ಕಾರಿನ ಬಾನೆಟ್, ಮಿರರ್ ಡ್ಯಾಮೇಜ್: ರಾಜಧಾನಿ ಬೆಂಗಳೂರಿನಲ್ಲಿ ನಿಲ್ಲದ ರೋಡ್ ರೇಜ್ ಕೇಸ್!
ಬೆಂಗಳೂರು:- ವೈಟ್ ಪಿಲ್ಡ್ನ ಐಟಿಪಿಎಲ್ ಮುಖ್ಯರಸ್ತೆಯಲ್ಲಿ ಕಾರು ಟಚ್ ಆಯ್ತು ಅಂತ ಇಬ್ಬರು ಚಾಲಕರ ಮಧ್ಯೆ ಗಲಾಟೆ ನಡೆದಿರುವ ಘಟನೆ ಜರುಗಿದೆ. ಈ ಘಟನೆ ಸೆಪ್ಟಂಬರ್ 5 ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ಧನುಶ್ ಎಂಬುವರು ಶಾಂತಿನಿಕೇತನ ಅಥವಾ ಬಿಗ್ ಬಜಾರ್ ಸ್ಟಾಪ್ ಬಳಿ ಕಾರಿನಲ್ಲಿ ಹೋಗುತ್ತಿದ್ದರು. ಹೆಚ್ಚಿನ ಟ್ರಾಫಿಕ್ ನಡುವೆಯೇ ಧನುಶ್ ಅವರು ಎದುರಿಗಿದ್ದ ಕಾರನ್ನು ಓವರ್ ಟೆಕ್ ಮಾಡಲು ಮುಂದಾಗಿದ್ದಾರೆ. ಆದರೆ, ಕಾರು ಚಾಲಕ ಇವರಿಗೆ ದಾರಿ ಬಿಡಲಿಲ್ಲ. ಕೊನೆಗೆ ಧನುಶ್ ಕಾರನ್ನು ಅನ್ನು ಓವರ್ ಟೆಕ್ ಮಾಡಿ ಮುಂದೆ ಹೋಗಿದ್ದಾರೆ. ಸ್ವಲ್ಪ ಹೊತ್ತಿನ ಬಳಿಕ ಧನುಶ್ ಅವರನ್ನೇ ಹಿಂಬಾಲಿಸಿಕೊಂಡು ಬಂದ ಕಾರು ಚಾಲಕ ಓವರ್ ಟೆಕ್ ಮಾಡಿ ಧನುಶ್ ಅವರನ್ನು ಅಡ್ಡ ಹಾಕಿದ್ದಾನೆ
ಕಾರಿನಿಂದ ಇಳಿದು ಧನುಶ್ ಅವರ ಬಳಿಗೆ ಬಂದು, ನಿನ್ನ ಕಾರು ನನ್ನ ಕಾರಿಗೆ ಟಚ್ ಆಗಿದೆ ಎಂದು ಜಗಳ ತೆಗೆದಿದ್ದಾನೆ. ಆಗ ಧನುಶ್ ಪೊಲೀಸ್ ಠಾಣೆಗೆ ಹೋಗೋಣ ನಡಿ ಎಂದಿದ್ದಾರೆ. ಧನುಶ್ ಅವರ ಮಾತು ಆಲಿಸದ ಕಾರು ಚಾಲಕ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೇ ಕಾರಿನಿಂದ ಇಳಿಯುವಂತೆ ಒತ್ತಾಯಿಸಿದ್ದಾನೆ. ಬಳಿಕ ಧನುಶ್ ಅವರ ಕಾರಿನ ಕಿಟಕಿಯ ಮೂಲಕ ಒಳಗೆ ಕೈ ಹಾಕಿ ಬಾಗಿಲು ತೆರೆಯಲು ಪ್ರಯತ್ನಿಸಿದ್ದಾನೆ. ಆಗ ಧನುಶ್ ಪೆಪ್ಪರ್ ಸ್ಪ್ರೇನಿಂದ ಕಾರು ಚಾಲಕನಿಗೆ ಸ್ಪ್ರೇ ಮಾಡಿದ್ದಾರೆ
ಬಳಿಕ, ಕಾರು ಚಾಲಕ ತನ್ನ ಕಾರಿನಲ್ಲಿದ್ದ ಸ್ಕ್ರೂ ಡೈವ್ ತಂದು ಕಿಟಕಿಯ ಗ್ಲಾಸಗೆ 3-4 ಬಾರಿ ಹೊಡೆದಿದ್ದಾನೆ. ಬಳಿಕ, ಸ್ಕ್ರೂ ಡೈವ್ ಮೂಲಕ ಕಾರಿನ ಬಾನೆಟ್, ಮಿರರ್ ಡ್ಯಾಮೇಜ್ ಮಾಡಿದ್ದಾನೆ. ಕೊನೆಗೆ ಧನುಶ್ ಮನೆಗೆ ಹೋಗಿ ತಮ್ಮ ಕಾರನ್ನು ಚೆಕ್ ಮಾಡಿದಾಗ, ಕಾರಿನ ಮೇಲೆ ಯಾವುದೇ ಸ್ಕ್ರ್ಯಾಚ್ ಇರಲಿಲ್ಲ. ಕಾರು ಚಾಲಕ ಬೇಕಂತಲೇ ಈ ರೀತಿ ಮಾಡಿದ್ದಾನೆ ಎಂದು ಎಕ್ಸ್ನ ಸಿಟಿಜನ್ಸ್ ಮೂಮೆಂಟ್ಸ್, ಈಸ್ಟ್ ಬೆಂಗಳೂರು ಎಕ್ಸ್ ಖಾತೆಯಲ್ಲಿ ಬರೆಯಲಾಗಿದೆ. ಘಟನೆಯ ಎಲ್ಲ ದೃಶ್ಯಗಳು ಧನುಶ್ ಅವರ ಕಾರಿನ ಡ್ಯಾಶ್ ಕ್ಯಾಮೆರದಲ್ಲಿ ಸೆರೆಯಾಗಿದೆ.