ಜೀವಸತ್ವಗಳ ಕಣಜ ಮಜ್ಜಿಗೆ, ಮಜ್ಜಿಗೆಯ ಹಲವು ಉಪಯೋಗಗಳು

Date:

ಭಾರತೀಯರ ಭೋಜನವು ಮಜ್ಜಿಗೆಯ ಸೇವನೆಯೊಂದಿಗೆ ಕೊನೆಗೊಳ್ಳದಿದ್ದರೆ, ಅದು ಅಪೂರ್ಣ. ಇದು ಕೇವಲ ಮಾತಿಗಲ್ಲದೆ, ಮಜ್ಜಿಗೆಯ ಸೇವನೆ ಸ್ವಾಸ್ಠ್ಯದ ಹಿತಕ್ಕೆ ಬಹು ಮುಖ್ಯ. ಮಜ್ಜಿಗೆಯು ಕೇವಲ ಒಂದು ಆಹಾರ ಪದಾರ್ಥವಲ್ಲ. ಹಲವಾರು ಔಷಥೀಯ ಗುಣಗಳನ್ನು ತನ್ನಲ್ಲಿರಿಸಿಕೊಂಡಿರುವ ಮಜ್ಜಿಗೆಯು ಮಾನವನಿಗೆ ಅಮೃತ ಸಮಾನ.
ಮಜ್ಜಿಗೆಯು ಆಯುರ್ವೇದ ಚಿಕಿತ್ಸೆಯಲ್ಲಿ ಬಹಳವಾಗಿ ಉಪಯೋಗಿಸುವ ಪ್ರಮುಖ ಆಹಾರ ಪದಾರ್ಥ. ಇದನ್ನು ಸಂಸ್ಕೃತದಲ್ಲಿ ತಕ್ರ ಎನ್ನುತ್ತಾರೆ. ಆಯುರ್ವೇದದಲ್ಲಿ ಮಜ್ಜಿಗೆಯನ್ನು ರೋಗಿಗಳ ಚಿಕಿತ್ಸೆಗಷ್ಟೇ ಅಲ್ಲದೆ, ರೋಗವನ್ನು ತಡೆಯುವ ಉದ್ದೇಶವಾಗಿ ಸ್ವಸ್ಥರಲ್ಲಿ ಆಹಾರರೂಪವಾಗಿ ಬಳಸಲಾಗುತ್ತದೆ.
ಮಜ್ಜಿಗೆಯು ಹಾಲಿನ ಉತ್ಪಾದನೆಗಳಾದ ಹಾಲು, ಮೊಸರು ಹಾಗು ತುಪ್ಪಗಳಲ್ಲಿಯೇ ಶ್ರೇಷ್ಠವಾದದ್ದು. ಹಾಲಿಗೆ ಹೋಲಿಸಿದರೆ, ಮಜ್ಜಿಗೆಯಲ್ಲಿ ಅತೀ ಕಡಿಮೆ ಅಂದರೆ, ಹಾಲಿನಲ್ಲಿನ ಶೇಕಡ ಅರ್ಧದಷ್ಟು ಕಡಿಮೆ ಕ್ಯಾಲೊರಿ ಹಾಗೂ ಮುಕ್ಕಾಲು ಅಂಶ ಕಡಿಮೆ ಕೊಬ್ಬಿನಂಶವಿದೆ. ಮಜ್ಜಿಗೆಯು ಕಷಾಯ ಹಾಗೂ ಅಮ್ಲ(ಹುಳಿ) ರಸ ಹೊಂದಿದ್ದು, ಲಘು ಗುಣದಿಂದಾಗಿ ಸುಲಭವಾಗಿ ಜೀರ್ಣಹೊಂದುತ್ತದೆ. ಇದರ ಉಷ್ಣ ಗುಣದಿಂದಾಗಿ ವಾತ ಹಾಗೂ ಕಫ ವಿಕಾರಗಳನ್ನು ನಿಯಂತ್ರಿಸುತ್ತದೆ.

