ಕಾವೇರಿ ನದಿ ನೀರಿನ ವಿಷಯವಾಗಿ ಇಂದು ಸುಪ್ರೀಕೋರ್ಟ್‍ನಲ್ಲಿ ನಡೆದ ವಿಚಾರಣೆಯಲ್ಲಿ ಇನ್ನು ಎರಡು ದಿನಗಳ ಕಾಲ 6 ಸಾವಿರ ಕ್ಯೂಸೆಕ್ಸ್ ನೀರನ್ನು ಹರಿಸುಂತೆ ರಾಜ್ಯ ಸರ್ಕಾರಕ್ಕೆ ಎಚ್ಚರಿಕೆಯನ್ನು ನೀಡಿದೆ. ಉಭಯ ರಾಜ್ಯಗಳ ವಾದವನ್ನು ಮನಗಂಡ ಸುಪ್ರೀಕೋರ್ಟ್ ಇಂದು ಮತ್ತೆ ತಮಿಳುನಾಡು ಪರವಾಗಿ ಆದೇಶ ಹೊರಡಿಸಿದ್ದು ಕಾವೇರಿ ನದಿ ನೀರನ್ನು ಮುಂದಿನ ಎರಡು ದಿನಗಳ ಕಾಲ ನೀರು ಬಿಡಲೇ ಬೇಕು ಎಂದು ಆದೇಶ ನೀಡಿ ಸೆ.30ಕ್ಕೆ ವಿಚಾರಣೆ ಮುಂದುವರೆಸಿದೆ. ಆದರೆ ರಾಜ್ಯದ ಜಲಾಶಯಗಳಲ್ಲಿ ವಿಫುಲ ಪ್ರಮಾಣದಲ್ಲಿ ನೀರಿಲ್ಲದೇ ಇರೋದು ಒಂದು ಕಡೆಯಾದರೆ ಮತ್ತೊಂದು ಕಡೆ ಈ ಬಾರಿಯೂ ಸುಪ್ರೀಂ ಕೋರ್ಟ್‍ಗೆ ಮನವರಿಕೆ ಮಾಡಿಕೊಳ್ಳುವಲ್ಲಿ ಕರ್ನಾಟಕ ಪರ ವಕೀಲರಾದ ಪಾಲಿ ಎಸ್ ನಾರಿಮನ್ ಎಡುವುತ್ತಿದ್ದು ಮತ್ತೆ ಕರ್ನಾಟಕದ ಜನತೆಗೆ ಸುಪ್ರೀಂ ಅದೇಶ ನುಂಗಲಾರದ ತುತ್ತಾಗಿದೆ. ಇಂದು ಹೊರಡಿಸಿದ ಸುಪ್ರೀಂ ಆದೇಶವನ್ನು ರಾಜ್ಯ ಸರ್ಕಾರ ಪಾಲಿಸುತ್ತಾ ಅನ್ನೋದೆ ಈಗ ಜನರ ಕುತೂಹಲವಾಗಿದೆ. ಇನ್ನು ಕಾವೇರಿ ನದಿ ನೀರು ತಮಿಳುನಾಡಿಗೆ ಬಿಡಬೇಕೆಂದು ಆದೇಶ ನೀಡಿರುವ ಸುಪ್ರೀಂ ಆದೇಶಕ್ಕೆ, ಕರ್ನಾಟಕ ಪರ ವಕೀಲ ನಾರಿಮನ್ ಅವರು ಮತ್ತೆ ವಾದ ಮಂಡಿಸಿ ಕರ್ನಾಟಕದ ಮೇಲೆ ಹೆಚ್ಚು ಹೊರೆಯನ್ನು ನೀಡಬೇಡಿ ಜಲಾಶಯಗಳನ್ನು ಸಾಕಷ್ಟು ಪ್ರಮಾಣದಲ್ಲಿ ನೀರಿಲ್ಲ ಎಂದು ಹೇಳಿದ್ದರೂ ಕೂಡ ಕೋರ್ಟ್ ಆದೇಶ ಪಾಲಿಸಲೇ ಬೇಕು ಎಂದು ಸುಪೀಂ ಆದೇಶ ನೀಡಿ ಮುಂದಿನ ವಿಚಾರಣೆ ಸೆ. 30ಕ್ಕೆ ತಳ್ಳಿ ಹಾಕಿದೆ.
Like us on Facebook The New India Times
POPULAR STORIES :
ಜಿಯೋ ಕಾಲ್‍ಡ್ರಾಪ್ ಸಮಸ್ಯೆ: ಏರ್‍ಟೆಲ್, ಐಡಿಯಾ, ವೊಡಾಫೋನ್ಗೆ 9900ಕೋಟಿ ದಂಡ..?
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!