ಕೇರಳದಲ್ಲಿ ನಡೆಯುತ್ತಿರುವ ಬಹು ನಿರೀಕ್ಷಿತ ಸೆಲೆಬ್ರೆಟಿ ಬ್ಯಾಡ್ಮಿಂಟನ್ ಲೀಗ್ ಟೂರ್ನಿ (ಸಿಬಿಎಲ್)ಯಲ್ಲಿ ಕರ್ನಾಟಕದ ಮಹಿಳಾ ಮತ್ತು ಪುರುಷರ ತಂಡ ಶುಭಾರಂಭ ಮಾಡಿದೆ. ಕೇರಳದ ರೀಜಿನಲ್ ಸ್ಪೋರ್ಟ್ ಸೆಂಟರ್‍ನಲ್ಲಿ ಸೆ. 24ರಿಂದ ಆರಂಭವಾದ ಈ ಪಂದ್ಯದಲ್ಲಿ ಕರ್ನಾಟಕ ಆಟಗಾರರು ಉತ್ತಮ ಪ್ರದರ್ಶನ ನೀಡಿದ್ದಾರೆ.
ಇಂದು ನಡೆದ ಮೊದಲ ಸುತ್ತಿನ ಪುರುಷರ ಡಬಲ್ಸ್ ಪಂದ್ಯಾವಳಿಯಲ್ಲಿ ಕರ್ನಾಟಕ ಆಲ್ಪ್ಸ್ ಹಾಗೂ ಚೆನ್ನೈ ರಾಕರ್ಸ್ ನಡುವಣ ನೇರ ಹಣಾಹಣಿಯಲ್ಲಿ ಪ್ರಬಲ ಪೈಪೋಟಿ ನೀಡಿದ್ದ ಕರ್ನಾಟಕ ಆಲ್ಪ್ಸ್ ತಂಡ ಜಯಭೇರಿಯಾಗಿದೆ. ಅದೇ ರೀತಿ ಮೊದಲ ಸುತ್ತಿನ ಮಹಿಳಾ ಡಬಲ್ಸ್ ನಲ್ಲಿ ಕರ್ನಾಟಕ ಆಲ್ಪ್ಸ್ ತಂಡ ಎದುರಾಳಿ ಚೆನ್ನೈ ಟೀಂನನ್ನು ಪರಾಭವಗೊಳಿಸುವಲ್ಲಿ ಸಫಲವಾಗಿದೆ. ಇನ್ನು ಮಿಶ್ರ ಡಬಲ್ಸ್ ಬ್ಯಾಡ್ಮಿಂಟನ್ ಪಂದ್ಯದಲ್ಲಿ ಕರ್ನಾಟಕದ ಪುರುಷರ ತಂಡ ಮತ್ತೆ ಚೆನ್ನೈ ತಂಡವನ್ನು ಸೋಲಿಸಿದೆ. ಇಂದಿನ ಪಂದ್ಯದಲ್ಲಿ ಮಹಿಳಾ ಡಬಲ್ಸ್ ವಿಭಾಗದಲ್ಲಿ ಅಮೋಘ ಆಟ ಪ್ರದರ್ಶನ ನೀಡಿದ್ದ ದಿಶಾ ಪೂವಯ್ಯ ಅವರಿಗೆ ದಿ ಬೆಸ್ಟ್ ವುಮನ್ ಪ್ಲೇಯರ್ ಪ್ರಶಸ್ತಿ ನೀಡಲಾಯಿತು.
ಕರ್ನಾಟಕ ಆಲ್ಫ್ಸ್, ಚೆನ್ನೈರಾಕರ್ಸ್ ಟಾಲಿವುಡ್ ತಂಡರ್ಸ್ ಹಾಗೂ ಕೇರಳ ರಾಯಲ್ಸ್ ಒಟ್ಟು ನಾಲ್ಕು ಸಲೆಬ್ರೆಟಿ ತಂಡಗಳು ಈ ಸಿಬಿಎಲ್‍ನಲ್ಲಿ ಪಾಲ್ಗೊಂಡಿದ್ದು, ಈ ನಾಲ್ಕು ತಂಡಗಳಲ್ಲಿ ಅತೀ ಹೆಚ್ಚು ಅಂಕಗಳಿಸಿದ ಎರಡು ತಂಡಗಳು ನವೆಂಬರ್ 12ರಂದು ಮಲೇಶಿಯಾದಲ್ಲಿ ನಡೆಯಲಿರುವ ಫೈನಲ್ ಹಣಾಹಣಿಯಲ್ಲಿ ಸೆಣಸಾಡಲಿದೆ. ಇದೀಗ ಕರ್ನಾಟಕ ಮಹಿಳಾ ಮತ್ತು ಪುರುಷರ ಸೆಲೆಬ್ರೆಟಿ ತಂಡಗಳು ಉತ್ತಮ ಆಟ ಪ್ರದರ್ಶನ ನೀಡುತ್ತಿದ್ದು ಫೈನಲ್ ಪ್ರವೇಶಿಸುವ ಉತಮ ತಂಡ ಎಂದೆನಿಸಿಕೊಂಡಿದೆ.
Like us on Facebook The New India Times
POPULAR STORIES :
“ಅಣ್ಣಾ ಕಿಸಾನ್ ಬಾಬುರಾವ್ ಹಜಾರೆ” ಈ ಬಾರಿಯ ಕಪಿಲ್ ಶರ್ಮಾ ಶೋನಲ್ಲಿ..!
ಇಂಡಿಯನ್ ಕ್ರಿಕೆಟ್ ಟೀಮ್ ಸ್ಟಾರ್ ಪ್ಲೇಯರ್ಸ್‍ನ ಹಿಂದಿನ ಅರಮನೆಗಳು ಹೇಗಿದ್ದವು ಗೊತ್ತಾ…?
ಪೆಪ್ಸಿ ಆ್ಯಡ್‍ನಲ್ಲಿ ವಿರಾಟ್‍ನ ದ್ವಂದ್ವ ನಿಲುವು..!
ಜಿಯೋ ಎಫೆಕ್ಟ್: ಬಿಎಸ್‍ಎನ್‍ಎಲ್ ಗ್ರಾಹಕರಿಗೆ ಉಚಿತ ಅನ್‍ಲಿಮಿಟೆಡ್ ವಾಯ್ಸ್ ಕಾಲ್..!
ಆನ್‍ಲೈನ್ ಶಾಪಿಂಗ್ ಮಾಡೋಕು ಮುನ್ನ ಈ ಸ್ಟೋರಿ ಓದಿ..!
ನಿಮಗೆ ಗೊತ್ತಾ ವಾಟ್ಸಾಪ್‍ಗಿಂತ ‘ಅಲ್ಲೋ ಆಪ್’ ಸಖತ್ ಡಿಫರೆಂಟ್ ಆಗಿದೆ..!