ಮಜ್ಜಿಗೆಯನ್ನು ತಯಾರಿಸುವ ವಿಧಾನ

ಆಯುರ್ವೇದದಲ್ಲಿ ಐದು ಪ್ರಕಾರದ ಮಜ್ಜಿಗೆಯನ್ನು ನಿರ್ದೇಶಿಸಲಾಗಿದೆ. ಮೊಸರಿಗೆ ನೀರನ್ನು ಬೆರೆಸಿ ಚೆನ್ನಾಗಿ ಕಡೆದಾಗ ಶಾಖ ಉತ್ಪಾದನೆಯಾಗಿ ಹಲವು ಗುಣಗಳ ಪರಿವರ್ತನೆಯೊಂದಿಗೆ ಬೆಣ್ಣೆಯು ಬೇರ್ಪಡುತ್ತದೆ. ಇನ್ನುಳಿದ ಭಾಗವನ್ನು ಮಜ್ಜಿಗೆಯಾಗಿ ಉಪಯೋಗಿಸಬೇಕು.
ಮಜ್ಜಿಗೆಯಲ್ಲಿ ದೇಹದ ಆರೋಗ್ಯಕ್ಕೆ ಅಗತ್ಯವಾಗಿ ಬೇಕಾಗಿರುವ ಖನಿಜಾಂಶವು ಹೇರಳವಾಗಿದೆ. ಅನೀಮಿಯಾ, ಮಾನಸಿಕ ಒತ್ತಡ ಹಾಗೂ ಧಾತುಗಳ ಬೆಳವಣಿಗೆಗೆ ಅಗತ್ಯವಿರುವ ವಿಟಮಿನ್ ಬಿ12 ಮಜ್ಜಿಗೆಯಲ್ಲಿ ಪ್ರಮುಖವಾಗಿದೆ. ವಿಟಮಿನ್ ಬಿ12 ಗ್ಲುಕೋಸನ್ನು ಸುಲಭವಾಗಿ ಜೀರ್ಣಿಸಿ ಶಕ್ತಿಯಾಗಿ ಪರಿವರ್ತಿಸುತ್ತದೆ. ಆದ್ದರಿಂದ ಮಜ್ಜಿಗೆಯ ಸೇವನೆಯಿಂದ ತತ್ ಕ್ಷಣ ಶಕ್ತಿಯನ್ನು ಪಡೆಯಬಹುದು. ಇದರಲ್ಲಿನ ಪೊಟಾಶಿಯಂ ಅಂಶವು ರಕ್ತದೊತ್ತಡವನ್ನು ನಿಯಂತ್ರಿಸುತ್ತದೆ. ಅಲ್ಲದೇ ಮಜ್ಜಿಗೆಯಲ್ಲಿ ಕ್ಯಾಲ್ಸಿಯಂ ಹಾಗೂ ಪಾಸ್ಪರಸ್ ಅಂಶವು ಹೆಚ್ಚಾಗಿದ್ದು, ಮೂಳೆಗಳಿಗೆ ಅಗತ್ಯ ಪುಷ್ಟಿಯನ್ನು ನೀಡುತ್ತದೆ.
ದೇಹದಲ್ಲಾಗುವ ಹಲವು ರಾಸಾಯನಿಕ ಹಾಗೂ ಶಾರೀರಿಕ ಕ್ರಿಯೆಗಳಿಗೆ ಮಜ್ಜಿಗೆಯು ಅಗತ್ಯ. ರಕ್ತನಾಳಗಳಲ್ಲಿ ಲೇಪಿತವಾಗಿರುವ ಕೊಬ್ಬಿನಾಂಶ ಹಾಗೂ ಕೊಲೆಸ್ಟ್ರಾಲ್ ಅಂಶವನ್ನು ತೆಗೆದುಹಾಕುತ್ತದೆ. ಅತಿಯಾದ ಭೋಜನದ ನಂತರ ಮಜ್ಜಿಗೆ ಸೇವಿಸಿದರೆ, ಆಹಾರವು ಸುಲಭವಾಗಿ ಜೀರ್ಣವಾಗುತ್ತದೆ ಹಾಗೂ ಅತಿಯಾದ ಆಹಾರದ ಸೇವನೆಯಿಂದಾಗುವ ಉಬ್ಬಸವನ್ನು ಕಡಿಮೆಗೊಳಿಸುತ್ತದೆ.
