ಸ್ತನ ಕ್ಯಾನ್ಸರ್ ಇತ್ತೀಚೆಗೆ ತುಂಬಾ ಕೇಳಿ ಬರ್ತಿರೋ ಕಾಯಿಲೆ. ಇದ್ರ ಬಗ್ಗೆ ಜಾಗೃತಿ ಮೂಡಿಸೋ ದೊಡ್ಡ ಅಭಿಯಾನವೇ ನಡೆಯುತ್ತಿದೆ. ಮಹಿಳೆಯರು ಈ ಬಗ್ಗೆ ತಿಳಿದುಕೊಳ್ಳಲೇ ಬೇಕು. ಮುಜುಗರ ಇಲ್ಲದೆ ವೈದ್ಯರನ್ನು ಸಂಪರ್ಕಿಸಬೇಕು. ಮುಖ್ಯವಾಗಿ ಸ್ತನ ಕ್ಯಾನ್ಸರ್ ಬಗ್ಗೆ ತಿಳಿಯಲೇ ಬೇಕು. ಸ್ತನ ಕ್ಯಾನ್ಸರ್ ನ ಈ 7 ಲಕ್ಷಣಗಳನ್ನು ನೆನಪಿಟ್ಟುಕೊಳ್ಳಿ.
1)ಸ್ತನಗಳಲ್ಲಿ ಉಬ್ಬು ಅಥವಾ ಗಂಟು ತರಹ ಕಾಣಿಸಿಕೊಳ್ಳುವುದು
2. ಸ್ತನದ ಮೇಲಿನ ಚರ್ಮದದಲ್ಲಿ ಬದಲಾವಣೆ
3. ಸ್ತನದ ಆಕಾರ ಮತ್ತು ಗಾತ್ರದಲ್ಲಿ ಬದಲಾವಣೆ
4.ಸ್ತನದ ಒಂದೊಂದು ಕಡೆ ದಪ್ಪವಾದಂತೆ ಭಾಸವಾಗುವುದು
5. ಸ್ತನದ ತೊಟ್ಟುಗಳ ಆಕಾರದಲ್ಲಿ ಬದಲಾವಣೆ
6. ಸ್ತನದ ತೊಟ್ಟುಗಳ ಮೇಲೆ ಗೀರು ಕಂಡುಬರುವುದು
7. ಸ್ತನಗಳಲ್ಲಿ ಸಣ್ಣ ನೋವು






