ಶುಭ ಶುಕ್ರವಾರದಂದು ತೆರೆಗೆ ಬರಲಿದೆ ಕುಳ್ಳನ ಚೌಕ

Date:

ಕುಳ್ಳ ಎಂದಾಕ್ಷಣ ನೆನಪಿಗೆ ಬರೋದು ಸ್ಯಾಂಡಲ್‍ವುಡ್ ಎವರ್‍ಗ್ರೀನ್ ಕುಳ್ಳ ದ್ವಾರಕೀಶ್. ಬಣ್ಣದ ಲೋಕದಲ್ಲಿ ಕುಳ್ಳ ಎನ್ನುವ ಬಿರುದು ದ್ವಾರಕೀಶ್‍ಗೆ ಬಿಟ್ರೆ ಇನ್ಯಾರಿಗೂ ಕೊಡಲು ಸಾಧ್ಯವಿಲ್ಲ. ಕುಳ್ಳನ ಚೌಕ ಅಂಥಾ ಯಾಕೇಳ್ದೆ ಅಂತಾ ಅನ್ನಿಸಿರ್ಬೇಕಲ್ವಾ..? ಹೌದು ದ್ವಾರಕೀಶ ಬ್ಯಾನರ್‍ನಲ್ಲಿ ಮೂಡಿಬರುತ್ತಿರುವಂತಹ 50ನೇ ಚಿತ್ರವೇ ಈ ಚೌಕ.. ದ್ವಾರಕೀಶ್ ಚಿತ್ರ ಎಂದಾಕ್ಷಣ ಏನಾದ್ರು ವಿಶೇಷತೆ ಇದ್ದೆ ಇರುತ್ತೆ.. ಅದೇ ರೀತಿ ಈ ಚಿತ್ರವು ಹತ್ತು ಹಲವು ವಿಶೇಷತೆಗಳಿಂದ ಚಿತ್ರೀಕರಿಸಲಾಗಿದ್ದು ಈ ಚಿತ್ರ ನಾಳೆ ಬಿಗ್ ಸ್ಕ್ರೀನ್‍ನಲ್ಲಿ ಕಾಣಿಸಿಕೊಳ್ಳಲಿದೆ..

ಹತ್ತಾರು ವಿಶೇಷತೆಗಳು ಅಂತಾ ಮೇಲೆ ಪದಬಳಕೆ ಮಾಡಿದೀವಿ ಅದೇನ್ ವಿಶೇಷತೆ ಇದ್ಯಪ್ಪಾ ಈ ಚಿತ್ರದಲ್ಲಿ ಅಂತ ನೀವು ಕೇಳೋದಾದ್ರೆ ಇದನ್ನ ನಾವು ಹೇಳದೆ ಇದ್ರೆ ಸರಿ ಇರೊಲ್ಲಾ ಅಲ್ವಾ.. ಒಬ್ಬರೇ ಒಬ್ಬರು ಸಂಗೀತ ನಿರ್ದೇಶಕರನ್ನು ಇಟ್ಕೊಂಡು ಸಿನಿಮಾ ಮಾಡೋದೆ ಬಹುದೊಡ್ಡ ಸಾಹಸ ಅನ್ನೋ ಇಂದಿನ ಸಿನಿಮಾ ರಂಗದಲ್ಲಿ ದ್ವಾರಕೀಶ್‍ರ ಐವತ್ತನೆ ಚಿತ್ರವಾದ ಚೌಕದಲ್ಲಿ ಒಟ್ಟು 5 ಜನ ಸಂಗೀತ ನಿರ್ದೇಶಕರಿದ್ದಾರೆ. ಇನ್ನು ಈ ಚಿತ್ರಕ್ಕೆ 5 ಜನ ಕ್ಯಾಮರಾ ಮ್ಯಾನ್‍ಗಳು ಬೇರೆ ಇದ್ದಾರೆ ಅಂದ್ಮೇಲೆ ಕ್ಯಾಮರಾ ಚಮತ್ಕಾರ ಇನ್ನೆಂಗೆ ಇರ್ಬೋದು ನೀವೆ ಯೋಚಿಸಿ.. ಇದಿಷ್ಟೆ ಅಲ್ಲ ಈ ಚಿತ್ರಕ್ಕೆ ಟಾಪ್-5 ಲಿರಿಕ್ಸ್ ರೈಟರ್‍ಗಳು..! ಅಬ್ಬಾ ಎಂಥಾ ದೊಡ್ಡ ಟೆಕ್ನಿಕಲ್ ಟೀಮ್ ನೋಡಿ..! ಇಂತಹ ಸಾಹಾಸವನ್ನು ಸ್ಯಾಂಡಲ್‍ವುಡ್ ಇತಿಹಾಸದಲ್ಲೇ ಯಾರು ಮಾಡಿಲ್ಲ. ಈ ಸಾಹಸಕ್ಕೆ ಕೈಹಾಕಿರುವ ಏಕೈಕ ವ್ಯಕ್ತಿ ಅಂದ್ರೆ ಅದು ಕುಳ್ಳ ಮಾತ್ರ..!
ಇದಿಷ್ಟೆ ಆಗಿದ್ರೆ ಹೇಗೊ ಆಗೋದು ಬಿಡಿ. ಆದ್ರೆ ಇದ್ರಲ್ಲಿ ಇನ್ನು ಹಲವಾರು ವಿಶೇಷತೆಗಳನ್ನು ಹೊಂದಿದೆ. ಏನಪ್ಪಾ ಅಂದ್ರೆ ಈ ಚಿತ್ರದಲ್ಲಿ ನಾಲ್ಕು ಜನ ಹಿರೋಗಳು ನಾಲ್ಕು ಜನ ಹಿರೋಯಿನ್‍ಗಳು ಸ್ಕ್ರೀನ್ ಮೇಲೆ ರೋಮ್ಯಾನ್ಸ್ ಮಾಡಲಿದ್ದಾರೆ.. ದೂದ್ ಪೇಡ ದಿಗಂತ್, ಲವ್ಲಿ ಸ್ಟಾರ್ ಪ್ರೇಮ್, ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹಾಗೂ ವಿಜಯ್‍ರಾಘವೇಂದ್ರ ಲೀಡ್ ರೋಲ್‍ನಲ್ಲಿ ಕಾಣಿಸಿಕೊಂಡ್ರೆ ಇವ್ರಿಗೆ ನಾಯಕಿರಾಗಿ ಸ್ಯಾಂಡಲ್‍ವುಡ್ ಬೆಡಗಿಯರಾದ ಪ್ರಿಯಾಮಣಿ, ಭಾವನಾ, ಐಂದ್ರಿತಾ ರೈ, ದೀಪಾ ಸನ್ನಿಧಿ ಇರಲಿದ್ದಾರೆ..