ಹಲವು ರೋಗಗಳಲ್ಲಿ ಮಜ್ಜಿಗೆಯ ಬಳಕೆ
ಜಠರವಿಕಾರಗಳಲ್ಲಿ ಮಜ್ಜಿಗೆಯು ದಿವ್ಯೌಷಧಿ. ಬೇಧಿ, ರಕ್ತಬೇಧಿ ಹಾಗೂ ಕರುಳಿನ ವಿಕಾರಗಳಲ್ಲಿ, ಕರುಳಿನಲ್ಲಾಗುವ ವಿಪರೀತ ಒತ್ತಡವನ್ನು ಕಡಿಮೆಯಾಗಿಸಿ ಅಗತ್ಯ ನೀರಿನಾಂಶ ಹಾಗೂ ಖನೀಜಾಂಶವನ್ನು ನೀಡುತ್ತದೆ.
ಮಜ್ಜಿಗೆಯು ಜಠರದ ಒಳಪದರವನ್ನು ಲೇಪಿಸಿ, ಜಠರದ ತೀಕ್ಷ್ಣ ಸ್ರಾವವನ್ನು ನಿಯಂತ್ರಿಸುತ್ತದೆ, ಹಾಗೂ ಜಠರದಲ್ಲಿನ ತೀಷ್ಣ ಆಹಾರದಕಣಗಳನ್ನು ಬಹುಬೇಗ ತೊರೆದುಹಾಕುತ್ತದೆ. ಹುಳಿತೇಗು, ಹೊಟ್ಟೆಹುರಿ, ಎದೆಹುರಿಯನ್ನು ನಿವಾರಿಸುತ್ತದೆ.
ಕ್ಷಾರ ಹಾಗೂ ಕಷಾಯ ಗುಣಗಳಿಂದಾಗಿ ಮೂಲವ್ಯಾಧಿಯಲ್ಲಿನ ಗುದಾಂಕುರವನ್ನು ನಿವಾರಿಸುತ್ತದೆ.
ಲಿವರ್ ನಲ್ಲಿನ ವಿಷಗುಣಗಳನ್ನು ತೆಗೆದುಹಾಕುತ್ತದೆ. ಕರುಳನ್ನು ಶುದ್ದಗೊಳಿಸಿ ಮಲಬದ್ದತೆಯನ್ನು ನಿವಾರಿಸುತ್ತದೆ.
ಕರುಳಿನಲ್ಲಿ ಹಲವು ರಸಾಯನಿಕಕ್ರಿಯೆಗಳಿಗೆ ಪ್ರಾಕೃತವಾಗಿ ಅಗತ್ಯವಿರುವ ಜೈವಿಕ ಬ್ಯಾಕ್ಟೀರಿಯಾವನ್ನು ವೃದ್ದಿಸಲು ಸಹಕಾರಿಯಾಗುತ್ತದೆ.
ಮಜ್ಜಿಗೆಯ ಸೇವನೆಯಿಂದ ತೆರೆದಗಾಯ, ಬಾಯಿಹುಣ್ಣು, ರಕ್ತಸ್ರಾವದಂತಹ ರೋಗಗಳು ಬಹುಬೇಗ ನಿವಾರಣೆಯಾಗುತ್ತದೆ.
ಅತಿಯಾದ ಬೊಜ್ಜುತನ, ಕೊಲೆಸ್ಟ್ರಾಲ್ ನಿಂದಾಗುವ ವಿಕಾರಗಳಿಗೆ ಮಜ್ಜಿಗೆಯು ಪ್ರಮುಖ ಆಹಾರ.
ಹಲವು ಔಷಧಿಗಳಿಂದ ಸಂಸ್ಕಾರಿತವಾದ ಮಜ್ಜಿಗೆಯನ್ನು ಸೋರಿಯಾಸಿಸ್ ನಂತಹ ಚರ್ಮರೋಗಗಳಲ್ಲಿ ತಕ್ರಧಾರ ಎಂಬ ಪಂಚಕರ್ಮ ಚಿಕಿತ್ಸೆಗೆ ಉಪಯೋಗಿಸಲಾಗುವುದು.

