ಕನ್ನಡದ ರ್ಯಾಪರ್ ಬಿಗ್ ಬಾಸ್ ವಿನ್ನರ್….

admin
By admin
1 Min Read

ಕನ್ನಡದ ರ್ಯಾಪರ್ ಚಂದನ್ ಶೆಟ್ಟಿ ಕನ್ನಡ ಬಿಗ್ ಬಾಸ್ ಸೀಸನ್ 5 ರ ವಿನ್ನರ್ ಆಗಿ ಹೊರ ಹೊಮ್ಮಿದ್ದಾರೆ.


ರ್ಯಾಪ್ ಸಾಂಗ್ ಗಳ‌ ಮೂಲಕ ಯೂತ್ ಐಕಾನ್ ಆಗಿ ಹೊರ ಹೊಮ್ಮಿದ್ದ ಚಂದನ್ ಶೆಟ್ಟಿ ಅರ್ಹವಾಗಿಯೇ ಬಿಗ್ ಬಾಸ್ ಕಿರೀಟ ಮುಡಿಗೇರಿಸಿಕೊಂಡಿದ್ದಾರೆ.‌


ಬಿಗ್ ಬಾಸ್ ನ ಮೊದಲ ದಿನದಿಂದಲೂ ಮನರಂಜನೆ ನೀಡುತ್ತಾ ಬಂದಿದ್ದ ಚಂದನ್ ಕನ್ನಡಿಗರ ಮನಗೆಲ್ಲುವಲ್ಲಿ‌ ಯಶಸ್ವಿಯಾಗಿದ್ದಾರೆ.‌
ಸೇಲ್ಸ್ ಮನ್ ದಿವಾಕರ್ ರನ್ನರ್ ಅಪ್ ಆಗಿದ್ದು, ಕಾಮನ್ ಮ್ಯಾನ್ ಆಗಿ ಬಿಗ್ ಬಾಸ್ ಮನೆ ಪ್ರವೇಶಿಸಿ ಸೆಲಬ್ರಿಟಿ ಪಟ್ಟಕ್ಕೇರಿದ್ದಾರೆ.


ಬಿಗ್ ಬಾಸ್ ಮನೆಗೆ ಹೋದಮೇಲೆ ಚಂದನ್ ಮತ್ತು‌ ದಿವಾಕರ್ ಪರಸ್ಪರ ಪರಿಚಯವಾಗಿದ್ದು. ಬಳಿಕ ಇಬ್ಬರು ಆತ್ಮೀಯ ಸ್ನೇಹಿತರಾದ್ರು.
ಒಂದು ದಿನ ಚಂದನ್ ದಿವಾಕರ್ ಜೊತೆ ಮಾತಾಡ್ತ ‘ನೀನೇ ಗೆಲ್ಲಬೇಕು ಮಗ’ ಅಂದ್ರಿದ್ರು. ದಿವಾಕರ್ ಚಂದನ್ ಅವರ ಗೆಲುವನ್ನು ಎದುರು ನೋಡ್ತಿದ್ರು. ಅಂತಿಮವಾಗಿ ಗೆಳೆಯರೇ ವಿನ್ನರ್, ರನ್ನರ್ ಅಪ್ ಆಗಿರೋದು ಖುಷಿಯ ವಿಚಾರ. ಕನ್ನಡಿಗರು ಇಬ್ಬರ ಗುಣವನ್ನು ಮೆಚ್ಚಿ ಯಶಸ್ಸು ತಂದುಕೊಟ್ಟಿದ್ದಾರೆ.

Share This Article