ಇಂದು ನಿಮ್ಮ ಮನೆಯಲ್ಲಿ ಗೊಂಬೆ…!

admin
By admin
1 Min Read

ಗೊಂಬೆ ಅಂದ್ರೆ ಯಾರು? ಯಾರು ಅಂತ ಹೇಳ್ಬೇಕ? ಅದೇ ರೀ ಬಿಗ್ ಬಾಸ್ ಖ್ಯಾತಿಯ ಚೆಲುವೆ ನಿವೇದಿತಾ ಗೌಡ. ಇವರು ಇವತ್ತು ನಿಮ್ ಮನೆಗೆ ಬರ್ತಿದ್ದಾರೆ… ಇವರ ಜೊತೆಗೆ ಚಂದನ್ ಶೆಟ್ಟಿ ಸಹ ಬರಲಿದ್ದಾರೆ..! ಸ್ವಾಗತಿಸೋಕೆ ನೀವು ರೆಡಿಯಾಗಿ…

ಯಸ್ , ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಒಟ್ಟಾಗಿ ಇಂದು ಕಲರ್ಸ್ ಕನ್ನಡ ಮೂಲಕ ನಿಮ್ಮ ಮನೆ ಪ್ರವೇಶಿಲಿದ್ದಾರೆ.
ರ್ಯಾಪರ್ ಚಂದನ್ ಬಿಗ್ ಬಾಸ್ ಮನೆಯಲ್ಲಿ ನಿವೇದಿತಾ ಅವರ ಬಗ್ಗೆ ಕಟ್ಟಿ ಹಾಡಿದ್ದ ಹಾಡು ಗೊಂಬೆ ಗೊಂಬೆ ‌..ಸಖತ್ ಫೇಮಸ್ ಆಗಿದೆ. ಈ ಹಾಡಿಗೀಗ ಚಂದು ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ. ರ್ಯಾಪರ್ ಚಂದು ಗೊಂಬೆ ಮೂಲಕ ರೊಮ್ಯಾಂಟಿಕ್ ಹಾಡುಗಾರ ಆಗಿದ್ದಾರೆ..!
ಈ ಹಾಡು ಇಂದು ಅನುಬಂಧ ಅವಾರ್ಡ್ ಕಾರ್ಯಕ್ರಮದ ವೇದಿಕೆಯಲ್ಲಿ ರಿಲೀಸ್ ಆಗಲಿದ್ದು, ಚಂದನ್ ಶೆಟ್ಟಿ ಮತ್ತು ನಿವೇದಿತಾ ಹೆಜ್ಜೆ ಹಾಕುತ್ತಾರೆ.

ಇಂದು ಹಾಡಿನ ವೀಡಿಯೋ ಸಾಂಗ್ ಕೂಡ ರೆಡಿ ಆಗುತ್ತಿದ್ದು, ಅದೂ ಸಹ ಶೀಘ್ರದಲ್ಲೇ ರಿಲೀಸ್ ಆಗಲಿದೆ. ಈ ವೀಡಿಯೋ ಸಾಂಗ್ ಮೂಲಕ ಚಂದು ಮತ್ತು ನಿವಿ ಮೊದಲ ಸಲ ರೀಲ್ ನಲ್ಲಿ ಕಾಣಿಸಲಿದ್ದಾರೆ. ಅದಕ್ಕೂ ಮುನ್ನ ಇಂದು ಕಲರ್ಸ್ ವೇದಿಕೆಯಲ್ಲಿ ಇವರನ್ನು ಕಣ್ತುಂಬಿಕೊಳ್ಳಿ.

Share This Article