ಮಜ್ಜಿಗೆಯ ಹಲವು ಉಪಯೋಗಗಳು

ಮಜ್ಜಿಗೆಗೆ ಸೈಂದವ ಉಪ್ಪು ಮತ್ತು ಹಸಿಶುಂಠಿರಸವನ್ನು ಬೆರೆಸಿ ಸೇವಿಸುವುದರಿಂದ ವಾಂತಿ ಕಡಿಮೆಯಾಗುತ್ತದೆ.
ಅರ್ಧ ಚಮಚ ಶುಂಠಿರಸ ಹಾಗು ಜೀರಿಗೆಪುಡಿಯನ್ನು ಮಜ್ಜಿಗೆಯೊಂದಿಗೆ ಸೇವಿಸಿದರೆ ಅಸಿಡಿಟಿ, ಮಲಬದ್ದತೆ ಹಾಗೂ ಮೂಲವ್ಯಾಧಿ ನಿವಾರಣೆಯಾಗುತ್ತದೆ.
1 ಚಿಟಿಕೆ ಉಪ್ಪು, 1 ಚಮಚ ಸಕ್ಕರೆಯೊಂದಿಗೆ 1 ಗ್ಲಾಸ್ ಮಜ್ಜಿಗೆಯು ಸಧ್ಯೋ ಶಕ್ತಿದಾಯಕವಾಗಿದ್ದು, ಅಗತ್ಯನೀರಿನಾಂಶವನ್ನು ನೀಡುತ್ತದೆ ಹಾಗೂ ಅತಿಸಾರವನ್ನು ನಿಯಂತ್ರಿಸುತ್ತದೆ.
ನಿತ್ಯ ಮಜ್ಜಿಗೆಯ ಸೇವನೆಯಿಂದಾಗಿ ಜಠರ ರೋಗವನ್ನು ನಿಯಂತ್ರಿಸುತ್ತದೆ. ಜೀರ್ಣಶಕ್ತಿಯನ್ನು ಬಲಗೊಳಿಸುತ್ತದೆ ಹಾಗು ಜಠರದಲ್ಲಾಗುವ ಸೋಂಕನ್ನು ತಡೆಯುತ್ತದೆ.
ಅಷ್ಟೇ ಅಲ್ಲದೆ, ನಿತ್ಯ ಮಜ್ಜಿಗೆಯ ಸೇವನೆಯು ತ್ವಚೆಯ ಕಾಂತಿಯನ್ನು ಹಿಚ್ಚಿಸುತ್ತದೆ ಹಾಗು ಮುಪ್ಪುನ್ನು ತಡೆಯುತ್ತದೆ.

  • ಡಾ. ಮಹೇಶ್ ಶರ್ಮಾ. ಎಂ
    ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್ಸ್ ಟಿಟ್ಯೂಟ್ ಆಫ್ ಬಿ ಮತ್ತು ಆಸ್ಪತ್ರೆ. ಅಂಚೇಪಾಳ್ಯ, ಮೈಸೂರು ರಸ್ತೆ, ಬೆಂಗಳೂರು 9964022654

POPULAR  STORIES :

ನಿಮ್ಗೆ ಗೊತ್ತಾ..? ರೋಹಿತ್ ಶರ್ಮ ಮದ್ವೆಯಾಗಿದ್ದು ಯುವರಾಜ್ ತಂಗೀನಾ..?

ಸಚಿನ್ ಗಾಡ್.. ಕೊಹ್ಲಿ ಡೆವಿಲ್..!

ಅಮ್ಮ-ಅಕ್ಕನ ಪಾರುಪತ್ಯ..! ಕೇರಳದಲ್ಲಿ ಪೋ ಮೋನೆ ಚಾಂಡಿ..!

ವಯಸ್ಸು 68, ಉತ್ಸಾಹ 18, ಯುವಕರೇ ನಾಚುವಂತ ಸಾಧನೆ ಮಾಡಿದ 68ರ ತರುಣ.!

ಕರುನಾಡಿನಲ್ಲೂ ಇದೆ ಅನಂತನ ಸಂಪತ್ತು…!

ಬೀದಿಗೆ ಬಂದ ಸೋನುನಿಗಂ..!! ಮುಂಬೈನ ರಸ್ತೆಗಳಲ್ಲಿ ಸೋನು ನಿಗಮ್ ಹೀಗ್ಯಾಕೆ ಬಂದ್ರು ಗೊತ್ತಾ..?

ಚುಟುಕು ಕ್ರಿಕೆಟ್ ಎಂಬ ವಿವಾದಗಳ ಆಟ..! ಐಪಿಎಲ್ ನಲ್ಲಿ `ಮ್ಯಾಚ್ ಫಿಕ್ಸಿಂಗ್’ ಹೊಸತಲ್ಲ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...