ಸಹೋದರನಿಗಾಗಿ ಸಿದ್ದವಾದ ಸಿನಿಮಾ ಚರಂತಿ..!!

Date:

ಸಹೋದರನಿಗಾಗಿ ಸಿದ್ದವಾದ ಸಿನಿಮಾ ಚರಂತಿ..!!

ಚರಂತಿ.. ಟೈಟಲ್ ಕೇಳೋಕೆ‌ ಎಷ್ಟು ಭಿನ್ನ ಅನ್ನಿಸುತ್ತೋ ಸಿನಿಮಾ‌ ಕೂಡ ಅದೇ ಫಿಲ್ ಕೊಡುತ್ತೆ ಅನ್ನೋದು ಚಿತ್ರತಂಡ ಮಾತು.. ಇದೇ ಡಿಸಂಬರ್ 6ಕ್ಕೆ ತೆರೆ ಮೇಲೆ ಬರ್ತಿರುವ ಚರಂತಿ ಸಿನಿಮಾ ಹುಟ್ಟಿಕೊಂಡ  ಹಿಂದಿದೆ ಒಂದು ಇಂಟ್ರೆಸ್ಟಿಂಗ್ ಸ್ಟೋರಿ.. ಹೌದು, ಇದು ತನ್ನ ಸಹೋದರನ ಸಿನಿಮಾ ಪ್ರೀತಿ, ಶ್ರದ್ದಗೆ, ಬೆನ್ನಾಗಿ ನಿಂತ ಸ್ಟೋರಿ

ಚರಂತಿ ಸಿನಿಮಾವನ್ನ ನಿರ್ದೇಶಿಸಿ ಮುಖ್ಯ ಪಾತ್ರವೊಂದರಲ್ಲಿ ನಟಿಸಿರೋದು ಮಹೇಶ್ ರಾವಲ್.. ಬಣ್ಣದ ಬದುಕಿಗೆ ತನ್ನನ್ನೆ ಅರ್ಪಿಸಿಕೊಂಡಿರುವ ಮಹೇಶ್ ಗಾಂದಿನಗರಕ್ಕೆ‌ ಕಾಲಿಟ್ಟು ಹಲವು ವರ್ಷಗಳೆ ಕಳೆದಿವೆ.. ಜೊತೆಗೆ ಕೆಲ ಸಿನಿಮಾಗಳಲ್ಲಿ ಅಭಿನಯಿಸಿದ ಅನುಭವಿದೆ.. ಇನ್ನು‌ ನಿರ್ದೇಶಕ ಆಗಬೇಕೆಂಬ ಮಹಾದಾಸೆಯನ್ನ ಹೊತ್ತು ನಿರ್ಮಾಪಕರಿಗಾಗಿ ಹುಡುಕುತ್ತಿದ್ದ ಮಹೇಶ್ ರಾವಲ್ ಗೆ ನಂತರದಲ್ಲಿ ಕೈ ಜೋಡಿಸಿದವರು ಇವರ ಸಹೋದರ ಡಾ.ಪರಶುರಾಮ್ ರಾವಲ್

ತನ್ನ ಸಹೋದರಲ್ಲಿದ್ದ ಸಿನಿಮಾ ಶಿಸ್ತಿನ ಬಗ್ಗೆ ಅರಿತು ತಾವೇ ಈ ಚಿತ್ರಕ್ಕೆ ಹಣ ಹೂಡಲು ಮುಂದಾಗುತ್ತಾರೆ.. ಈ ಸಂದರ್ಭದಲ್ಲಿ ಹಲವು ಸಮಸ್ಯೆಗಳು ಎದುರಾಗುತ್ತೆ.. ಹಿಡಿದ ಹಠವನ್ನ ಬಿಡದೆ ಈ ಸಹೋದರು ಆ ಸವಾಲುಗಳನ್ನ ಗೆದ್ದು ಚರಂತಿ ಚಿತ್ರವನ್ನ ಅಂದುಕೊಂಡ ಹಾಗೆ ಸಿದ್ದ ಮಾಡ್ತಾರೆ.. ಹಲವು ನವ ಕಲಾವಿದರಿಗೆ ಅವಕಾಶ ಕೊಟ್ಟಿದ್ದಾರೆ..

ತಮ್ಮ ನೆಲೆದ ಸೊಗಡಿನ ಜೊತೆಯಲ್ಲಿ ಈ ಸಿನಿಮಾನ್ನ ಸಿದ್ದ ಮಾಡಿ ನಿಮ್ಮ ಮುಂದೆ ತರ್ತಿದ್ದಾರೆ.. ಇದೇ ಗುರುವಾರ ಥಿಯೇಟರ್ ಅಂಗಳಕ್ಕೆ ಕಾಲಿಡುತ್ತಿರುವ ಈ ಸಹೋದರ ಸಿನಿಮಾಗೆ ಸಿನಿ ಪ್ರೇಮಿಗಳಾದ ನಿಮ್ಮ ಬೆಂಬಲದ ಅವಶ್ಯಕತೆಯು ಅಷ್ಟೆ ಇದೆ..

 

Share post:

Subscribe

spot_imgspot_img

Popular

More like this
Related

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ: HDK

ಜೆಡಿಎಸ್- ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರುತ್ತೆ, ಖರ್ಚಿಲ್ಲದೆ ಖಾತಾ ಮಾಡಿಕೊಡುತ್ತೇವೆ:...

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ

ಬೆಂಗಳೂರಿನ ಅಭಿವೃದ್ಧಿಗೆ ಬಿಜೆಪಿಯಿಂದ ಸಹಕಾರ ಸಿಗುತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್ ಬೇಸರ ಬಿಜೆಪಿಯವರಿಗೆ...

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ ನಿರ್ಬಂಧ

ವಾಹನ ಸವಾರರ ಗಮನಕ್ಕೆ: 21 ದಿನಗಳ ಕಾಲ ಈ ರಸ್ತೆಯಲ್ಲಿ ಸಂಚಾರ...

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು

ಸ್ನಾನದ ವೇಳೆ ಸಿಲಿಂಡರ್ ಲೀಕ್ ಆಗಿ ಉಸಿರುಗಟ್ಟಿ ಅಕ್ಕ-ತಂಗಿ ಸಾವು ಮೈಸೂರು:ಸ್ನಾನದ ವೇಳೆ...