ನೀವು ಆಕರ್ಷಕವಾಗಿ ಕಾಣಲು ಹೀಗೆ ಮಾಡಿ…

0
416

 

ಆಕರ್ಷಕವಾಗಿ ಕಾಣಬೇಕು ಅನ್ನೋದು ಸಾಮಾನ್ಯವಾಗಿ ಎಲ್ಲರಲ್ಲೂ ಇರುತ್ತದೆ. ಆಕರ್ಷಕವಾಗಿ ಕಾಣಲು ಕೆಲವೊಂದು ಟಿಪ್ಸ್ ಗಳು ಇಲ್ಲಿವೆ. ನಿಮಗೆ ಆಕರ್ಷಕವಾಗಿ ಕಾಣುವ ಆಸೆ ಇದ್ದರೆ ಇವುಗಳನ್ನು ಫಾಲೋ ಮಾಡಿ.

1) ಸ್ವಚ್ಛವಾದ ಬಿಸಿ ನೀರಲ್ಲಿ ದಿನದಲ್ಲಿ 3-4 ಸಲ ಮುಖವನ್ನು ತೊಳೆಯಿರಿ.‌ ಇದ್ರಿಂದ ನಿಮ್ಮ ಮುಖದ ಧೂಳು, ಜಿಡ್ಡಿನಾಂಶ ಹೋಗುತ್ತದೆ.

2) ಒಂದು ಬಾರಿ ಬಳಸಿದ ಟವಲನ್ನೇ ಪದೇ ಪದೆ ಬಳಸಬೇಡಿ. ಮುಖ ತೊಳೆದ ನಂತರ ಹತ್ತಿಯಿಂದ ಮುಖ ಒರೆಸಿಕೊಳ್ಳಿ.

3)ಬೇಗ ಮಲಗಿ ಬೇಗ ಏಳುವುದನ್ನು ರೂಢಿಸಿಕೊಳ್ಳಿ. ಇದು ಕಣ್ಣಿನ ಆರೋಗ್ಯಕ್ಕೆ ಒಳ್ಳೆಯದು.

4) ಮಲಗುವಾಗ‌ ಹಾಲಿಗೆ ಗೋಡಂಬಿ , ದ್ರಾಕ್ಷಿ ಹಾಕಿಕೊಂಡು ಸೇವಿಸಿ. ಇದು‌ ಮುಖದ ಕಾಂತಿ ಹೆಚ್ಚಿಸುವುದು.

5)ಅರಿಶಿಣ ಮತ್ತು ಪಪ್ಪಾಯಿ ಹಣ್ಣನ್ನು ಚೆನ್ನಾಗಿ ಕಿವುಚಿ ಮುಖಕ್ಕೆ ಹಚ್ಚಿಕೊಂಡು ಕನಿಷ್ಠ ಅರ್ಧಗಂಟೆಯ ಬಳಿಕ ಮುಖ ತೊಳೆದುಕೊಳ್ಳಿ.

ಹೀಗೆ ಸಣ್ಣಪುಟ್ಟ ಟಿಪ್ಸ್ ಫಾಲೋಮಾಡಿ.