ಇನ್ನೂ ಸ್ವಲ್ಪ ಮುಂದೆ ಹೋಗಿ ಚಿತ್ರದ ವಿಶೇಷತೆಯ ಬಗ್ಗೆ ಹೇಳುವುದಾದ್ರೆ ಚಿತ್ರದ ಕ್ಲೈಮ್ಯಾಕ್ಸ್ ನಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರದ್ದು ಸಕ್ಕತ್ ಕಿಕ್ ಕೊಡೋ ಫೈಟ್ ಇದೆ. ಜೊತೆಗೆ ಸ್ಯಾಂಡಲ್‍ವುಡ್ ಪವರ್‍ಸ್ಟಾರ್ ಪುನಿತ್ ರಾಜ್‍ಕುಮಾರ್ ಚಿತ್ರದ ಒಂದು ಸಾಂಗ್‍ಗೆ ಧ್ವನಿಯಾಗಿದ್ದಾರೆ. ಇನ್ನು ಕಿಚ್ಚಾ ಸುದೀಪ್ ಸಹ ಗೆಸ್ಟ್ ಅಫೀಯರೆನ್ಸ್ ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗೆ ಸ್ಯ್ಯಾಂಡಲ್‍ವುಡ್‍ನ ಸ್ಟಾರ್ ನಟರ ದಂಡೆ ಈ ಚಿತ್ರದಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದಾರೆ ಅಂದ್ರೆ ದ್ವಾರಕೀಶ್ ಅವರ 50ನೇ ಚಿತ್ರ ನಿಮ್ಮಲ್ಲಿ ಇನ್ನೆಷ್ಟು ಕುತೂಹಲ ಮೂಡಿಸಿರ್ಬೋದು ಅಲ್ವಾ..?
ಇಷ್ಟೆಲ್ಲಾ ವಿಶೇಷತೆಯನ್ನು ಹೊಂದಿರುವ ಈ ಚಿತ್ರಕ್ಕೆ ಸ್ಯಾಂಡಲ್‍ವುಡ್ ಎವರ್‍ಗ್ರೀನ್ ವಿಲನ್ ಎನ್ನಿಸಿಕೊಂಡಿರುವ ಸುಧೀರ್ ಪುತ್ರ ತರುಣ್ ಸುಧೀರ್ ಆ್ಯಕ್ಷನ್ ಕಟ್ ಹೇಳಿದ್ದಾರೆ.. ಈ ಚಿತ್ರ ಪಕ್ಕಾ ಮಾಸ್, ಥ್ರಿಲರ್, ರೋಮ್ಯಾಟಿಂಕ್ ಆಗಿರುವುದರಲ್ಲಿ ಮುಲಾಜೇ ಇಲ್ಲ.
ಇನ್ನು ಚಿತ್ರದ ಸಾಂಗ್ಸ್ ಗಳ ಬಗ್ಗೆ ಹೇಳುವುದಾದ್ರೆ ಅಲ್ಲಾಡ್ಸ್ ಅಲ್ಲಾಡ್ಸ್ ಸಾಂಗ್ ಸಿಕ್ಕಾಪಟ್ಟೆ ವೈರಲ್ ಆಗಿರುವುದು ನಿಮಗೆ ಗೊತ್ತೇ ಇದೆ. ಯೋಗರಾಜ್ ಭಟ್ ಲಿರಿಕ್ಸ್ ಹೇಗಿರುತ್ತೆ ಅಂಥ ಮತ್ತೊಮ್ಮೆ ಈ ಸಾಂಗ್‍ನಿಂದ ಪ್ರೂವ್ ಆಗಿದೆ. ಲಿರಿಕ್ಸ್ ಗೆ ವಿಜಯ್‍ಪ್ರಕಾಶ್ ಜೀವ ತುಂಬಿದ್ದಾರೆ.. ಇನ್ನೊಂದು ಸಾಂಗ್‍ನಲ್ಲಿ ತಂದೆಯ ಬಗ್ಗೆ ವರ್ಣನೆ ಮಾಡಿದ್ದು ಅದನ್ನು ಕೇಳಿದ್ರೆ ತಂದೆ ಜೀವನದಲ್ಲಿ ಎಷ್ಟು ಮುಖ್ಯ, ಅವರ ಪಾತ್ರವೇನು ಎನ್ನುವುದು ಪ್ರತಿಯೊಬ್ಬರಿಗೂ ಅರ್ಥವಾಗುತ್ತೆ ನಿಜವಾಗಿಯೂ ತಂದೆ ನಮಗೆ ಮೊದಲ ಹೀರೋ ಅನ್ಸತ್ತೆ. ಈ ಸಾಂಗ್ ಕೇಳ್ತಿದ್ರೆ ಪ್ರತಿಯೊಬ್ಬರ ಕಣ್ಣೀರು ಜಾರಿ ನೆಲಮುಟ್ಟೋದ್ರಲ್ಲಿ ಅನುಮಾನವೇ ಇಲ್ಲ. ಇಷ್ಟೆಲ್ಲಾ ಹೇಳ್ತಿದ್ದೇವೆ ಅಂದ್ರೆ ಈಗಾಗ್ಲೇ ನಿಮ್ಗೆ ಅದು ಯಾವ ಸಾಂಗ್ ಅಂತ ಗೋತ್ತಾಗಿರ್ಬೇಕಲ್ವಾ.. ಯಸ್ ಅದೇ ನೋಡಿ ಅಪ್ಪಾ ಐ ಲವ್ ಯು ಸಾಂಗ್. ವಿ ನಾಗೇಂದ್ರ ಪ್ರಸಾದ್ ಲಿರಿಕ್ಸ್ ಬರೆದಿರೋ ಈ ಸಾಂಗ್‍ನ ಅರ್ಜುನ್ ಜನ್ಯ ಕಂಪೋಸ್ ಮಾಡಿದ್ದಾರೆ.. ಈ ಸಾಂಗ್‍ಗೆ ಅನುರಾಧ ಭಟ್ ಹಾಡಿ ಪ್ರತಿಯೊಬ್ಬರ ಮನದಲ್ಲೂ ನೆಲೆಯೂರುವಂತೆ ಮಾಡಿದ್ದಾರೆ.. ಆಡೂ ಆಟ ಆಡೂ ಸಾಂಗ್ ಕೂಡ ದ್ವಾರಕೀಶ್ ಸಿನಿಮಾವನ್ನು ನೆನಪಿಸುತ್ತದೆ..
ಈ ಎಲ್ಲಾ ವಿಶೇಷತೆಗಳನ್ನು ಹೊತ್ತು ನಾಳೆ ತೆರೆ ಮೇಲೆ ಕಮಾಲ್ ಮಾಡಲು ಬರುತ್ತಿದೆ ಕುಳ್ಳನ ಚೌಕ. ಚೌಕಾಗೆ ಪ್ರೇಕ್ಷಕರು ಎಷ್ಟು ಅಂಕ ಕೊಡಲಿದ್ದಾರೆ ಅನ್ನೊಂದು ನಾಳೆ ಒಂದು ದಿನ ಕಾದು ನೋಡ್ಬೇಕಿದೆ.. ದ್ವಾರಕೀಶ್‍ರ ಈ ಸಾಹಾಸಕ್ಕೆ ಒಳ್ಳೆಯದಾಗ್ಲಿ ಎನ್ನುವುದೇ ಅಭಿಮಾನಿಗಳ ಆಶಯ..

  • ಹಾಲೇಶ್ ಎಂ.ಎಸ್ ಹುಣಸನಹಳ್ಳಿ

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...