಮ್ಮತದಿಂದ ಮೋಟಾರು ವಾಹನ ಮಸೂದೆ – 2017 ನ್ನು ಕೈ ಬಿಡುವಂತೆ ಒತ್ತಾಯಿಸಿ ಪ್ರತಿಭಟನೆಗೆ ಮುಂದಾಗಿವೆ..ಕೆಎಸ್ ಆರ್ ಟಿಸಿ, ಬಿಎಂಟಿಸಿ ಸೇರಿದಂತೆ ಒಟ್ಟು 26 ಸಾವಿರ ಸರ್ಕಾರಿ ಬಸ್ ಗಳು ತಮ್ಮ ಸೇವೆಯನ್ನ ಬಂದ್ ಮಾಡುತ್ತಿವೆ.. ಈ ಮುಷ್ಕರಕ್ಕೆ ಎಐಟಿಯುಸಿ ಸಾರಿಗೆ ಘಟಕದ ಕಾರ್ಯದರ್ಶಿ ರಾಜಗೋಪಾಲ್, ಆನಂದ್ ಸಿಐಟಿಯು ಸಾರಿಗೆ ಘಟಕದ ಜಿಲ್ಲಾ ಕಾರ್ಯದರ್ಶಿ ಬೆಂಬಲ ಸೂಚಿಸುವುದಾಗಿ ತಿಳಿಸಿದ್ದು,ಎಐಟಿಯುಸಿ ಮತ್ತು ಸಿಐಟಿಯು ಸೇರಿದ ಸಾರಿಗೆ ನೌಕಕರ ಸಂಘಟನೆಗಳು ಮುಷ್ಕರಕ್ಕೆ ಸಜ್ಜಾಗಿವೆ..ಹಲವು ಬೇಡಿಕೆಗಳ ಈಡೇರಿಕೆಗೂ ಒತ್ತಾಯಿಸಲಾಗುತ್ತಿದ್ದು ಕನಿಷ್ಠ ವೇತನ 18000 ಸಾವಿರ ನೀಡುವಂತೆ ಹಾಗು ಗುತ್ತಿಗೆ ನೀತಿಯನ್ನ ಕೈ ಬಿಡುವಂತೆ ಮತ್ತು ಬಹುರಾಷ್ಟ್ರೀಯ ಕಂಪನಿಗಳ ಕಾರ್ಮಿಕ ಕಾಯ್ದೆಗಳನ್ನು ತಿದ್ದುಪಡಿ ಮಾಡಬಾರದು ಎಂದು ಒತ್ತಾಯಿಸಲು ದೆಹಲಿಯಲ್ಲಿ ನಡೆದ ಕಾರ್ಮಿಕರ ಸಂಘದ  ಸಭೆಯಲ್ಲಿ ತೀರ್ಮಾನಿಸಲಾಗಿದೆ..

1 COMMENT

LEAVE A REPLY

Please enter your comment!
Please enter your name here