No menu items!
5.2 C
Munich
Friday, April 24, 2026

ಒಂದು ವರ್ಷದಲ್ಲಿ ಒಂದು ರನ್ನನ್ನೂ ಗಳಿಸದೆ ದಾಖಲೆ ಬರೆದ ಟೀಂ ಇಂಡಿಯಾ ವೇಗಿ..!

Must read

ಅಂತರ್‍ರಾಷ್ಟ್ರಿಯ ಮಟ್ಟದ ಬೌಲರ್ ಅಂದ್ರೆ ಅವರು ಬೌಲಿಂಗ್ ವಿಭಾಗ ಬಿಟ್ರೆ ಬ್ಯಾಟಿಂಗ್‍ನಲ್ಲಿ ಅಷ್ಟೇನು ಗಮನ ಹರಿಸೊಲ್ಲ. ಆಗಿದ್ರೂ ಕೂಡ ಅವರ ಖಾತೆಯಲ್ಲಿ ಇಂತಿಷ್ಟು ಸ್ಕೋರ್ ಇರುತ್ತೆ. ಆದ್ರೆ ಟೀಂ ಇಂಡಿಯಾದ ಈ ಯುವ ವೇಗಿ ಅಂತರಾಷ್ಟ್ರೀಯ ಕ್ರಿಕೆಟ್‍ಗೆ ಪದಾರ್ಪನೆ ಮಾಡಿ ಇಲ್ಲಿಗೆ ಸುಮಾರು ಒಂದು ವರ್ಷ ಕಳೀತು. ಆದ್ರೆ ಆತನ ಖಾತೆಯಲ್ಲಿರೋ ರನ್ ಮಾತ್ರ ಶೂನ್ಯ..! ಹೌದು.. ಅಂತರಾಷ್ಟೀಯ ಮಟ್ಟದ ಟಿ-20ಯಲ್ಲಿ ಒಂದು ವರ್ಷದಲ್ಲಿ ಅತಿ ಹೆಚ್ಚು ವಿಕೆಟ್ ಪಡೆದು ದಾಖಲೆ ಬರೆದ ಯುವ ಬೌಲರ್ ಜಸ್ ಪ್ರೀತ್ ಬೂಮ್ರಾ ಬ್ಯಾಟಿಂಗ್ ವಿಭಾಗದಲ್ಲೂ ದಾಖಲೆ ಬರೆದಿದ್ದಾರೆ. ಅದೇನಂದ್ರೆ ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿ ಒಂದು ವರ್ಷವಾದ್ರೂ ಅವರ ಖಾತೆಯಲ್ಲಿ ಒಂದು ರನ್ನು ಕೂಡ ಇಲ್ಲ. ಇದೊಂದು ವಿಶೇಷ ದಾಖಲೆಯೂ ಹೌದು..! ಕಳೆದ ಏಕದಿನ ಹಾಗೂ ಟಿ-20 ಪಂದ್ಯಗಳನ್ನು ನೋಡೋದಾದ್ರೆ ಬೂಮ್ರಾ 11 ಏಕದಿನ ಮತ್ತು 23 ಟಿ20 ಪಂದ್ಯಗಳನ್ನಾಡಿದ್ದಾರೆ ಆದ್ರೆ ಇಲ್ಲಿಯವರೆಗೂ ಒಂದು ರನ್ನನ್ನೂ ಕೂಡ ಕಲೆ ಹಾಕಿಲ್ಲ. ಸುಮಾರು 6 ಬಾರಿ ಬ್ಯಾಟ್ ಹಿಡಿದು ಗ್ರೌಂಡ್‍ಗೆ ಇಳಿದಿದ್ರೂ ಕೂಡ ಬೂಮ್ರಾ ಬ್ಯಾಟ್ ಬೀಸಿ ರನ್ ಕಲೆ ಹಾಕಿಲ್ಲ. ಇದು ಕ್ರಿಕೇಟ್ ಅಭಿಮಾನಿಗಳಿಗೆ ಇದೊಂದು ಅಚ್ಚರಿ ಅನ್ನಿಸಿದ್ರು ಅದೆ ಸತ್ಯ ನೋಡಿ. ಇದಕ್ಕೆಲ್ಲಾ ಮುಖ್ಯ ಕಾರಣ ಬೂಮ್ರಾ ಬೌಲಿಂಗ್ ಕಡೆಗಿನ ಹೆಚ್ಚು ಗಮನವೆ ಅನ್ಬೋದು. ಯಾಕಂದ್ರೆ ಬೂಮ್ರಾ ಈವರೆಗಿನ ಏಕದಿನ ಪಂದ್ಯದಲ್ಲಿ 22 ವಿಕೆಟ್ ಹಾಗೂ ಟಿ-20ಯಲ್ಲಿ 33 ವಿಕೆಟ್ ಕಬಳಿಸಿ ಗಮನ ಸೆಳೆದಿದ್ದಾರೆ. ಇಂಗ್ಲೆಂಡ್ ವಿರುದ್ದದ ಸರಣಿಯಲ್ಲೂ ಕೂಡ ಬೂಮ್ರಾ ಪಾತ್ರ ಮಹತ್ವದ್ದಾಗಿತ್ತು.

Like us on Facebook  The New India Times

ತಾಜಾ ಸುದ್ದಿಗಾಗಿ ಇಂದೇ ವಾಟ್ಸಾಪ್ ಮಾಡಿ ರಿಜಿಸ್ಟರ್ ಆಗಿ : 97316 23333

POPULAR  STORIES :

ಬಜೆಟ್-2017: ಯಾವುದು ತುಟ್ಟಿ, ಯಾವುದು ಅಗ್ಗ..?

ಮ್ಯಾಟ್ರಿಮೋನಿ ವೆಬ್‍ಸೈಟ್‍ಗಳಲ್ಲಿ ನಂಬರ್ ಕೊಡೋಕು ಮುನ್ನ ಈ ಸ್ಟೋರಿನ ಮಿಸ್ ಮಾಡ್ದೆ ಓದಿ

ವರದಕ್ಷಿಣೆ ಕಿರುಕುಳದಿಂದ ಬೇಸತ್ತ ಯುವತಿ ಮಾಡಿದ್ದಾದ್ರೂ ಏನು..?

ಬಿಗ್‍ಬಾಸ್‍ನಲ್ಲಿ ಗೆದ್ದ ಹಣವನ್ನ ಏನ್ಮಾಡ್ತಾರಂತೆ ಗೊತ್ತಾ ಪ್ರಥಮ್..?

ಬಾಗಲಕೋಟೆ ಹುಡುಗರ ಮಾಸ್ತಿಗುಡಿ ಕ್ಲೈಮ್ಯಾಕ್ಸ್ ಗೆ ಸಿಕ್ತು ಸಖತ್ ರೆಸ್ಪಾನ್ಸ್..!

- Advertisement -spot_img

More articles

LEAVE A REPLY

Please enter your comment!
Please enter your name here

- Advertisement -spot_img

Latest article