ಪಾಪಿಗಳ ದುಡ್ಡಲ್ಲೇ ಸರ್ಕಾರ ನಡೆಸ್ತಿದ್ದಾರಾ ಈ ಸಿಎಂ ಸಾಹೇಬ್ರು… ಹೌದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಉದ್ಧಟತನದ ಮಾತುಗಳನ್ನ ಕೇಳ್ತಿದ್ರೆ ಈ ಪ್ರಶ್ನೆ ಮೂಡೋದು ಸಹಜ. ರಾಜ್ಯದಲ್ಲಿ ಪಾಪಿಗಳ ಸಂಖ್ಯೆ ಹೆಚ್ಚಾಗ್ತಿದೆ ಹಾಗಾಗೇ ದೇವಾಲಯಗಳ ಆದಾಯವೂ ದುಪ್ಪಟ್ಟಾಗ್ತಿದೆ ಅನ್ನೋ ಎಡವಟ್ಟು ಹೇಳಿಕೆ ಕೊಟ್ಟು ವಿವಾದಕ್ಕೆ ಗುರಿಯಾಗಿರೋದು ಹೈಟೆಕ್ ಸಿಎಂ ಅಂತಲೇ ಕರೆಸಿಕೊಳ್ಳೋ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು. ಜವಾಬ್ದಾರಿತಯುತ ಸ್ಥಾನದಲ್ಲಿರೋ ಬಾಬುಗಾರು ಅಸಂಬದ್ಧ ಹೇಳೀಕೆ ನೀಡೋ ಮೂಲಕ ಜನರ ದಾರ್ಮಿಕ ಭಾವನೆಗೆ ಧಕ್ಕೆ ತರುವಂತ ಕೆಲಸ ಮಾಡಿದ್ದಾರೆ.
ವಿಜಯವಾಡದಲ್ಲಿ ನಡೆದ ಜಿಲ್ಲಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದ ವೇಳೆ ಸಿಎಂ ಸಾಹೇಬ್ರು “ಆಂಧ್ರಪ್ರದೇಶದಲ್ಲಿ ಪ್ರಮುಖ ದೇವಾಲಯಗಳ ಆದಾಯದಲ್ಲಿ ಗಣನೀಯವಾಗಿ ಏರಿಕೆ ಕಂಡುಬರುತ್ತಿದೆ. ಇದು ಸಂತಸದ ವಿಚಾರ. ಆದರೆ ಇದಕ್ಕೆ ಕಾರಣಗಳನ್ನು ಹುಡುಕಿದಾಗ ಒಂದು ವಿಚಾರ ಸ್ಪಷ್ಟವಾಗುತ್ತದೆ. ಅದೇನೆಂದರೆ ಪಾಪಿಗಳ ಸಂಖ್ಯೆ ಹೆಚ್ಚಾಗ್ತಿರೋದು. ಹೀಗಾಗಿ ಅವರು ತಮ್ಮ ಪಾಪ ಕಳೆದುಕೊಳ್ಳಲು ದೇವರ ಮೊರೆ ಹೋಗ್ತಿದ್ದಾರೆ. ಹೀಗಾಗಿ ಅಂಥವ್ರಿಂದಲೇ ದೇವಾಲಯಕ್ಕೆ ಹೆಚ್ಚಿನ ಕಾಣಿಕೆ ಬರುತ್ತಿದ್ದು, ಆದಾಯ ಹೆಚ್ಚಾಗುತ್ತಿದೆ..!” ಅನ್ನೋ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಇಷ್ಟಕ್ಕೆ ಸಾಹೇಬ್ರ ಎಲುಬಿಲ್ಲದ ನಾಲಿಗೆ ಸುಮ್ಮನಾಗೋದಿಲ್ಲ ಇನ್ನು ಮುಂದುವರಿದು ಶಬರಿಮಲೈ ವ್ರತಧಾರಿಗಳ ಸಂಖ್ಯೆಯಲ್ಲಿ ಏರಿಕೆಯಾಗಿ ಮದ್ಯ ಮಾರಾಟದಲ್ಲಿ ಗಣನೀಯ ಕುಸಿತ ಕಂಡುಬಂದಿದ್ದು ರಾಜ್ಯದ ಆದಾಯಕ್ಕೆ ದೊಡ್ಡ ಹೊಡೆತವೇ ಬೀಳುತ್ತಿದೆ ಅಂತ ಹೇಳಿ ವಿವಾದ ಸೃಷ್ಟಿಸಿಕೊಂಡಿದ್ದಾರೆ. ಚಂದ್ರಬಾಬು ನಾಯ್ಡುರವರ ಈ ಹೇಳಿಕೆಗಳು ತೀವ್ರ ವಿವಾದದ ಸ್ವರೂಪ ಪಡೆದುಕೊಂಡಿದ್ದು ವಿರೋಧಿಗಳಿಗೆ ಇದು ಅಸ್ತ್ರವಾಗೋದ್ರಲ್ಲಿ ಸಂಶಯವೇ ಇಲ್ಲ.
- ಶ್ರೀ
POPULAR STORIES :
ಒಂದು ವರ್ಷ ಸೈಲೆಂಟಾಗಲಿದೆ ಚಿನ್ನಸ್ವಾಮಿ ಕ್ರಿಕೆಟ್ ಮೈದಾನ…!
ಸಿಸಿ ಟಿವಿಯಲ್ಲಿ ಸೆರೆಯಾದ ನಟ ರಿತೇಶ್ ದೇಶ್ ಮುಖ್ ಕಳ್ಳತನ..!
ವೆಸ್ಟ್ ಇಂಡೀಸ್ ಆಟಗಾರರಿಗೆ `ಸೆಕ್ಸ್’ ಅಂದ್ರೆ ಅಷ್ಟಿಷ್ಟಾನಾ..? ಕ್ರಿಸ್ ಗೇಲ್ ಬ್ಯಾಟು.. ಪತ್ರಕರ್ತೆಯ ಎರಡು ಕೈ..!!
ಪ್ರತಿ 10 ನಿಮಿಷಕ್ಕೆ ಶುರುವಾಗುತ್ತೆ ಹೊಸ ಜೀವನ..!! ಇದು ರೀಲ್ ಅಲ್ಲ ರಿಯಲ್ ಗಜನಿಯ ಕಥೆ..!!!