ಚಂಬಲ್ ನಟ ನೀನಾಸಂ ಸತೀಶ್ ಅಭಿನಯದ ಬಹುನಿರೀಕ್ಷಿತ ಸಿನಿಮಾ. ಈ ಚಿತ್ರದ ಟ್ರೈಲರ್ ರಿಲೀಸ್ ಆದ ಕೂಡಲೇ ಹೊಸದೊಂದು ಕ್ರೇಜ್ ಸೃಷ್ಟಿಸಿತು. ಚಿತ್ರದಲ್ಲಿ ನೀನಾಸಂ ಸತೀಶ್ ಮುಖ್ಯ ಪಾತ್ರದಲಿದ್ದು, ಕರ್ತವ್ಯ ನಿಷ್ಠ ಅಧಿಕಾರಿಯಾಗಿದ್ದ ಡಿಕೆ ರವಿ ಅವರ ಜೀವನ ಆಧರಿಸಿದೆ ಎಂಬ ಮಾತುಗಳು ಕೇಳಿ ಬರ್ತಿವೆ.ಆದರೆ ಚಂಬಲ್ ಚಿತ್ರದ ಮೂಲಕ ಸ್ಯಾಂಡಲ್ ವುಡ್ ಗೆ ಪುನರಾಗಮನವಾಗುತ್ತಿರುವ ನಿರ್ದೇಶಕ ಜಾಕೋಬ್ ವರ್ಗೀಸ್ ಅವರು ಹೇಳೋದೇ ಬೇರೆ. ಚಂಬಲ್ ಒಂದು ಥ್ರಿಲರ್ ಕಥೆಯಾಗಿದ್ದು, ಇದು ಕೇವಲ ಕಾಲ್ಪನಿಕ ಕಥೆ ಅಷ್ಟೇ. ಚಂಬಲ್ ಚಿತ್ರದಲ್ಲಿ ಹಲವು ಐಎಎಸ್ ಅಧಿಕಾರಿಗಳು ಜೀವನದಿಂದ ಸ್ಫೂರ್ತಿ ಪಡೆದುಕೊಂಡಿದೇವೆ. ಹೊರತುಪಡಿಸಿ ಯಾವುದೇ ವ್ಯಕ್ತಿಯ ಜೀವನ ಚರಿತ್ರೆಯಲ್ಲ.
ಈ ಚಿತ್ರದಿಂದ ಯಾರನ್ನು ನೋಯಿಸುವ ಅಥವಾ ಅವಮಾನಿಸುವ ಉದ್ದೇಶ ಚಿತ್ರತಂಡಕ್ಕಿಲ್ಲ. ನಮ್ಮ ಸುತ್ತ ನಡೆಯುವ ಘಟನೆಗಳ ಮೂಲಕ ನಾವು ಸ್ಪೂರ್ತಿ ಪಡೆದುಕೊಂಡಿದ್ದೇವೆ ಎಂದು ನಿರ್ದೇಶಕ ಜಾಕೋಬ್ ವರ್ಗೀಸ್ ಸ್ಪಷ್ಟಪಡಿಸಿದರು.
ಚಂಬಲ್ ಚಿತ್ರ ಡಿಕೆ ರವಿ ಜೀವನ ಕಥೆ ಅಲ್ಲ. ಹೀಗೆ ಹೇಳಿದ್ದು ಯಾರು ಗೊತ್ತಾ..?
Date: