ನರಹಂತಕ ವೀರಪ್ಪನ್ ಸತ್ತು 14ವರ್ಷ ಕಳೆದರೂ ಚುನಾವಣಾ ಸಂದರ್ಭದಲ್ಲಿ ಆತನ ಹೆಸರು ಮುನ್ನಲೆಗೆ ಬರುತ್ತಿದೆ. ಈ ಬಾರಿಯ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತನ್ನ ಪುತ್ರನನ್ನು ಗೆಲ್ಲಿಸಲು ಹೆಸರನ್ನು ಎಳೆದು ತಂದಿದ್ದಾರೆ…!
ಹೀಗೆ ವೀರಪ್ಪನ್ ಹೆಸರಲ್ಲಿ ರಾಜಕೀಯ ನಡೆಯುತ್ತಿರುವುದು ಚಾಮರಾಜನಗರದ ಹನೂರಿನಲ್ಲಿ. ಬಿಜೆಪಿ ಅಭ್ಯರ್ಥಿ ಪ್ರೀತಂ ಅವರ ಪರ ಮಾಜಿ ಶಾಸಕಿ ಪರಿಮಳ ನಾಗಪ್ಪ ವೀರಪ್ಪನ್ ದಾಳ ಉರುಳಿಸಿದ್ದಾರೆ.
ವೀರಪ್ಪನ್ ಇದ್ದಾಗ ಹೆದರಿಸಿ ಕಾಂಗ್ರೆಸ್ ಗೆ ವೋಟ್ ಹಾಕಿಸುತ್ತಿದ್ದ. ಈಗ ಅವನಿಲ್ಲ , ನನ್ನ ಮಗನಿಗೆ ಓಟ್ ಮಾಡಿ ಗೆಲ್ಲಿಸಿ ಎಂದು ಮನವಿ ಮಾಡ್ತಿದ್ದಾರೆ…!